For the best experience, open
https://m.kannadavani.news
on your mobile browser.
Advertisement

Breaking news : ಬ್ರಹ್ಮಗಂಟು ಧಾರವಾಹಿ ನಟಿ ಶೋಭಿತಾ ಆತ್ಮಹತ್ಯೆ

Breaking news /ಬೆಂಗಳೂರು:- ಕನ್ನಡ ಕಿರುತೆರೆಯ ಮೂಲಕ ಖ್ಯಾತ ಗಳಿಸಿದ್ದ ಬ್ರಹ್ಮಗಂಟು ಧಾರವಾಹಿ ನಟಿ ಶೋಭಿತಾ ಶಿವಣ್ಣ ವಿಧಿವಶರಾಗಿದ್ದಾರೆ .
07:32 PM Dec 01, 2024 IST | ಶುಭಸಾಗರ್
breaking news   ಬ್ರಹ್ಮಗಂಟು ಧಾರವಾಹಿ ನಟಿ ಶೋಭಿತಾ ಆತ್ಮಹತ್ಯೆ

Breaking news /ಬೆಂಗಳೂರು:- ಕನ್ನಡ ಕಿರುತೆರೆಯ ಮೂಲಕ ಖ್ಯಾತ ಗಳಿಸಿದ್ದ ಬ್ರಹ್ಮಗಂಟು ಧಾರವಾಹಿ ನಟಿ ಶೋಭಿತಾ ಶಿವಣ್ಣ ವಿಧಿವಶರಾಗಿದ್ದಾರೆ .

Advertisement

ಬ್ರಹ್ಮಗಂಟು ಸೇರಿದಂತೆ ಕನ್ನಡ ಹಲವು ಧಾರಾವಾಹಿ ,ಸಿನಿಮಾದಲ್ಲಿ ನಟಿಸಿದ್ದ ಶೋಭಿತಾ (shobitha) ಇಂದು( December- 1) ಭಾನುವಾರ ಹೈದ್ರಾಬಾದ್ ನಲ್ಲಿ ಸಾವಿಗೆ ಶರಣಾಗಿದ್ದಾರೆ.

ಮೂಲತಹಾ ಸಕಲೇಶಪುರದವರಾದ ಇವರು ಧಾರವಾಹಿ ( serial) ಮೂಲಕ ಕಿರುತರೆಗೆ ಪ್ರವೇಶಿಸಿ ನಂತರ ಸಿನಿಮಾದಲ್ಲೂ ನಟಿಸಿದ್ದರು.

*Breaking news : ಬ್ರಹ್ಮಗಂಟು ಧಾರವಾಹಿ ನಟಿ ಶೋಭಿತಾ ಆತ್ಮಹತ್ಯೆ**ಧಾರವಾಹಿ ,ಸಿನಿಮಾದಲ್ಲಿ ನಟಿಸಿ ಜನಮೆಚ್ಚಿದ ನಟಿ**ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ*https://kannadavani.news/kannada-television-actress-shobhita-shivanna-committed-self-death-in-hyderabad/

ಇದನ್ನೂ ಓದಿ:-ಅಂಕೋಲ|ಸಿನಿಮಾ ಚಿತ್ರಿಕರಣದ ವೇಳೆ ಹೆಜ್ಜೇನು ದಾಳಿ: ಇಬ್ಬರು ಗಂಭೀರ

2023 ರಲ್ಲಿ ವಿವಾಹವಾಗಿ ಹೈದ್ರಾಬಾದ್ ಸೇರಿದ್ದರು.
ಕರ್ನಾಟಕದಲ್ಲಿರುವ ಅವರ ಕುಟುಂಬಸ್ಥರು ಹೈದರಾಬಾದ್‌ನ ಶೋಭಿತಾ ನಿವಾಸಕ್ಕೆ ತೆರಳುತ್ತಿದ್ದಾರೆ.

ಇನ್ನು ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದ ಶೋಭಿತಾ ಶಿವಣ್ಣ ವಂದನಾ, ಅಟೆಂಪ್ಟ್‌ ಟು ಮರ್ಡರ್‌ ಹಾಗೂ ಜಾಕ್‌ಪಾಟ್ ಸಿನಿಮಾಗಳಲ್ಲಿ ನಟಿಸಿದ್ದರು. ಮಾತ್ರವಲ್ಲದೇ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದು ಗೌಡ ಜೊತೆ ಶತಭಿಷೆ ಚಿತ್ರದಲ್ಲೂ ನಟಿಸಿದ್ದರು. ಒಟ್ಟು 12 ಕ್ಕೂ ಹೆಚ್ಚು ಧಾರವಾಹಿ, ಸಿನಿಮಾ ದಲ್ಲಿ ನಟಿಸಿ ಮನೆಮಾತಾಗಿದ್ದರು.

ಕಳೆದ ವರ್ಷ ಅಂದರೆ 2023ರ ಮೇ 22ರಂದುದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಶೋಭಿತಾ ಶಿವಣ್ಣ, ಮದುವೆ ಬಳಿಕ ಪತಿಯ ಜೊತೆ ಹೈದರಾಬಾದ್‌ನಲ್ಲಿ ವಾಸವಾಗಿದ್ದರು.

*Breaking news : ಬ್ರಹ್ಮಗಂಟು ಧಾರವಾಹಿ ನಟಿ ಶೋಭಿತಾ ಆತ್ಮಹತ್ಯೆ**ಧಾರವಾಹಿ ,ಸಿನಿಮಾದಲ್ಲಿ ನಟಿಸಿ ಜನಮೆಚ್ಚಿದ ನಟಿ**ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ*https://kannadavani.news/kannada-television-actress-shobhita-shivanna-committed-self-death-in-hyderabad/

ಇವರು ನಿನ್ನೆ ರಾತ್ರಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದ್ದು ಮರಣೋತ್ತರ ಪರೀಕ್ಷೆ ಹೈದ್ರಾಬಾದ್ ನಲ್ಲಿ ನಡೆಯಲಿದೆ.ನಂತರ ಶವವನ್ನು ಬೆಂಗಳೂರಿಗೆ ಕರೆತರಲಿದ್ದಾರೆ.

ಇದನ್ನೂ ಓದಿ:-Actor Darshan ಕೋಪ ಬಿಡಬೇಕು,ಒಳ್ಳೆದಾರಿಯಲ್ಲಿ ಇದ್ರೆ ಅದು ಚರಿತ್ರೆ ,ಕೆಟ್ಟ ದಾರಿ ಯಲ್ಲಿ ಇದ್ರೆ ರಕ್ತ ಚರಿತ್ರೆ- ಓಂ ಸಾಯಿಪ್ರಕಾಶ್

ಇನ್ನು ಆತ್ಮಹತ್ಯೆಗೆ ನಿಕರ ಕಾರಣ ತಿಳಿದಿಲ್ಲ. ಆದರೂ ಸಂಸಾರದ ಬಿರುಕು ಕಾರಣ ಎನ್ನಲಾಗುತಿದ್ದು ತನಿಖೆ ನಂತರ ತಿಳಿಯಬೇಕಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ