Kantara-1 | ಸಿನಿಮಾದ ಒಂದು ತಪ್ಪು ರಿಷಬ್ ಶಟ್ಟಿಗೆ ಕೊಡ್ತು ಶಾಕ್! ಏನದು ಗೊತ್ತಾ?
Kantara-1 | ಸಿನಿಮಾದ ಒಂದು ತಪ್ಪು ರಿಷಬ್ ಶಟ್ಟಿಗೆ ಕೊಡ್ತು ಶಾಕ್! ಏನದು ಗೊತ್ತಾ?
Kantara /ಬೆಂಗಳೂರು ( october 12):-ರಿಷಬ್ ಶೆಟ್ಟಿ ಅವರ ಕಾಂತಾರ ಪ್ರೀಕ್ವಲ್ ಸಿನಿಮಾ ಭಾರಿ ವೇಗದಲ್ಲಿ ಮುನ್ನುಗ್ಗುತ್ತಿದೆ. ಇದಾಗಲೇ ಹಲವು ದಾಖಲೆಗಳನ್ನು ಈ ಚಿತ್ರ ಉಡೀಸ್ ಮಾಡಿದೆ. ಇದಾಗಲೇ 590 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿರೋ ಚಿತ್ರ ಎಲ್ಲಾ ಭಾಷೆಗಳಲ್ಲಿಯೂ ಮುನ್ನುಗ್ಗುತ್ತಲೇ ಸಾಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋ ರಿಷಬ್ ಶೆಟ್ಟಿ (Rishab Shetty), ಈಗ ಇನ್ನೂ ಒಂದು ಹಂತ ಮೇಲಕ್ಕೆ ಏರಿದ್ದಾರೆ. ವಿವಿಧ ಭಾಷೆಗಳ ಮಾಧ್ಯಮಗಳಿಂದಲೂ ರಿಷಬ್ ಶೆಟ್ಟಿ ಟೀಮ್ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ಸ್ಯಾಂಡಲ್ವುಡ್ ಚಿತ್ರವನ್ನು ಬಹುದೊಡ್ಡ ಮಟ್ಟಿಗೆ ಕೊಂಡೊಯ್ದಿರುವ ಕೀರ್ತಿ ರಿಷಬ್ ಶೆಟ್ಟಿ ಅವರಿಗೆ ಸಲ್ಲುತ್ತಿದೆ. ಇದೇ ಕಾರಣಕ್ಕೆ ವಿವಿಧ ಭಾಷೆಗಳ ಸ್ಟಾರ್ ನಟರು ಕೂಡ ಮೆಚ್ಚುಗೆಗಳ ಸುರಿಮಳೆಯನ್ನೇಗೈಯುತ್ತಿದ್ದಾರೆ.
ಚಿಕ್ಕ ತಪ್ಪು ನುಸುಳಿಯೇ ಬಿಟ್ಟಿದೆ!
ಅವೆಲ್ಲವೂ ಸರಿ. ಆದರೂ ಒಂದಷ್ಟು ಮಂದಿಯ ಕಣ್ಣಿಗೆ ಈ ಚಿತ್ರದಲ್ಲಿ ಚಿಕ್ಕ ತಪ್ಪು ಕಂಡೇ ಬಿಟ್ಟಿದೆ. ಇದು ಚಿಕ್ಕ ತಪ್ಪು ಎನ್ನಿಸಿದರೂ, ಇಷ್ಟು ದೊಡ್ಡ ಮಟ್ಟದ ಸಿನಿಮಾ ಮಾಡುವ ಸಂದರ್ಭದಲ್ಲಿ ಚಿತ್ರತಂಡವು ಹೇಗೆ ಎಚ್ಚರಿಕೆಯಿಂದ ಇರಬೇಕು ಎನ್ನುವುದಕ್ಕೂ ಇದು ಉದಾಹರಣೆಯಾಗಿದೆ. ಬಹುಶಃ ರಿಷಬ್ ಶೆಟ್ಟಿ ಅಥವಾ ಅವರ ಟೀಮ್ನವರಿಗೇ ಈ ತಪ್ಪು ಕಂಡಿದ್ಯೋ ಇಲ್ವೋ ಗೊತ್ತಿಲ್ಲ. ಆದರೂ ತಪ್ಪಂತೂ ಆಗಿದ್ದು ನಿಜ.
ಪ್ಲಾಸ್ಟಿಕ್ ಕ್ಯಾನ್.!

ಅದೇನಪ್ಪಾ ಎಂದರೆ, ಪ್ಲಾಸ್ಟಿಕ್ ಕ್ಯಾನ್! ಬ್ರಹ್ಮಕಲಶದ ಹಾಡಿನ ಸಮುದಾಯ ಊಟದ ದೃಶ್ಯದಲ್ಲಿ 20 ಲೀಟರ್ ನೀರಿನ ಕ್ಯಾನ್ ಗೋಚರಿಸುತ್ತದೆ. ಇದೇನು ಮಹಾದೊಡ್ಡ ತಪ್ಪು ಅಂತೀರಾ? ಅಷ್ಟಕ್ಕೂ ಈ ಚಿತ್ರದ ಕಥೆ ಇರುವುದೇ 4 ನೇ ಶತಮಾನದ ಕದಂಬ ರಾಜವಂಶದ ಸನ್ನಿವೇಶ. ಆ ಸಮಯದಲ್ಲಿ ಇದದ್ದು ಕಂಚು, ಬೆಳ್ಳಿ, ಚಿನ್ನ ಇಂಥದ್ದೇ ವಿನಾ ಪ್ಲಾಸ್ಟಿಕ್ ಬಳಕೆ ಇರಲೇ ಇಲ್ಲ. ಪ್ಲಾಸ್ಟಿಕ್ ಬಳಕೆ ಶುರುವಾಗಿ, ಪರಿಸರ ನಾಶ ಮಾಡುವ ಹಂತಕ್ಕೆ ಬಂದದ್ದು ಬಹಳ ಶತಮಾನಗಳ ನಂತರವಷ್ಟೇ. ಆದರೆ, ಶೂಟಿಂಗ್ ಸಮಯದಲ್ಲಿ ಅಲ್ಲಿಯೇ ಇಟ್ಟಿದ್ದ 20 ಲೀಟರ್ ನೀರಿನ ಕ್ಯಾನ್ ಈ ದೃಶ್ಯದ ಜೊತೆಗೂ ಸೇರಿಹೋಗಿದೆ.