Kantara | ಕಾಂತಾರ ಸಿನಿಮಾ ನೋಡಿದವರು ಟಿಕೇಟ್ ಜೋಪಾನವಾಗಿಡಿ| ಮರಳಿ ಬರಲಿದೆ ಹೆಚ್ಚುವರಿ ಹಣ
Kantara | ಕಾಂತಾರ ಸಿನಿಮಾ ನೋಡಿದವರು ಟಿಕೇಟ್ ಜೋಪಾನವಾಗಿಡಿ| ಮರಳಿ ಬರಲಿದೆ ಹೆಚ್ಚುವರಿ ಹಣ
ಬೆಂಗಳೂರು (ಅ.03): ದುಬಾರಿ ದರ ನೀಡಿ ಕಾಂತಾರ(kantara) ಸಿನಿಮಾ ನೋಡಿದ್ರಾ? ಹಾಗಿದ್ರೆ ನೀವು ಕರೀದಿ ಮಾಡಿದ ಟಿಕೇಟ್ ಜೋಪಾನವಾಗಿಡಿ. ಏಕೆಂದರೇ ಹೆಚ್ಚಿನ ಹಣ ಹಿಂದಿರುಗಿಸಲು ರಾಜ್ಯ ಸರ್ಕಾರ ಸಿದ್ದತೆ ಮಾಡಿಕೊಂಡಿದೆ.
ಹೌದು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್ ದರವನ್ನು ₹200ಕ್ಕೆ ನಿಗದಿಪಡಿಸುವ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

ನ್ಯಾಯಾಲಯದ ಅಂತಿಮ ತೀರ್ಪು ಸರ್ಕಾರದ ಪರವಾಗಿ ಬಂದರೆ, ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿದ ಗ್ರಾಹಕರಿಗೆ ಹಣ ವಾಪಸ್ ಆಗುವ ಸಾಧ್ಯತೆ ಇದೆ. ಗ್ರಾಹಕರ ಹಿತಾಸಕ್ತಿ ಕಾಪಾಡಲು ಮುಂದಾಗಿರುವ ಕರ್ನಾಟಕ (karnataka) ರಾಜ್ಯ ಸರ್ಕಾರ, ಈ ಕುರಿತು ಸಾರ್ವಜನಿಕ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಪ್ರಕಟಣೆ ಪ್ರತಿ ಇಲ್ಲಿದೆ:-

ಹೈಕೋರ್ಟ್ ಆದೇಶದಲ್ಲಿ ಹಣ ವಾಪಸಾತಿಯ ಸ್ಪಷ್ಟ ನಿರ್ದೇಶನ:
ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಇಂಡಿಯಾ ಸಲ್ಲಿಸಿದ್ದ ರಿಟ್ ಅಪೀಲು (ಸಂಖ್ಯೆ: 1623/2025) ಕುರಿತು ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಧಾನ ಪೀಠವು ದಿನಾಂಕ 30.09.2025ರಂದು ಮಹತ್ವದ ಆದೇಶ ನೀಡಿದೆ.
Karnataka|ಸೆಲ್ಫಿ ತೆಗೆಯಲು ಹೋಗಿ ಸಮುದ್ರಪಾಲಾದ ಶಿವಮೊಗ್ಗದ ಪ್ರವಾಸಿಗ
ನ್ಯಾಯಾಲಯವು ಟಿಕೆಟ್ ದರಕ್ಕೆ ವಿಧಿಸಿದ್ದ ₹200 ಮಿತಿಯ ತಡೆಯಾಜ್ಞೆಯನ್ನು ಮುಂದುವರೆಸಿದೆ. ಆದರೆ, ಅಂತಿಮ ತೀರ್ಪು ಬರುವವರೆಗೆ ಗ್ರಾಹಕರಿಂದ ಸಂಗ್ರಹವಾಗುವ ಹೆಚ್ಚುವರಿ ಹಣವನ್ನು ನಿರ್ವಹಿಸುವ ಕುರಿತು ಮಲ್ಟಿಪ್ಲೆಕ್ಸ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇನ್ನು ರಾಜ್ಯದಲ್ಲಿ ಕಾಂತಾರ ಚಾಪ್ಟರ್ -1 ಸಿನಿಮಾಗೆ ಬೆಂಗಳೂರು ಮಲ್ಟಿಪ್ಲೆಕ್ಸ್‌ನಲ್ಲಿ ಕನಿಷ್ಠ 350 ರೂ.ನಿಂದ 1,200 ರೂ.ವರೆಗೆ ಟಿಕೆಟ್ ನಿಗದಿ ಮಾಡಲಾಗಿದೆ. ಕೋರ್ಟ್ ಆದೇಶ ಸರ್ಕಾರ ಪರವಾದರೆ ಬಾಕಿ ಹಣ ವಾಪಸ್ ವೀಕ್ಷಕರಿಗೆ ಬರಲಿದೆ. ಹೀಗಾಗಿ ನೀವು ಖರೀದಿಸಿದ ಟಿಕೇಟ್ ಜೋಪಾನವಾಗಿಡಿ. ತೀರ್ಪು ಸರ್ಕಾರದ ಪರ ಬಂದರೆ ನಿಮ್ಮ ಹೆಚ್ಚುವರಿ ಹಣ ಮರಳಿ ಬರಲಿದೆ.