For the best experience, open
https://m.kannadavani.news
on your mobile browser.
Advertisement

Karavali Train ಮತ್ಸ್ಯ ಗಂಧ ಟ್ರೈನ್ ಗೆ ಆಧುನಿಕ ಸ್ಪರ್ಶ :ಫೆ.17 ಕ್ಕೆ ಪ್ರಾರಂಭ.

ಕಾರವಾರ/ಉಡುಪಿ:- 1998 ರ ಮೇ 1 ರಿಂದ ಕರಾವಳಿ ಭಾಗದಲ್ಲಿ ಸಂಚಾರ ಆರಂಭಮಾಡಿದ್ದ ಮತ್ಸ್ಯ ಗಂಧ ಟ್ರೈನ್ ಗೆ (Matsya Gandha Train)ಆಧುನಿಕ ಟಚ್ ನೀಡಲಾಗಿದ್ದು, ಜರ್ಮನ್ ತಂತ್ರಜ್ಞಾನದ LHB ಕೋಚ್ ಅಳವಡಿಸಲಾಗಿದ್ದು ಫೆಬ್ರವರಿ 17 ರಿಂದ ಸಂಚಾರ ಪ್ರಾರಂಭಿಸಲಿದೆ.
11:48 PM Feb 10, 2025 IST | ಶುಭಸಾಗರ್
karavali train ಮತ್ಸ್ಯ ಗಂಧ ಟ್ರೈನ್ ಗೆ ಆಧುನಿಕ ಸ್ಪರ್ಶ  ಫೆ 17 ಕ್ಕೆ ಪ್ರಾರಂಭ
Matsya Gandha Train Gets a Modern Touch

Karavali Train ಮತ್ಸ್ಯ ಗಂಧ ಟ್ರೈನ್ ಗೆ ಆಧುನಿಕ ಸ್ಪರ್ಶ :ಫೆ.17 ಕ್ಕೆ ಪ್ರಾರಂಭ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ/ಉಡುಪಿ:- 1998 ರ ಮೇ 1 ರಿಂದ ಕರಾವಳಿ ಭಾಗದಲ್ಲಿ ಸಂಚಾರ ಆರಂಭಮಾಡಿದ್ದ ಮತ್ಸ್ಯ ಗಂಧ ಟ್ರೈನ್ ಗೆ (Matsya Gandha Train)26 ವರ್ಷದ ನಂತರ  ಆಧುನಿಕ ಟಚ್ ನೀಡಲಾಗಿದ್ದು, ಜರ್ಮನ್ ತಂತ್ರಜ್ಞಾನದ LHB ಕೋಚ್ ಅಳವಡಿಸಲಾಗಿದ್ದು ಫೆಬ್ರವರಿ 17 ರಿಂದ ಸಂಚಾರ ಪ್ರಾರಂಭಿಸಲಿದೆ.

ಮತ್ಸ್ಯ ಗಂಧ ಟ್ರೈನ್ ನಲ್ಲಿನ ಅವ್ಯವಸ್ಥೆ ಕುರಿತು ಸಾರ್ವಜನಿಕರಿಂದ ಬಹಳಷ್ಟು ದೂರುಗಳು ಬರುತ್ತಲೇ ಇದ್ದವು. ಸ್ವಚ್ಛತೆ ಇಲ್ಲದ ಹಾಗೂ ಹಾಳಾದ ಆಸನಗಳು ಹೀಗೆ ಹತ್ತು ಹಲವು ದೂರುಗಳು ರೈಲ್ವೆ ಇಲಾಖೆಗೆ ಬರುತಿದ್ದವು.

ಇದನ್ನೂ ಓದಿ:-Vande Bharat train| ಗೋವಾ ಮಂಗಳೂರು ದರ ವಿವರ ನೋಡಿ

ಈ ದೂರುಗಳನ್ನು ಪರಿಗಣನೆಗೆ ತೆಗೆದುಕೊಂಡ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ವಿ .ಸೋಮಣ್ಣನವರು ರೈಲಿಗೆ ಹೊಸ ಕೋಚ್ ಅಳವಡಿಸುವ ಜೊತೆ ಆಧುನಿಕ ತಂತ್ರಜ್ಞಾನದ ಹೊಸ ಕೋಚ್ ಅಳವಡಿಸಲು ಆದೇಶಿಸಿದ್ದರು.

ಹೋಸ ಕೋಚ್ ಸಿದ್ದ.

ಈ ಆದೇಶ ಬೆನ್ನಲ್ಲೇ ಇದೀಗ ಜರ್ಮನ್ ತಂತ್ರಜ್ಞಾನದ LHB ಕೋಚ್ ಅಳವಡಿಸಲಾಗಿದ್ದು ,ಇದು ಅತೀ ಕಡಿಮೆ ಶಬ್ದ ಮಾಡುತ್ತದೆ. ಇದಲ್ಲದೇ ಉತ್ತಮ ಶೌಚಾಲಯ ವ್ಯವಸ್ಥೆ ಸಹ ಇದರಲ್ಲಿ ಇರಲಿದೆ.

ಫೆ.17 ರಿಂದ ಹೊಸ ಕೋಚ್ ಅಳವಡಿಸಿದ ರೈಲು ಉಡುಪಿಯಿಂದ ಹೊರಡಲಿದೆ. ಈ ರೈಲು ಮಂಗಳೂರು-ಉಡುಪಿ- ಕಾರವಾರ -ಗೋವಾ ಮಾರ್ಗವಾಗಿ ಮುಂಬೈ ತೆರಳಲಿದೆ. 1998 ರ ಮೇ1 ರಿಂದ ಕಾರ್ಯನಿರ್ವಹಿಸುತಿದ್ದು ಇದೀಗ ಮೊಟ್ಟ ಮೊದಲಬಾರಿಗೆ ಹೊಸ ತಂತ್ರಜ್ಞಾನ ಹೊಂದಿರುವ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ರೈಲಾಗಿದೆ.

Astrology advertisement
Astrology advertisement

ಇದನ್ನೂ ಓದಿ:-Karnataka ಹೊಸ ಪ್ರಬೇಧದ ಪರಾವಲಂಬಿ ಕಣಜ ಪತ್ತೆ

ಇದರ ಜೊತೆ ಮಂಗಳೂರು ಎಕ್ಸ್ ಪ್ರಸ್ ರೈಲಿಗೂ ಹೊಸ ತಂತ್ರಜ್ಞಾನ ಹೊಂದಿದ ಕೋಚ್ ಗಳನ್ನು ಹೊಂದಿಸಲಾಗುವುದು ಎಂದು ಕೊಂಕಣ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಮತ್ಸ್ಯ ಗಂಧ ಟ್ರೈನ್ ಬಗ್ಗೆ ಮಾಹಿತಿ: -

ಮತ್ಸ್ಯ ಗಂಧ ಸೂಪರ್ ಫಾಸ್ಟ್ ಟ್ರೈನ್ ಆಗಿದೆ. ಇದು ಮಹಾರಾಷ್ಟ್ರ, ಗೋವಾ,ಕರ್ನಾಟಕ ರಾಜ್ಯಗಳ ಕರಾವಳಿಯಲ್ಲಿ ಸಂಚರಿಸುತ್ತದೆ.

21 ನಿಲ್ದಾಣವನ್ನು ಹೊಂದಿರುವ ಇದು 883 ಕಿ.ಮೀ. ಸಂಚಾರ ಮಾಡುತ್ತದೆ. ಮಂಗಳೂರಿನಿಂದ ಮಹಾರಾಷ್ಟ್ರ ಕ್ಕೆ 16 ಗಂಟೆಯಲ್ಲಿ ಸಂಚಾರ ಮಾಡುತ್ತದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ