For the best experience, open
https://m.kannadavani.news
on your mobile browser.
Advertisement

Karnataka| ಮುಖ್ಯಮಂತ್ರಿ ಬದಲಾವಣೆ- ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ !

Karnataka Deputy CM DK Shivakumar has warned Congress workers against discussing leadership change in the state. Amid fresh speculation of replacing CM Siddaramaiah, Shivakumar said such talks damage the party and notices will be issued against those making statements.
11:21 PM Oct 02, 2025 IST | ಶುಭಸಾಗರ್
Karnataka Deputy CM DK Shivakumar has warned Congress workers against discussing leadership change in the state. Amid fresh speculation of replacing CM Siddaramaiah, Shivakumar said such talks damage the party and notices will be issued against those making statements.
karnataka  ಮುಖ್ಯಮಂತ್ರಿ ಬದಲಾವಣೆ  ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ

Karnataka| ಮುಖ್ಯಮಂತ್ರಿ ಬದಲಾವಣೆ- ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ !

Advertisement

ಬೆಂಗಳೂರು:- ಮುಖ್ಯಮಂತ್ರಿ ಬದಲಾವಣೆ ಕುರಿತು ಯಾರೂ ಮಾತಾಡಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

 ತಮ್ಮನ್ನು ಮುಖ್ಯಮಂತ್ರಿ ಮಾಡುವಂತೆ ಕಾಂಗ್ರೆಸ್ ಶಾಸಕರಿಂದ ಪುನಃ ಬೇಡಿಕೆಗಳು ಹಾಗೂ ಹೇಳಿಕೆ ಬಂದ ಹಿನ್ನಲೆಯಲ್ಲಿ  ಡಿಕೆ ಶಿವಕುಮಾರ್ ಈ ಹೇಳಿಕೆ ನೀಡಿದ್ದಾರೆ.

 ಈ ರೀತಿಯ ಹೇಳಿಕೆಗಳು ಪಕ್ಷಕ್ಕೆ ಹಾನಿ ಉಂಟುಮಾಡುತ್ತವೆ. ಇಂತಹ ಹೇಳಿಕೆ ನೀಡುವವರ ವಿರುದ್ಧ ನೋಟಿಸ್ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

India| ನಾಲ್ಕು ವರ್ಷದ ನಂತರ ಚೀನಾಕ್ಕೆ ನೇರ ವಿಮಾನ ಹಾರಾಟಕ್ಕೆ ಸಮ್ಮತಿ

ಅವರ ಈ ಎಚ್ಚರಿಕೆ, ತಮ್ಮ ಸಂಬಂಧಿ ಹಾಗೂ ಕಾಂಗ್ರೆಸ್ ಶಾಸಕರಾದ ಹೆಚ್.ಡಿ.ರಂಗನಾಥ್ ಮತ್ತು ಮಾಜಿ ಮಂಡ್ಯ ಸಂಸದ ಎಲ್.ಆರ್.ಶಿವರಾಮೆಗೌಡ ಅವರು ಮುಂದಿನ ತಿಂಗಳು ನಾಯಕತ್ವ ಬದಲಾವಣೆ ಆಗಲಿದೆ ಎಂದು ಹೇಳಿದ ಬಳಿಕ ಬಂದಿದೆ.

 ಶಿವಕುಮಾರ್ ಅವರು ಈ ಹೇಳಿಕೆಯನ್ನು ತಳ್ಳಿ ಹಾಕಿದ್ದು ಯಾರಿಗೂ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುವ ಹಕ್ಕಿಲ್ಲ, ಕುಣಿಗಲ್ ಶಾಸಕ ಹೆಚ್.ಡಿ.ರಂಗನಾಥ್ ಅವರಿಗೂ ಅಲ್ಲ. ನಾನು ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಅವರಿಗೆ ನೋಟಿಸ್ ನೀಡಲು ಹೇಳಿದ್ದೇನೆ” ಎಂದು ಸ್ಪಷ್ಟಪಡಿಸಿದರು.

Joida | ರಾಮನಗರದಲ್ಲಿ ಸರಣಿ ಅಪಘಾತ-ಟೆಂಪೋ ಚಾಲಕ ಸಾವು ,ಐವರಿಗೆ ಗಂಭೀರ

ನಾಯಕತ್ವ ಬದಲಾವಣೆ ಕುರಿತ ಚರ್ಚೆ ಮತ್ತೆ ಚುರುಕಾದ ಹಿನ್ನೆಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ತಾವು ಪೂರ್ಣ ಐದು ವರ್ಷದ ಅವಧಿ ಪೂರೈಸುವುದಾಗಿ ಘೋಷಿಸಿದ್ದರು.

Honnavar |ಮನೆಕೆಲಸದಾಕೆ ಮುಂದೆ ಬೆತ್ತಲಾದ ಮನೆ ಮಾಲೀಕ-ದೂರು ದಾಖಲು

ಸಿದ್ದರಾಮಯ್ಯ ಅವರ ಹೇಳಿಕೆಯಿಂದ ವಿಷಯ ಮುಗಿದಿದೆ. ನಾವು ಇಬ್ಬರೂ ಪಕ್ಷದ ಶಿಸ್ತಿನ ಸೈನಿಕರು. ಹೈಕಮಾಂಡ್ ಹೇಳುವುದೇ ಅಂತಿಮ ಎಂದು ಡಿಕೆ ಶಿವಕುಮಾರ್ ಹೇಳಿದರು.

“ಅಧಿಕಾರ ಹಂಚಿಕೆ ಕುರಿತು ಚರ್ಚೆ ಎಲ್ಲಿದೆ? ಅದನ್ನು ನಾನೇ ಹೇಳುತ್ತಿದ್ದೇನೆ. ಇಂತಹ ಯಾವುದೇ ಚರ್ಚೆ ನಡೆಯಬಾರದು,” ಎಂದು ತಮ್ಮ ಬೆಂಬಲಿಗರಿಗೆ ಎಚ್ಚರಿಸಿದ ಅವರು, ಸಿದ್ದರಾಮಯ್ಯ ಅವರು ಹೇಳಿದ್ದು ಅಂತಿಮ. ಅವರ ಹೇಳಿಕೆಯ ಬಳಿಕ ಯಾರೂ ಈ ಬಗ್ಗೆ ಮಾತನಾಡಬಾರದು. ನನ್ನ ಅಥವಾ ಅವರ ಪರವಾಗಿ ಮಾತನಾಡುವವರು ಪಕ್ಷಕ್ಕೆ ಹಾನಿ ಮಾಡುತ್ತಿದ್ದಾರೆ. ಇದು ಪಕ್ಷವಿರೋಧಿ ಚಟುವಟಿಕೆ ಎಂದರು.

ಸಿದ್ದರಾಮಯ್ಯ ಅವರು ‘ನಾನು ಮುಖ್ಯವಲ್ಲ, ಪಕ್ಷವೇ ಮುಖ್ಯ’ ಎಂದಿದ್ದಾರೆ. ನಾವು ಪಕ್ಷ ಹೇಳಿದುದನ್ನೇ ಪಾಲಿಸಬೇಕು. ಅದೇ ಸರಿಯಾದ ದಾರಿ ಎಂದರು.

ಇದಲ್ಲದೆ, ಬಿಜೆಪಿ ನಾಯಕರ ಮೇಲೆ ಟೀಕೆ ಮಾಡಿದ ಅವರು, ಬಿಜೆಪಿಯಲ್ಲಿ ಕ್ರಾಂತಿ ಅಂತಿಮಗೊಂಡಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಅವರ ಒಳಕ್ರಾಂತಿಯನ್ನೇ ಅವರು ಚರ್ಚಿಸಲಿ. ಅವರಿಗೆ ನಾನು ಸೂಜಿ ಮತ್ತು ದಾರ ಕೊಡುತ್ತೇನೆ  ಪಕ್ಷದ ಹರಿದ ಭಾಗವನ್ನು ಹೊಲಿಯಲಿ ಎಂದು ವ್ಯಂಗ್ಯವಾಡಿದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ