For the best experience, open
https://m.kannadavani.news
on your mobile browser.
Advertisement

Breaking : ಬೆಂಗಳೂರು ಕಾಲ್ತುಳಿತ ದುರಂತ ಮೃತ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಬೆಂಗಳೂರು: ಆರ್‌ಸಿಬಿ (RCB) ಗೆಲುವು ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಸಂಭವಿಸಿದ ಕಾಲ್ತುಳಿತಕ್ಕೆ (Stampede) 11 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣಕ್ಕೀಡಾಗಿದ್ದಾರೆ. 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
09:52 PM Jun 04, 2025 IST | ಶುಭಸಾಗರ್
ಬೆಂಗಳೂರು: ಆರ್‌ಸಿಬಿ (RCB) ಗೆಲುವು ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಸಂಭವಿಸಿದ ಕಾಲ್ತುಳಿತಕ್ಕೆ (Stampede) 11 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣಕ್ಕೀಡಾಗಿದ್ದಾರೆ. 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
breaking   ಬೆಂಗಳೂರು ಕಾಲ್ತುಳಿತ ದುರಂತ ಮೃತ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ
Cm Siddaramaiah

Breaking : ಬೆಂಗಳೂರು ಕಾಲ್ತುಳಿತ ದುರಂತ ಮೃತ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

Advertisement

ಬೆಂಗಳೂರು: ಆರ್‌ಸಿಬಿ (RCB) ಗೆಲುವು ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಸಂಭವಿಸಿದ ಕಾಲ್ತುಳಿತಕ್ಕೆ (Stampede) 11 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣಕ್ಕೀಡಾಗಿದ್ದಾರೆ. 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕಾಲ್ತುಳಿತದ ಸಂದರ್ಭದಲ್ಲಿನ ಚಿತ್ರ

ಬೌರಿಂಗ್‌ ಆಸ್ಪತ್ರೆಯಲ್ಲಿ 5 ಹಾಗೂ ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ್‌ ಆಸ್ಪತ್ರೆಯಲ್ಲಿ ಒಬ್ಬರು ಅಭಿಮಾನಿಗಳು ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮೃತಪಟ್ಟವರು ಯಲಹಂಕ ಮೂಲದ ಓರ್ವ ಯುವತಿ ಹಾಗೂ 6 ಯುವಕರು ಎಂದು ಗುರುತಿಸಲಾಗಿದ್ದು ಉಳಿದವರ ಮಾಹಿತಿ ಬರಬೇಕಿದೆ.

ಇನ್ನು ಈ ಘಟನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಮೃತ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ.

ಇಂದು ಸಂಜೆ ಘಟನೆ ಕುರಿತು ಕಾವೇರಿ ನಿವಾಸದಲ್ಲಿ ಮಾಧ್ಯಮ ಗೋಷ್ಟಿ ನಡೆಸಿದ ಮುಖ್ಯಮಂತ್ರಿಗಳು ಈ ಘಟನೆ ಆಗಬಾರದಿತ್ತಿ ,ಆಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ 35 ಸಾವಿರ ಜನ ಕುಳಿತುಕೊಳ್ಳಲು ವ್ಯವಸ್ಥೆ ಇದೆ.ಆದರೇ ನಿರೀಕ್ಷೆಗೂ ಮೀರಿ ಎರಡುಮೂರು ಲಕ್ಷ ಜನ ಬಂದಿದ್ದಾರೆ.

ಇದನ್ನೂ ಓದಿ:-Karnataka|ಜಾತಿ ಗಣತಿ ವರದಿ,ವಿಶೇಷ ಸಚಿವ ಸಂಪುಟ ಸಭೆ ಹೈಲೈಟ್ಸ್ ಇಲ್ಲಿದೆ.

ಈ ದುರಂತದಲ್ಲಿ ಮೃತಪಟ್ಟವರೆಲ್ಲಾ ಯುವಕರೇ ಆಗಿದ್ದಾರೆ.ಕ್ರಿಕೇಟ್ ಅಸೋಸಿಯೇಷನ್ ಹಾಗೂ ಸರ್ಕಾರ ಸಹ ಸಂಭ್ರಮಾಚರಣೆಗೆ ವ್ಯವಸ್ಥೆ ಮಾಡಿತ್ತು ಆದರೇ ನಿರೀಕ್ಷೆ ಮೀರಿ ಬಂದ ಜನರಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ಸಂತಾಪ ವ್ಯಕ್ತಪಡಿಸಿದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ