For the best experience, open
https://m.kannadavani.news
on your mobile browser.
Advertisement

KARWAR PORT ಕೋಟಿ ಮೌಲ್ಯದ ಗ್ರಾನೈಟ್ ಗಳಿಗೆ ವಾರಸದಾರರನ್ನು ಹುಡುಕಿಕೊಡಿ!

Karwar News 06 November 2024 :- ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಹಲವರ ತಲೆದಂಡವಾಗಿದೆ. ಆದ್ರೆ ಇದರ ಬಿಸಿ ಅಕ್ರಮ ಗ್ರಾನೈಟ್ ಕಳ್ಳಸಾಗಾಟಕ್ಕೂ ಬಿದ್ದಿದ್ದು ಕಾರವಾರದ ಬಂದರಿನಲ್ಲಿ (karwar port) ಕೋಟಿಗಟ್ಟಲೇ ಬೆಲೆಬಾಳುವ ಗ್ರಾನೈಟ್ ಗಳು ವಾರಸುದಾರರಿಲ್ಲದೇ ಹಾಗೇ ಉಳಿದಿದ್ದು ಸರ್ಕಾರ ಸದ್ದಿಲ್ಲದೇ ಮುಟ್ಟುಗೋಲು ಹಾಕಿ ಹರಾಜಿಗೆ ಮುಂದಾಗಿದೆ. ಅಷ್ಟಕ್ಕೂ ಈ ಗ್ರಾನೈಟ್ ಗೂ ಅದಿರಿಗೂ ಏನು ಸಂಬಂಧ ಅಂತೀರಾ ಈ ಸುದ್ದಿ ಓದಿ.
09:45 PM Nov 06, 2024 IST | ಶುಭಸಾಗರ್
karwar port ಕೋಟಿ ಮೌಲ್ಯದ ಗ್ರಾನೈಟ್ ಗಳಿಗೆ ವಾರಸದಾರರನ್ನು ಹುಡುಕಿಕೊಡಿ

Report by : sagar.

Advertisement

ಪ್ರತಿ ದಿನದ ಸುದ್ದಿಗಳನ್ನು ತಿಳಿಯಲು ನಮ್ಮ WhatsApp group ಗೆ ಸೇರಲು ಅಕ್ಷರದ ಮೇಲೆ ಕ್ಲಿಕ್ ಮಾಡಿ.

Karwar News 06 November 2024 :- ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಹಲವರ ತಲೆದಂಡವಾಗಿದೆ. ಆದ್ರೆ ಇದರ ಬಿಸಿ ಅಕ್ರಮ ಗ್ರಾನೈಟ್ ಕಳ್ಳಸಾಗಾಟಕ್ಕೂ ಬಿದ್ದಿದ್ದು ಕಾರವಾರದ ಬಂದರಿನಲ್ಲಿ (karwar port) ಕೋಟಿಗಟ್ಟಲೇ ಬೆಲೆಬಾಳುವ ಗ್ರಾನೈಟ್ ಗಳು ವಾರಸುದಾರರಿಲ್ಲದೇ ಹಾಗೇ ಉಳಿದಿದ್ದು ಸರ್ಕಾರ ಸದ್ದಿಲ್ಲದೇ ಮುಟ್ಟುಗೋಲು ಹಾಕಿ ಹರಾಜಿಗೆ ಮುಂದಾಗಿದೆ. ಅಷ್ಟಕ್ಕೂ ಈ ಗ್ರಾನೈಟ್ ಗೂ ಅದಿರಿಗೂ ಏನು ಸಂಬಂಧ ಅಂತೀರಾ ಈ ಸುದ್ದಿ ಓದಿ.

ರಾಜ್ಯದಲ್ಲೇ ಸದ್ದು ಮಾಡಿದ್ದ ಬೇಲಿಕೇರಿ ಬಂದರು ಅದಿರು ನಾಪತ್ತೆ ಪ್ರಕರಣ ಇದೀಗ ಹಲವು ಅಕ್ರಮ ಉದ್ಯಮಗಳ ದಂದೆಕೋರರಲ್ಲಿ ಭಯ ಹುಟ್ಟಿಸಿದೆ.

ಇದನ್ನೂ ಓದಿ:-Karwar ದಲ್ಲಿ ಒಬ್ಬ ಸೈಕೋ ವೈದ್ಯ ವಾರ್ಡ ನಲ್ಲೇ ಒಣಗಿಸ್ತಾನೆ ಒಳ ವಸ್ತ್ರ!

ಕಾರವಾರದಲ್ಲಿ ಅದಿರಿನ ಜೊತೆ ಅಮುಲ್ಯವಾದ ಗ್ರಾನೈಟ್ ಗಳು ಚೈನಾ,ತೈವಾನ್ ,ಇಸ್ರೇಲ್ ಸೇರಿದಂತೆ ಹಲವು ದೇಶಗಳಿಗೆ ರಫ್ತಾಗುತಿದ್ದವು. ಆದ್ರೆ ಇದೀಗ ಹೀಗೆ ರಫ್ತು ಮಾಡಲು ಬಂದರಿನಲ್ಲಿ ಸಂಗ್ರಹಿಸಿಟ್ಟಿದ್ದ 820 ಕ್ಕೂ ಹೆಚ್ಚು ವಿವಿಧ ಮಾದರಿಯ ಎಂಟಕ್ಕೂ ಹೆಚ್ಚು ವಿಧದ ಕೋಟಿ ಬೆಲೆಯ ಗ್ರಾನೈಟ್ ಕಲ್ಲುಗಳು ಬಿದ್ದಿದ್ದು ,ಇದು ತಮ್ಮದೆಂದು ಹೇಳಿಕೊಳ್ಳಲು ವಾರಸುದಾರರು ಇಲ್ಲದೇ ಅನಾತವಾಗಿ ಬಿದ್ದಿದ್ದು ಬಂದರು ಇಲಾಖೆ ನಿದ್ದೆ ಕೆಡಿಸಿದೆ.

ಸುಮಾರು 20 ವರ್ಷದ ಹಿಂದೆ ಹಲವು ಕಂಪನಿಗಳು ಗಾನೈಟ್ ಗಳನ್ನು ಅದಿರು ಜೊತೆಯಲ್ಲಿ ವಿದೇಶಕ್ಕೆ ರಫ್ತು ಮಾಡುತಿದ್ದವು. ಇದಕ್ಕಾಗಿ ಕಾರವಾರ ಬಂದರಿನ ಜಾಗವನ್ನು ಬಂದರು ಇಲಾಖೆಯಿಂದ ಬಾಡಿಗೆ ಪಡೆದಿತ್ತು.

ಎಲ್ಲಿ ಅಕ್ರಮ ಅದಿರು ಪ್ರಕರಣ ಮುನ್ನೆಲೆಗೆ ಬಂದಿತೋ ಗ್ರಾನೈಟ್ ಉದ್ಯಮಕ್ಕೂ ಇದರ ಬಿಸಿ ತಟ್ಟಿತ್ತು. ಹೀಗಾಗಿ ಕಾರವಾರದ ಬಂದರಿನಲ್ಲಿ ಸಂಗ್ರಹಿಸಿಟ್ಟಿದ್ದ 820 ಗ್ರಾನೈಟ್ ಕಲ್ಲುಗಳು ಬಂದರಿನಲ್ಲೇ ಉಳಿದಿತ್ತು.

ಇದನ್ನೂ ಓದಿ:-Honnavara| ಚಿರತೆ ದಾಳಿ ಬೋನು ಕಾಲಿ!

ಇದರ ಜೊತೆ ಬಂದರು ಇಲಾಖೆಗೆ ಪಾವತಿ ಮಾಡಬೇಕಾದ ಬಾಡಿಗೆ ಸಹ ಪಾವತಿ ಮಾಡದೇ ಕಂಪನಿಗಳು ದೂರವಾಗಿದ್ದವು .

ಇನ್ನು ಜಾಗದ ಕೊರತೆಯಿಂದ ಇಲಾಖೆ ಈ ಹಿಂದೆ ಸಂಗ್ರಹವಾದ ಅದಿರನ್ನು ಕೋರ್ಟ ಆದೇಶದ ಪ್ರಕಾರ ಹರಾಜು ನಡೆಸಿತ್ತು.

ಇನ್ನು 20 ವರ್ಷಗಳು ಕಳೆದಿದ್ದರಿಂದ ಎಕರೆಗಟ್ಟಲೇ ಜಾಗದಲ್ಲಿ ತುಂಬಿದ್ದ ಈ ಗ್ರಾನೈಟ್ ನನ್ನು ಸಹ ಕಾಲಿ ಮಾಡಬೇಕಿದ್ದು ಇದರ ಮಾಲೀಕರು ಯಾರ್ಯಾರು ಇದ್ದಾರೆ ಎಂಬ ಬಗ್ಗೆ ದಾಖಲೆ ಕಲೆಹಾಕಿದಾಗ ಗಣೇಶ್ ಷಿಪಿಂಗ್ ಕಂಪನಿಯ ಹೆಸರು ಮಾತ್ರ ಸಿಕ್ಕಿದ್ದು ಉಳಿದ ಕಂಪನಿಗಳ ದಾಖಲೆಗಳೇ ಇರಲಿಲ್ಲ.

Karwar port news

ಹೀಗಾಗಿ ಬಂದರು ಇಲಾಖೆ ಸಹ ತೆರವು ಗೊಳಿಸಲು ಈ ಕಂಪನಿಗೆ ನೋಟಿಸ್ ನೀಡಿತ್ತು. ಆದರೇ ಈ ಕಂಪನಿ ಸಹ ಈ ಗ್ರಾನೈಟ್ ನಮ್ಮದು ಎಂದು ಕ್ಲೈಮ್ ಮಾಡಲಿಲ್ಲ‌ .

ಹೀಗಾಗಿ ಇವುಗಳ ಮೌಲ್ಯ ಸಾಂದ್ರತೆ ಮಾಪನ ಮಾಡಿ ಹರಾಜು ಹಾಕುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆದಿದ್ದು ,ಯಾರೂ ತಮ್ಮದೆಂದು ಹೇಳದ ಹಿನ್ನಲೆಯಲ್ಲಿ ಒಟ್ಟು 820 ಗ್ರಾನೈಟ್ ಗಳ ಅಳತೆ ಸಾಂದ್ರತೆಯ ಪರೀಕ್ಷೆ ಮಾಡಿದ್ದು ಕೋಟಿಗಟ್ಟಲೇ ಬೆಲೆ ಬಾಳುವ ಈ ಗ್ರಾನೈಟ್ ನನ್ನು ಶೀಘ್ರದಲ್ಲೇ ಹರಾಜು ಹಾಕಲು ಇಲಾಖೆ ಮುಂದಾಗಿದೆ.

ಹೀಗಾಗಿ ತಾವು ಅಳತೆ ,ಗುಣಮಟ್ಟ ಮಾಪನ ಮಾಡುವ ಕಾರ್ಯ ಮುಕ್ತಾಯ ಮಾಡಿದ್ದೇವೆ . ವರದಿ ಬಂದ ನಂತರ ಈ ಗ್ರಾನೈಟ್ ನನ್ನು ಹರಾಜು ಹಾಕುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಆಶಾ ರವರು ಮಾಹಿತಿ ನೀಡಿದ್ದಾರೆ.

ಕೋಟಿಗಟ್ಟಲೇ ಬೆಲೆ ಬಾಳುವ ಈ ಗ್ರಾನೈಟ್ ಗಳು ಮೂಲ ವಾರಸುದಾರರು ಯಾರು ಎಂಬ ಪ್ರಶ್ನೆ ಎದ್ದಿದ್ದು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬಂದರಿನಲ್ಲಿ ಗ್ರಾನೈಟ್ ಸಂಗ್ರಹಿಸಿಟ್ಟು ಅಕ್ರಮವಾಗಿ ವಿದೇಶಗಳಿಗೆ ರಫ್ತು ಮಾಡಲಾಗುತಿತ್ತಾ ಎಂಬ ಅನುಮಾನ ಮೂಡುವಂತಾಗಿದ್ದು ತನಿಖೆಯಿಂದ ನಿಜಾಂಶ ಹೊರಬರಬೇಕಿದೆ.

ಒಟ್ಟಿನಲ್ಲಿ ಇದೀಗ ವಾರಸುದಾರರು ,ದಾಖಲೇ ಇಲ್ಲದ ಕೋಟಿ ಮೌಲ್ಯದ ಗ್ರಾನೈಟ್ ಗಳು ಹರಾಜು ಪ್ರಕ್ರಿಯೆ ಮೂಲಕ ಇದರ ಹಣ ಸರ್ಕಾರದ ಖಜಾನೆ ಸೇರಲಿದೆ ಎಂಬುದೇ ನೆಮ್ಮದಿಯ ವಿಷಯವಾಗಿದೆ .

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ