Karnataka| ಮೊಬೈಲ್ ನಲ್ಲಿ ಪೊಲೀಸರಿಗೆ ದೂರು ನೀಡುವುದು ಹೇಗೆ? ವಿವರ ಇಲ್ಲಿದೆ.
Karnataka| ಮೊಬೈಲ್ ನಲ್ಲಿ ಪೊಲೀಸರಿಗೆ ದೂರು ನೀಡುವುದು ಹೇಗೆ? ವಿವರ ಇಲ್ಲಿದೆ.
ಇವತ್ತಿನ ಲೇಖನದಲ್ಲಿ ಮೊಬೈಲ್ ಮೂಲಕ ಪೊಲೀಸರಿಗೆ ದೂರು ನೀಡುವುದು ಹೇಗೆ ಯಾವರೀತಿ ಉಪಯೋಗ ಆಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುತಿದ್ದೇವೆ.
ಮಾಹಿತಿ ಉತ್ತಮವಾಗಿದ್ದರೇ ಸುದ್ದಿಯನ್ನು ಓದುವ ಮೂಲಕ ಹಾಗೂ ಇನ್ನೊಬ್ಬರಿಗೂ ಶೇರ್ ಮಾಡುವ ಮೂಲಕ ನಮ್ಮ ಕಾರ್ಯಕ್ಕೆ ಸಹಕರಿಸಿ.
ನಿರಂತರ ಸುದ್ದಿಗಳನ್ನು ತಿಳಿದುಕೊಳ್ಳಲು ನಮ್ಮ WhatsApp ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.
ವಾಹನ ಕಳೆದರೆ ಪೊಲೀಸ್ ಠಾಣೆಗೆ ಅಲೆದು ಸುಸ್ತಾಗುವುದು ಸಾಮಾನ್ಯ. ಲಂಚದ ಹಣ, ತಿರುಗಾಟ, ಪೊಲೀಸರ ನಿರಾಸಕ್ತಿ ಹೀಗೆ ಏನೆಲ್ಲಾ ದೂರುದಾರರು ಅನುಭವಿಸಬೇಕು. ಹೀಗಾಗಿ ನೀವು ಬಳಸುವ ಮೊಬೈಲ್ ನಲ್ಲೇ ಇ-ದೂರು ಸೇವೆಯನ್ನು ರಾಜ್ಯ ಪೊಲೀಸ್ ಇಲಾಖೆ ಪ್ರಾರಂಭಿಸಿದೆ.
ಇದನ್ನೂ ಓದಿ:-Karwar| ಸೇತುವೆ ಇದ್ರೂ ರಸ್ತೆ ಇಲ್ಲ ದೋಣಿಯಲ್ಲೇ ಸಾಗಿಸಿದ್ರು ಶವ
ಇ-ಎಫ್ ಐಆರ್ ಸೇವೆ (E-FIR)
ವಾಹನ ಕಳುವಾದ ಬಗ್ಗೆ ಮಾಲೀಕರು ಆನ್ ಲೈನ್ ನಲ್ಲಿ ದೂರು ನೀಡಿದರೇ ಸಂಬಂಧಪಟ್ಟ ಠಾಣೆಯ ಸಿಬ್ಬಂದಿಗಳು ವಿಚಾರಣೆ ಕೈಗೊಳ್ಳುತ್ತಾರೆ.
ದೂರು ದಾರರು ಸಾರ್ವಜನಿಕ ಸೇವಾ ಕೇಂದ್ರದ ಮೂಲಕವೂ ದೂರು ಸಲ್ಲಿಸಬಹುದಾಗಿದೆ.
ದೂರು ದಾಖಲಿಸುವ ವಿಧಾನ:-
ಹಂತ1: ದೂರು ದಾಖಲಿಸಲು ಪೊಲೀಸ್ ರಾಜ್ಯ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಹಂತ2:ನಂತರ ನಾಗರೀಕ ಕೇಂದ್ರಿತ ತಾಣ ಆಯ್ಕೆಗೆ ಕ್ಲಿಕ್ ಮಾಡಿ ಬಳಿಕ ನಾಗರೀಕ ಕೇಂದ್ರಿತ ಪೋರ್ಟಲ್ ಪುಟದಲ್ಲಿ ಲಾಗಿನ್ ಬಟನ್ ಒತ್ತಬೇಕು.
ಹಂತ3:ಇದರಲ್ಲಿ New To NSO ಎಂಬ ಆಯ್ಕೆ ಕ್ಲಿಕ್ ಮಾಡಿ ಆಧಾರ್ ಸಂಖ್ಯೆ ಲಗುತ್ತಿಸಿ.
ಹಂತ4: ಹೊಸ user ID ಮತ್ತು password ಬಳಸಿ ಲಾಗಿನ್ ಆಗಿ.
ಹಂತ5: ಮುಂದಿನ ಪುಟದಲ್ಲಿ ವಾಹನ ನೊಂದಣಿ ಸಂಖ್ಯೆ ಜೊತೆ ಪೂರಕ ಮಾಹಿತಿ ದಾಖಲಿಸಿ ದೂರು ಸಲ್ಲಿಸಿ.
ಹಂತ6:ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸಂದೇಶ ರವಾನಿಸಿ.
ಹಂತ7:ನಂತರ ಠಾಣೆಯ ತನಿಖಾಧಿಕಾರಿ ಸಹಿ ಜೊತೆ E-FIR ಪ್ರತಿ ಸಿಗುತ್ತದೆ.
ಈ FIR ಪ್ರತಿಗೆ ಕಾನೂನು ಬದ್ದ ಮಾನ್ಯತೆ ಇದೆ. ಪೊಲೀಸರು ಇತರೆ ಪ್ರಕರಣದಂತೆ ತನಿಖೆ ಕೈಗೊಳ್ಳುತ್ತಾರೆ.