Karnataka:ನೆಲ, ಜಲಕ್ಕಾಗಿ ಮಾ.22ರಂದು ಅಖಂಡ ಕರ್ನಾಟಕ ಬಂದ್ – ಉತ್ತರ ಕನ್ನಡ ಜಿಲ್ಲೆಯಲ್ಲಿ ಏನು?
ನೆಲ, ಜಲಕ್ಕಾಗಿ ಮಾ.22ರಂದು ಅಖಂಡ ಕರ್ನಾಟಕ ಬಂದ್ – ಉತ್ತರ ಕನ್ನಡ ಜಿಲ್ಲೆಯಲ್ಲಿ ಏನು?
Karnataka :- ಎಂಇಎಸ್ (MES) ಪುಂಡಾಟಿಕೆಗೆ ಕಡಿವಾಣ ಹಾಕಬೇಕು, ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು, ಕನ್ನಡಿಗರ ಮೇಲೆ ಪರಭಾಷಿಕರ ದಾಳಿ ನಿಲ್ಲಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ (ಮಾ.22) ಕರ್ನಾಟಕ ಬಂದ್ (karnataka bandh) ಮಾಡಲು ಮುಂದಾಗಿವೆ.
ಇದನ್ನೂ ಓದಿ:-Karnataka Budget 2025 -ಉತ್ತರ ಕನ್ನಡಕ್ಕೆ ಸಿಕ್ಕಿದ್ದೇನು?
ಕರ್ನಾಟಕದಲ್ಲಿ ಎಂಇಎಸ್ ನಿಷೇಧ, ಮೇಕೆದಾಟು, ಕಳಸ ಬಂಡೂರಿ ಯೋಜನೆಗೆ ಶೀಘ್ರ ಅನುಮತಿ ಸೇರಿದಂತೆ ನಾಡು-ನುಡಿ, ನೆಲ-ಜಲ ವಿಷಯವಾಗಿ ಕನ್ನಡ ಒಕ್ಕೂಟಗಳು ಶನಿವಾರ ಕರ್ನಾಟಕ ಬಂದ್ ಹಮ್ಮಿಕೊಂಡಿವೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅಖಂಡ ಕರ್ನಾಟಕ ಬಂದ್ ಕೈಗೊಂಡಿವೆ.
ಆದ್ರೆ ಗಡಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಸಂಘಟನೆಗಳು ಕರ್ನಾಟಕ ಬಂದ್ ಗೆ ಬೆಂಬಲ ಘೋಷಿಸಿಲ್ಲ .ಹೀಗಾಗಿ ಸಾರಿಗೆ ವ್ಯತ್ಯಯವಿಲ್ಲ, ಅಂಗಡಿ ಮುಂಗಟ್ಟುಗಳು ಬಂದ್ ಇರುವುದಿಲ್ಲ, ಎಂದಿನಂತೆ ವ್ಯಾಪಾರ ವ್ಯವಹಾರ ನಡೆಯಲಿದ್ದು ಸಾರ್ವಜನಿಕರಿಗೆ ಯಾವುದೇ ತೊಂದರೆ ಇಲ್ಲ.
ಶಿವಮೊಗ್ಗ ದಲ್ಲಿ ಸಹ ಯಾವುದೇ ಸಂಘಟನೆ ಬೆಂಬಲ ನೀಡಿಲ್ಲ ಹೀಗಾಗಿ ಇಲ್ಲಿ ಸಹ ಎಂದಿನಂತೆ ಎಲ್ಲವೂ ಇರಲಿದೆ.
ಬೆಂಗಳೂರಿನಲ್ಲಿ ಏನಿರುತ್ತೆ? ಏನಿರಲ್ಲ?
ಏನಿರುತ್ತೆ?
ಆಸ್ಪತ್ರೆ, ಮೆಡಿಕಲ್, ಹಾಲು, ಅಗತ್ಯವಸ್ತುಗಳು* ಮೆಟ್ರೋ, ಪೆಟ್ರೋಲ್ ಬಂಕ್, ಹೋಟೆಲ್,* ಎಪಿಎಂಸಿ* ಪೀಣ್ಯ ಕೈಗಾರಿಕಾ ಪ್ರದೇಶ ಓಪನ್ (13 ಸಾವಿರ ಕೈಗಾರಿಕೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ..)
ಏನಿರಲ್ಲ?
ಓಲಾ, ಉಬರ್ ಟ್ಯಾಕ್ಸಿ & ಆಟೋ.
50:50 ಬೆಂಬಲ:
ಮಧ್ಯಾಹ್ನದ ಬಳಿಕ ಥಿಯೇಟರ್, ಮಾಲ್, ಬೇಕರಿ, ಬಾರ್ ಅಂಡ್ ರೆಸ್ಟೋರೆಂಟ್, ಅಂಗಡಿ ಮುಂಗಟ್ಟು, ಬೀದಿ ಬದಿ ವ್ಯಾಪಾರ.
17 ಜಿಲ್ಲೆಗಳಲ್ಲಿ ಬಂದ್‌ಗೆ ಬೆಂಬಲ ನಿರಾಕರಣೆ.
ಇನ್ನೂ ಎಂಇಎಸ್ ಪುಂಡಾಟ ಖಂಡಿಸಿ ಕರೆ ನೀಡಿರುವ ಬಂದ್‌ಗೆ 17 ಜಿಲ್ಲೆಗಳು ಬೆಂಬಲ ನೀಡಿಲ್ಲ. 11 ಜಿಲ್ಲೆಗಳಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. 2 ಜಿಲ್ಲೆಗಳು ಮಾತ್ರ ಸಂಪೂರ್ಣ ಬೆಂಬಲ ನೀಡಿವೆ. ಕರ್ನಾಟಕ ಬಂದ್‌ಗೆ ಬೆಳಗಾವಿ, ಮಂಡ್ಯದಲ್ಲಿ ಮಾತ್ರ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.
ಇದನ್ನೂ ಓದಿ:-Gokarna: ಮಾಹಾಬಲೇಶ್ವರ ದರ್ಶನ ಪಡೆದ ಗೋಲ್ಡನ್ ಬಾಯ್ಸ್! ಯಾರಿವರು ?
ಉಳಿದಂತೆ ಬಾಗಲಕೋಟೆ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಉಡುಪಿ, ಯಾದಗಿರಿ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕಬಳ್ಳಾಪುರ, ಚಿಕ್ಕೋಡಿ, ಕಲಬುರಗಿ, ಹಾಸನ, ಹಾವೇರಿ, ಹುಬ್ಬಳ್ಳಿ, ಕಾರವಾರ, ಮಡಿಕೇರಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ ಹಾಗೂ ಯಾದಗಿರಿ ಜಿಲ್ಲೆಗಳು ಬಂದ್‌ಗೆ ಬೆಂಬಲ ನಿರಾಕರಿಸಿವೆ.