Karnataka: ಆನಂದ್ ಗುರುಜಿ ಕಾರು ಅಡ್ಡಗಟ್ಟಿ ಬ್ಲಾಕ್ ಮೇಲ್ ! ದಿವ್ಯ ವಸಂತ ಸೇರಿ ಇಬ್ಬರ ವಿರುದ್ಧ ದೂರು
Karnataka: ಆನಂದ್ ಗುರುಜಿ ಕಾರು ಅಡ್ಡಗಟ್ಟಿ ಬ್ಲಾಕ್ ಮೇಲ್ ! ದಿವ್ಯ ವಸಂತ ಸೇರಿ ಇಬ್ಬರ ವಿರುದ್ಧ ದೂರು
ಬೆಂಗಳೂರು/ಬೆಂಗಳೂರು:- ಇದು ರಾಜ್ಯವೇ ಖುಷಿ ಪಡೋ ಸುದ್ದಿ(news) ಎಂದು ಮಾದ್ಯಮದಲ್ಲಿ ಬಾಯಿ ಬಡಿದುಕೊಂಡು ಆಗಾಗ ಸುದ್ದಿಯಾಗುತಿದ್ದ ಆಂಕರ್ ದಿವ್ಯ ವಸಂತ ಇದೀಗ ಮತ್ತೊಮ್ಮೆ ದೊಡ್ಡ ಸುದ್ದಿಯಾಗಿದ್ದಾರೆ.
ಹೌದು ವಿಡಿಯೋ ಇದೆ ಎಂದು ದಿವ್ಯಾ ವಸಂತ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡುತ್ತಿದೆ ಎಂದು ಮಹರ್ಷಿ ಡಾ ಆನಂದ ಗುರೂಜಿ ಪೊಲೀಸರಿಗೆ ದೂರು ನೀಡಿದ್ದಾರೆ. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, (court) ವಿಡಿಯೋ ಪ್ರಸಾರ ಮಾಡದಂತೆ ಗುರೂಜಿ ತಡೆಯಾಜ್ಞೆ ತಂದಿದ್ದಾರೆ. ಆದರೂ, ದಿವ್ಯಾ ಮತ್ತು ತಂಡ ತನಗೆ ಕಾಟ ಕೊಡುತ್ತಿದೆ ಎಂದು ಆನಂದ್ ಗುರುಜಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:-Karnataka:-ಮಿನರಲ್ ವಾಟರ್ ಕುಡಿಯುವವರೇ ಎಚ್ಚರ. ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ!
ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿದೆ.ದೂರಿನಲ್ಲಿ ಯ್ಯೂಟ್ಯೂಬರ್ (youtub) ಕೃಷ್ಣ ಮೂರ್ತಿ ಎಂಬುವವರನ್ನು ಆರೋಪಿ 1 ಹಾಗೂ ದಿವ್ಯಾ ವಸಂತ ಅವರನ್ನು ಆರೋಪಿ 2 ಎಂದು ಉಲ್ಲೇಕಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಹಿಂದೆ ಆನಂದ ಗುರೂಜಿ ಅವರು ವಿಡಿಯೋ ಹಾಗೂ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಆದರೂ, ಹಣಕ್ಕಾಗಿ ಬೆದರಿಸಿ ಬ್ಲ್ಯಾಕ್ ಮೇಲ್, ಜೀವಬೆದರಿಕೆ ಹಾಕಿದ್ದಾರೆ. ಅಲ್ಲದೇ ಕಾರು ಅಡ್ಡಗಟ್ಟಿ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂದು ಆನಂದ ಗುರೂಜಿ ದೂರಿನಲ್ಲಿ ಆರೋಪಿಸಿದ್ದಾರೆ.
ಹಿಂದೆ ಜೈಲು ಸೇರಿದ್ದ ದಿವ್ಯಾ ವಸಂತ!
ಕಳೆದ ವರ್ಷ ದಿವ್ಯಾ ವಸಂತ ಮಸಾಜ್ ಪಾರ್ಲರ್ನಲ್ಲಿ ಸುಲಿಗೆಗಿಳಿದ ಆರೋಪದ ಮೇಲೆ ಬಂಧನವಾಗಿದ್ದರು. ಜೈಲಿಗೂ ಹೋಗಿ ಬಂದಿದ್ದರು. ಕೇರಳದಲ್ಲಿ ತಲೆಮರೆಸಿಕೊಂಡಿದ್ದ ದಿವ್ಯಾ ವಸಂತ 15 ಲಕ್ಷ ಸುಲಿಗೆ ಯತ್ನಿಸಿದ್ದ ಕೇಸ್ನಲ್ಲಿ ಅರೆಸ್ಟ್ ಆಗಿದ್ದು, ಬೆದರಿಕೆ, ಬ್ಲ್ಯಾಕ್ಮೇಲ್ ಕೇಸ್ ದಾಖಲಾಗಿತ್ತು.
2024ರ ಆ.28ರಂದು ಗುರುಜಿ ವಿರುದ್ಧ ಮಾನನಷ್ಟದ ಸುದ್ದಿ ಪ್ರಸಾರವಾಗಿದೆ. ಕೋರ್ಟ್ ತಡೆಯಾಜ್ಞೆ ತಂದರೂ ಸುದ್ದಿ ಪ್ರಸಾರ ಮಾಡಿದ್ದಾರೆ ಎಂದು ಕೃಷ್ಣ ಮೂರ್ತಿ, ದಿವ್ಯಾ ವಸಂತ ಮೇಲೆ ಆರೋಪ ಮಾಡಲಾಗಿದೆ.
ಏಪ್ರಿಲ್ ನಲ್ಲಿ ಮತ್ತೆ ಆನಂದ್ ಗುರೂಜಿ ವಿರುದ್ಧ ಸುದ್ದಿ ಪ್ರಸಾರ ಮಾಡಲಾಗಿದೆಯಂತೆ ಅಶ್ಲೀಲ ಪದ ಬಳಸಿ ಸುದ್ದಿ ಪ್ರಸಾರ ಮಾಡಲಾಗಿದೆ. 3ನೇ ವ್ಯಕ್ತಿಯಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. 2ನೇ ಬಾರಿಗೆ ಸುದ್ದಿ ಪ್ರಸಾರ ಮಾಡದಂತೆ ಆನಂದ್ ಗುರೂಜಿ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ನಂತರ ಮತ್ತೊಮ್ಮೆ ಚಾನಲ್ನಲ್ಲಿ ಸುದ್ದಿ ಪ್ರಸಾರ ಮಾಡಲಾಗಿದೆ ಎಂದು ದಿವ್ಯಾ ವಸಂತ, ಕೃಷ್ಣಮೂರ್ತಿ ಇಬ್ಬರ ವಿರುದ್ಧ ಆನಂದ್ ಗುರೂಜಿ ದೂರು ನೀಡಿದ್ದಾರೆ.
ಆನಂದ್ ಗುರೂಜಿಗೆ ಹಣಕ್ಕೆ ಬೇಡಿಕೆ ಇಟ್ಟು ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಗುರೂಜಿ ಆಡಿಯೋ ಎಡಿಟ್ ಮಾಡಿ ಪ್ರಸಾರ ಮಾಡಲಾಗಿದೆ.
ಇದನ್ನೂ ಓದಿ:-Karwar ಪಾರ್ಕಲ್ಲಿ ರೋಮಿಯೋಗಳ ಕಾಮದಾಟ!
ನಾನು ಸನ್ಯಾಸಿಯಲ್ಲ ಅನ್ನೋ ಆಕ್ರೋಶದ ಮಾತು ಎಂದು ಗುರೂಜಿ ಆಡಿಯೋ ವೈರಲ್ ಮಾಡಿದ್ದ ಗ್ಯಾಂಗ್. ಅಶ್ಲೀಲ ವಿಡಿಯೋ ಬಗ್ಗೆ ಕೇಳಿ ಹಣಕ್ಕೆ ಬೇಡಿಕೆಯಿಟ್ಟಾಗ ನಾನು ತಲೆ ಕಡೆಸಿಕೊಳ್ಳಲ್ಲ ಎಂದಿದ್ದ ಆನಂದ್ ಗುರೂಜಿ ಮಾತು ಆಡಿಯೋದಲ್ಲಿದೆ. ಇದೀಗ FIR ದಾಖಲಾಗಿ ವಿಚಾರಣೆಗೆ ಬನ್ನಿ ಎನ್ನುತ್ತಿದ್ದಂತೆಯೇ ಬಂಧನ ಭೀತಿ ಹಿನ್ನೆಲೆಯಲ್ಲಿ ದಿವ್ಯಾ ವಸಂತ ಮತ್ತು ಕೃಷ್ಣಮೂರ್ತಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.