Karnataka Budget 2025- ಯಾವ ಕ್ಷೇತ್ರಕ್ಕೆ ಎಷ್ಟು ?ಹೈಲೆಟ್ಸ್ ಇಲ್ಲಿದೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ದಾಖಲೆಯ 16ನೇ ಬಜೆಟ್ ಮಂಡನೆ ಮಾಡುತಿದ್ದು ಇಂದಿನ ಬಜೆಟ್ (Budget) ಹೈಲೆಟ್ಸ್ ಇಲ್ಲಿದೆ.
1) ಖಾಲಿ ಮತ್ತು ಲಭ್ಯವಿರುವ ಮದ್ಯದ ಪರವಾನಿಗೆಯನ್ನು ಪಾರದರ್ಶಕ ಎಲೆಕ್ಟ್ರಾಕ್ ಹರಾಜು
2)ವಾಣಿಜ್ಯ ತೆರಿಗೆಯ ಇಲಾಖೆಯ ರಾಜಸ್ವ ಸಂಗ್ರಹಣೆ ಗುರಿ ,1,20,000 ಕೋಟಿ ರೂ,ವೃತ್ತಿ ತೆರಿಗೆ 200 ರೂ ನಿಂದ 300 ರೂಗೆ ಏರಿಕೆ
3)ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಹೊಸ ಕಾರ್ಯಕ್ರಮ ಜಾರಿ,ಈ ಯೋಜನೆ ಅಡಿ ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರದ ರಸ್ತೆ ಸಣ್ಣ ನೀರಾವರಿ, ಮೂಲ ಸೌಕರ್ಯಗಳಿಗೆ 8 ಸಾವಿರ ಕೋಟಿ ಅನುದಾನ
4) ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ (Majestic bus stand)ಹೈಟೆಕ್ ಗೆ ಪ್ರಸ್ತಾಪ,ಪ್ರಾಜೆಕ್ಟ್ ಮೆಜೆಸ್ಟಿಕ್ ಯೋಜನೆಯಡಿ ಈ ಬಾರಿಯೂ ಅತೀ ಹೆಚ್ಚು ಸಾಲದ ಪ್ರಸ್ತಾಪ ವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ.ಈ ಬಾರಿ 1,16,000 ಕೋಟಿ ರೂ ಸಾಲ ಮಾಡುವುದಾಗಿ ಪ್ರಸ್ತಾಪ ಮಾಡಲಾಗಿದೆ.
5) ಈ ಬಾರಿಯೂ ಕೊರತೆ ಬಜೆಟ್ ಮಂಡನೆ ಯಾಗಿದ್ದು
19,262 ಕೋಟಿ ರೂ ಕೊರತೆ ಬಜೆಟ್ ಇದಾಗಿದೆ.
6) ರಾಜ್ಯದಲ್ಲಿ ಕೃಷಿ ಯಾಂತ್ರಿಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯ ಧನ ಒದಗಿಲಸು 428 ಕೋಟಿ ಅನುದಾನ
7)ಈ ವರ್ಷ 5 ಸಾವಿರ ಕಿರು ಸಂಸ್ಕಾರಣಾ ಘಟಕ ಸ್ಥಾಪನೆ.
8) 12 ಸಾವಿರ ಕೃಷಿ ಹೊಂಡ ನಿರ್ಮಾಣ ಮಾಡಲಾಗುವುದು.
9) 60 ಮಹಿಳಾ ಔಟ್ ಪೋಸ್ಟ್ , ದೌರ್ಜನ್ಯ ಕ್ಕೆ ಒಳಗಾದ ಮಹಿಳೆಯರ ರಕ್ಷಣೆಗೆ ವ್ಯವಸ್ಥೆ.
10) ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಗೆ 319ಕೋಟಿ
11) ಕಳೆಸ ಬಾರಿ 1.05 ಕೋಟಿ ರೂ ಸಾಲ ಮಾಡುವ ಪ್ರಸ್ತಾಪ ಮಾಡಿದ್ದ ಸಿಎಂ ಈ ಭಾರಿ ರಾಜ್ಯದ ಒಟ್ಟು ಸಾಲ 7.81 ಲಕ್ಷ ಕೋಟಿಗೆ ಏರಿಕೆ.
12)500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭ.
ಶಾಲಾ ಮಕ್ಕಳಿಗೆ 1-10 ತರಗತಿ 6 ದಿನ ಮೊಟ್ಟೆ, ಬಾಳೆ ಹಣ್ಣು ಯೋಜನೆ ವಿಸ್ತರಣೆ.
13) ದೇವನಹಳ್ಳಿ ಯಲ್ಲಿ 407 ಎಕರೆ ಯಲ್ಲಿ ಬೆಂಗಳೂರು ಸಿಗ್ನೆಚರ್ ಬ್ಯುಸಿನೆಸ್ ಪಾರ್ಕ್.( Business Park)
14)ಬೆಂಗಳೂರಿನ ಹಜ್ ಭವನದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿ ಗಳಿಗೆ ಕರ್ನಾಟಕ ಮುಕ್ತ ವಿವಿ ಪ್ರಾದೇಶಿಕ ಕೇಂದ್ರ ಪ್ರಾರಂಭಕ್ಕೆ ಅಸ್ತು.ಪದವಿ ಸ್ನಾತಕೋತ್ತರ ಪದವಿ ಶಿಕ್ಷಣ ಕ್ಕೆ ವ್ಯವಸ್ಥೆ.ಮದರಸಾದಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಔಪಚಾರಿಕ ಶಿಕ್ಷಣ, Sslc ಪರೀಕ್ಷೆ ಬರೆಯಲು ಅವಕಾಶ ,ಕಂಪ್ಯೂಟರ್ ಸ್ಮಾರ್ಟ್ ಬೋರ್ಡ್ ವ್ಯವಸ್ಥೆ.
15) ಅಲ್ಪಸಂಖ್ಯಾತ ಸರಳ ವಿವಾಹಕ್ಕೆ 50 ಸಾವಿರ ಹಣ.
16) ಶಾಲಾ ಮಕ್ಕಳಿಗೆ ರಾಗಿ ಮಿಲ್ಟ್ ಯೋಜನೆ ವಿಸ್ತರಣೆ.
ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದಲ್ಲಿ ನೀಡುತ್ತಿರೋ ಯೋಜನೆ ಇದಾಗಿದ್ದು 3 ದಿನಗಳಿಂದ 5 ದಿನ ರಾಗಿ ಹೆಲ್ತ್ ಮಾಲ್ಟ್ ವಿಸ್ತರಣೆ.100 ಕೋಟಿ ವೆಚ್ಚ 25%. ಸರ್ಕಾರದಿಂದ ಹಣ ಭರಿಸಲಾಗುತ್ತದೆ
ಈ ಬಜೆಟ್ ವರ್ಷದಲ್ಲಿ ಬಂಡವಾಳ ವೆಚ್ಚವನ್ನು 3,11,939 ಕೋಟಿ ರೂ ತೋರಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಇನ್ನು ಪಿಂಚಣಿ, ವೇತನ, ಸಬ್ಸಿಡಿ, ಸರ್ಕಾರಿ ಕಚೇರಿಗಳ ವೆಚ್ಚ ಹೊಂದಿರುವ ರಾಜಸ್ವ ವೆಚ್ಚ - 71,336 ಕೋಟಿ ತೋರಿಸಲಾಗಿದೆ.
17) ಪ್ರಾಥಮಿಕ, ಫ್ರೌಡಾ ಶಾಲಾ ಮತ್ತು ಪದವಿ ಪೂರ್ವ ಕಾಲೇಕುಗಳ ಅತಿಥಿ ಶಿಕ್ಷಕರುಣ ಉಪನ್ಯಾಸರಿಗೆ 2 ಸಾವಿರ ಗೌರವ ಧನ ಹೆಚ್ಚಳ.
18) ಬಿಸಿಯೂಟ ತಯಾರಿಕರಿಗೆ 1 ಸಾವಿರ ಗೌರವ ಧನ ಹೆಚ್ಚಳ
19) ವಕ್ಫ್ ಖಾಲಿ ನಿವೇಶನದಲ್ಲಿ 15 ಮಹಿಳಾ ಕಾಲೇಜ್ ಪ್ರಾರಂಭಿಸಲು ಕ್ರಮ
20) ಈ ಸಾಲಿನಲ್ಲಿ 16 ಕಾಲೇಜ್ ಸೇರ್ಪಡೆ.
21) ಅಂಗನವಾಡಿ ಕಾರ್ಯಕರ್ತೆರಯರಿಗೆ 1000 ಸಹಾಯ ಧನ ಹೆಚ್ಚಳ ಅಂಗನವಾಡಿ ಸಹಾಯಕರಿಗೆ 750 ರೂ ಸಹಾಯ ಧನ ಹೆಚ್ಚಳ.
22)5 ಕೆಜಿ ಅಕ್ಕಿ ವಿತರಣೆಯ ಬಗ್ಗೆ ಪ್ರಸ್ತಾಪ ಮಾಡಲಾಗಿದ್ದು ,ಸಗಟು ಗೋದಾಮುಗಳಿಗೆ CCTV - ಅನ್ನಭಾಗ್ಯ, ಹೊಸ ನ್ಯಾಯಬೆಲೆ ಅಂಗಡಿಗಳು ಅವಶ್ಯಕತೆಗೆ ಅನುಗುಣವಾಗಿ ಪ್ರಾರಂಭ.
23)ಅಕ್ಕಪಕ್ಕದ ರಾಜ್ಯಗಳ ಮಧ್ಯದ ದರ ಪರಿಶೀಲಿಸಿ ರಾಜ್ಯದಲ್ಲಿ ಮತ್ತೆ ಮಧ್ಯ ದರ ಹೆಚ್ಚಳದ ಪ್ರಸ್ತಾಪ ಮಾಡಲಾಗಿದ್ದು ದರ ಹೆಚ್ಚಳವಾಗಲಿದೆ.
24)ಒಂದು ಲಕ್ಷ ಬಹುಮಹಡಿ ಯೋಜನೆಯನಡಿ ಠೇವಣಿ ಮೊತ್ತ ಒಂದು ಲಕ್ಷ ಕಡಿತ.
ಬಜೆಟ್ ನಲ್ಲಿ ತೆರಿಗೆ ಸಂಗ್ರಹ ಗುರಿಯ ಪ್ರಸ್ತಾಪ ಈ ಕೆಳಗಿನಂತಿದೆ.:-
ವಾಣಿಜ್ಯ ತೆರಿಗೆ - 1,20,000 ಕೋಟಿ
ಅಬಕಾರಿ ತೆರಿಗೆ - 40,000 ಕೋಟಿ
ನೋಂದಣಿ ಮತ್ತು ಮುದ್ರಾಂಕ ಶುಲ್ಕ - 28,000 ಕೋಟಿ ರೂ
ಮೋಟಾರು ವಾಹನ ತೆರಿಗೆ - 15,000 ಕೋಟಿ ರೂ
ಇತರೆ ತೆರಿಗೆಗಳಿಂದ - 5,100 ಕೋಟಿ ಸಂಗ್ರಹ ಗುರಿ
25) ರಾಜೀವ್ ಗಾಂಧಿ ವಸತಿ ಯೋಜನೆಯಡಿಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಕಲಿಕೆಗೆ 4 ಸಾವಿರ ಶಾಲೆಗಳಲ್ಲಿ ದ್ವಿಭಾಷಾ ವಿಭಾಗ ಪ್ರಾರಂಭ*
26) ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5267 ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ .
27) ಬೆಂಗಳೂರಿನಲ್ಲಿ ಸೇಫ್ ಸಿಟಿ ಯೋಜನೆಯಡಿ 10 ಡ್ರೋಣ್ ಕ್ಯಾಮರಾ 560 ಬಾಡಿ ವೋರ್ನ್ ಕ್ಯಾಮರಾ
28) ನಕ್ಸಲ್ ಪೀಡಿತ ಪ್ರದೇಶಗಳಿಗೆ 10 ಕೋಟಿ ವಿಶೇಷ ಪ್ಯಾಕೇಜ್
29) ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಡಾ. ಮನಮೋಹನ್ ಸಿಂಗ್ ವಿಶ್ವ ವಿದ್ಯಾಲಯ ಅಂತ ಮರು ನಾಮಕರಣ, ಬೆಂಗಳೂರು ನಗರ ವಿವಿಗೆ ಸರ್ಕಾರಿ ಕಲಾ ಕಾಲೇಜು, ಆರ್ ಸಿ ಕಾಲೇಜು ವಿಶ್ವವಿದ್ಯಾಲಯ ಘಟಕ ಕಾಲೇಜುಗಳನ್ನಾಗಿ ಅಭಿವೃದ್ಧಿ.
30 ) ತೆರಿಗೆ ಸಂಗ್ರಹಕ್ಕೆ ಬಜೆಟ್ ನಲ್ಲಿ ಆಧ್ಯತೆ2025-26 ರಲ್ಲಿ ಗಣಿ, ಭೂ ಇಲಾಖೆಯಿಂದ 9000 ಕೋಟಿ ತೆರಿಗೇಯತರ ರಾಜಸ್ವ ಗುರಿ,ಮೋಟಾರು ವಾಹನ 15 ಸಾವಿರ ಕೋಟಿ ರಾಜಸ್ವ ಗುರಿ
31) ಸೈಬರ್ ಅಪರಾಧ ಹಾಗೂ ಡ್ರಗ್ ಕಂಟ್ರೋಲ್ ತಡೆಗಟ್ಟಲು ಯೋಜನೆಗೆ ಐದು ಕೋಟಿ
32) ಎಂಟು ಪೊಲೀಸ್ ಸ್ಟೇಷನ್ ಇನ್ಮುಂದೆ ಬೆಂಗಳೂರಿನಲ್ಲಿ 11 ಪೊಲೀಸ್ ವಿಭಾಗ
33) ಬಳ್ಳಾರಿ ದಾವಣಗೆರೆ ಮೈಸೂರು ಬೆಂಗಳೂರು ಕೇಂದ್ರದಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಸ್ಥಾಪನೆ.
34) ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು ಖಾಲಿ ಇರೋ 2 ಸಾವಿರ ಬೋಧಕ ಹುದ್ದೆ ಭರ್ತಿ.ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜುಗಳ ಅಭಿವೃದ್ಧಿಗೆ 275 ಕೋಟಿ ಅನುದಾನ
35) ವಾರ್ಷಿಕ ಆರೋಗ್ಯ ತಪಾಸಣೆ ಗೆ ಪೊಲೀಸರಿಗೆ 1000 ರೂನಿಂದ 1500 ರೂಗೆ ಹೆಚ್ಚಳ
36) ಪತ್ರಕರ್ತರ ಮಾಸಾಶನ 12 ಸಾವಿರದಿಂದ 15 ಸಾವಿರಕ್ಕೆ ಹೆಚ್ಚಳ.ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿ ಯೋಜನೆ ಅಡಿ 5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಘೋಷಣೆ.
37 ) ಆಹಾರ ಭತ್ಯೆ - 200-300 - ಬಂದೋಬಸ್ತ್ ಗೆ ನಿಯೋಜನೆಯಾಗಿರುವ ಪೊಲೀಸರಿಗೆ
38) ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜು ಸ್ಥಾಪನೆ 150 ಕೋಟಿ ವೆಚ್ಚ.
39) ಪ್ರೊ. ನಂಜುಂಡ ಸ್ವಾಮಿ ಸಂಶೋಧನಾ ಪೀಠ ಮೈಸೂರಿನಲ್ಲಿ ಸ್ಥಾಪನೆ.
40) ಅಗ್ನಿ ಅನಾಹುತ ತಡೆಯಲು ಬಹುಮಹಡಿ ಕಟ್ಟಡ ಕ್ಕೆ ,52-54 ಮೀಟರದ ಎತ್ತರಕ್ಕೆ ತಲುಪುವ ಏರಿಯಲ್ ಲ್ಯಾಡರ್ ಫ್ಲಾಟ್ ಫಾರಂ ವಾಹನ.ಮೈಸೂರಿನಲ್ಲಿ ಅಗ್ನಿಶಾಮಕ ಕಟ್ಟಡ- ಮೂರು ಕೋಟಿ ಅನುದಾನ
41) ಪಿಪಿಪಿ ಮಾಡಲ್ ನಲ್ಲಿ ಮೈಸೂರಿನಲ್ಲಿ 150 ಎಕರೆ ಜಾಗದಲ್ಲಿ 500 ಕೋಟಿ ವೆಚ್ಚದಲ್ಲಿ ಫಿಲ್ಮ್ ಸಿಟಿ ನಿರ್ಮಾಣ
42) 100 ಹಿರಿಯ ಪ್ರಾಥಮಿಕ ಹಿರಿಯ ಶಾಲೆಗಳನ್ನ ಪ್ರೌಢಶಾಲಾಯಾಗು ಉನ್ನತೀಕರ.50 ಪ್ರೌಢಶಾಲೆಗಳನ್ನ ಕಾಲೇಜುಗಳಾಗಿ ಉನ್ನತೀಕರ.
43) ಮಲ್ಟಿಫ್ಲೆಕ್ಸ್ ಗಳು ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ದರ200 ರೂಗೆ ಸೀಮಿತ.
ಇಲಾಖಾವಾರು ಅನುದಾನ ಹಂಚಿಕೆ ಎಷ್ಟು?
ಶಿಕ್ಷಣ - 45,286 ಕೋಟಿ
ಮಹಿಳಾ/ ಮಕ್ಕಳ ಕಲ್ಯಾಣ - 34955 ಕೋಟಿ
ಇಂಧನ - 26,896 ಕೋಟಿ
ಗ್ರಾಮೀಣಾಭಿವೃದ್ಧಿ - 26,735 ಕೋಟಿ
ನೀರಾವರಿ - 22181 ಕೋಟಿ
ನಗರಾಭಿವೃದ್ಧಿ, ವಸತಿ - 21405 ಕೋಟಿ
ಒಳ ಆಡಳಿತ ಮತ್ತು ಸಾರಿಗೆ - 20625 ಕೋಟಿ
ಆರೋಗ್ಯ, ಕುಟುಂಬ ಕಲ್ಯಾಣ - 17473 ಕೋಟಿ
ಕಂದಾಯ - 17201 ಕೋಟೆ
ಸಮಾಜ ಕಲ್ಯಾಣ - 16,955 ಕೋಟಿ
ಲೋಕೋಪಯೋಗಿ - 11841 ಕೋಟಿ
ಆಹಾರ ಇಲಾಖೆ - 8275 ಕೋಟಿ
ಕೃಷ, ತೋಟಗಾರಿಕೆ- 7145 ಕೋಟಿ
ಪಶು ಸಂಗೋಪನೆ, ಮೀನುಗಾರಿಕೆ - 3977 ಕೋಟಿ
ಇತರೆ - 1,49,857 ಕೋಟಿ ರೂ
ಗ್ಯಾರಂಟಿ ಯೋಜನೆಗೆ 51,034 ಕೋಟಿ
44) LKGಯಿಂದ ಪಿಯುಸಿ ವರೆಗೆ ಎಲ್ಲಾ ತರಗತಿಗಳ ವಿದ್ಯಾರ್ಥಿಗಳು ಆಯಾ ತರಗತಿಗಳಿಗೆ ತಕ್ಕಂತೆ ಕಲಿಕೆ ಯ ಮಟ್ಟವನ್ನು ಹೊಂದುವ ನಿಟ್ಟಿನಲ್ಲಿ ಮೂರು ವರ್ಷಗಳ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಜಾರಿ,5 ಸಾವಿರ ಸರ್ಕಾರಿ ಶಾಲೆಗಳಲ್ಲಿ LKG-UKG ಪ್ರಾರಂಭ.
45) ಬಜೆಟ್ ನಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಪ್ರ ವರ್ಗ-1, 2ಎ, 2 ಬಿ(ಮುಸ್ಲಿಂ) ಗುತ್ತಿಗೆದಾರರಿಗೆ ಮೀಸಲು ಕಲ್ಪಿಸುವ ಪ್ರಸ್ತಾಪ.2 ಕೋಟಿ ರೂ ವರೆಗಿನ ಕಾಮಗಾರಿಗಳಿಗೆ ಮೀಸಲು
46) ವಿದ್ಯಾವಿಜೇತ" ಕಾರ್ಯಕ್ರಮ ಮುಂದುವರಿಕೆ.25 ಸಾವಿರ ವಿದ್ಯಾರ್ಥಿಗಳಿಗೆ CET,MEET, JEE ತರಬೇತಿ ಕಾರ್ಯಕ್ರಮಕ್ಕೆ 5 ಕೋಟಿ.
47) ಸರ್ಕಾರಿ ಶಾಲಾ ಮಕ್ಕಳ ಹಾಜರಾತಿ ಖಚಿತ ಪಡಿಸಲು "ನಿರಂತರ " ಕಾರ್ಯಕ್ರಮದಡಿ FACE RECOGNITION ತಂತ್ರಜ್ಞಾನ ಜಾರಿ.
48) ಬಿಸಿಯೂಟ ಸಿಬ್ಬಂದಿಗೆ ಮಾಸಿಕ 1 ಸಾವಿರ ಗೌರವಧನ
49)ತಾಯಿ ಮರಣ ಪ್ರಮಾಣ ಇಳಿಕೆಗೆ 300 ಕೋಟಿ
ಇದನ್ನೂ ಓದಿ:-Shivamogga| ಸೊರಬ ದಲ್ಲಿ ಬೈಕ್ ಗೆ ಬೆಂಕಿಇಟ್ಟ ಕಿಡಿಗೇಡಿಗಳು
50) ಪ್ರೌಢಶಾಲಾ/ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ತರಬೇತಿ ಕಾರ್ಯಕ್ರಮ ಜಾರಿ,SKILL at SCHOOL ಯೋಜನೆ ಜಾರಿ.ಆಯ್ದ 7500 ವಿದ್ಯಾರ್ಥಿಗಳಿಗೆ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ.
51) ಡಿಜಿಟಲ್ ತಂತ್ರ ಜ್ಞಾನದ ಮೂಲಕ ಹೆರಿಗೆ ಸೇವೆ ಬಲಪಡಿಸಲು ಕ್ರಮ ,ರಕ್ತಸ್ತ್ರಾವ ತಡೆಗಟ್ಟಲು ಚಿಕಿತ್ಸೆ.
ತಾಯಿ ಮರಣ ತಾಂತ್ರಿಕ ತಜ್ಞರ ಸಮಿತಿಯಿಂದ ಆಡಿಟ್.
52) ವನ್ಯ ಪ್ರಾಣಿ ದಾಳಿಯಿಂದ ಸಾವನಪ್ಪಿದರೆ ನೀಡಲಾಗುತ್ತಿದ್ದ ಪರಿಹಾರ ಮೊತ್ತ 15 ಲಕ್ಷದಿಂದ 20 ಲಕ್ಷ ರೂ ಗೆ ಹೆಚ್ಚಳ.
53) ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜ್.
54) ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ 34 ಕೋಟಿ ಬಿಡುಗಡೆ.
55) ಗರ್ಭಕಂಠದ ಕ್ಯಾನ್ಸರ್ ತಡೆಗೆ 14 ವರ್ಷದ ಕೆಳಗಿನ ಮಕ್ಕಳಿಗೆ HPV ಲಸಿಕೆ-
56) ಗಣಿ ಬಾಧಿತ ಮತ್ತು ಕಲ್ಯಾಣ ಕರ್ನಾಟಕ 20 ತಾಲೂಕಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 50 ಶಾಲೆಗಳನ್ನ ಕೆಪಿಎಸ್ ಶಾಲೆಯಾಗಿ ಉನ್ನತೀಕರಣ.
57) ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ ಬಲವರ್ಧನೆಗೆ CENTER OF EXCELLENCE ಸ್ಥಾಪನೆ.
58) ಪ್ರೀಮಿಯಂ ಮದ್ಯದ ಬೆಲೆಗಳ ಹೆಚ್ಚಳ ಬಗ್ಗೆ ಪ್ರಸ್ತಾಪ.ಪಕ್ಕದ ರಾಜ್ಯಗಳ ಬೆಲೆಗಳಿಗೆ ಅನುಸಾರ ಪರಿಷ್ಕರಣೆ ಮಾಡುವ ಪ್ರಸ್ತಾಪ,ಈ ಬಾರಿಗೂ ಅಬಕಾರಿ ಸ್ಲ್ಯಾಬ್ ಗಳನ್ನು ಹೆಚ್ಚಿಸುವ ಪ್ರಸ್ತಾಪ,ಮದ್ಯದಂಗಡಿಗಳ ಹರಾಜು ಬಗ್ಗೆಯೂ ಪ್ರಸ್ತಾಪ,ಪಾರದರ್ಶಕ ಎಲೆಕ್ಟ್ರಾನಿಕ್ ಹರಾಜು ಮೂಲಕ ಖಾಲಿ ಅಥವ ಲಭ್ಯವಿರುವ ಮದ್ಯದಂಗಡಿಗಳ ಹರಾಜು.
59) KKRDB ವತಿಯಿಂದ 23 ಸಾವಿರ ವಿದ್ಯಾರ್ಥಿಗಳಿಗೆ ವಿಶೇಷ ಕೌಶಲ್ಯ ಅಭಿವೃದ್ಧಿ 10 ಕೋಟಿ ಅನುದಾನ
60) ಶ್ರವಣ ಸಂಜೀವಿನಿ ಯೋಜನೆಯೆಡಿ ಮಕ್ಕಳಲ್ಲಿ ಕಂಡು ಬರುವ ಶ್ರವಣ ದೋಷ ನಿವಾರಣೆಗೆ ಕಾಕ್ಲಿಯರ್ ಇಂಪ್ಲಾಟದ ಶಸ್ತ್ರ ಚಿಕಿತ್ಸೆ ಬಿಡಿಭಾಗಗಳ ನಿರ್ವಹಣೆ 12 ಕೋಟಿ ಅನುದಾನ
61)ಮೈಸೂರು ಮತ್ತು ಕಲಬುರ್ಗಿಯಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ
62) ನೋಂದಣಿ ಮತ್ತು ಮುದ್ರಾಂಕ ಶುಲ್ಕ,ಆಸ್ತಿಗಳ ಮಾರ್ಗಸೂಚಿ ಮೌಲ್ಯಗಳ ವ್ಯತ್ಯಾಸ ಸರಿಪಡಿಸುವ ಪ್ರಸ್ತಾಪ, ಜಿಐಎಸ್ ತಂತ್ರಜ್ಞಾನ ಬಳಸಿ ವೈಜ್ಞಾನಿಕವಾಗಿ ಮಾರ್ಗಸೂಚಿ ಮೌಲ್ಯ ನಿರ್ಧರಿಸಲು ಕ್ರಮ ಬಗ್ಗೆ ಪ್ರಸ್ತಾಪ
63) ಶಕ್ತಿ ಯೋಜನೆಗೆ 2025-26ನೇ ಸಾಲಿನಲ್ಲಿ 5300 ಕೋಟಿ ನಿಗದಿ.2024-25 ರಲ್ಲಿ 5015 ಕೋಟಿ ನಿಗದಿ ಮಾಡಲಾಗಿತ್ತು. ಈವರೆಗೂ 226.53 ಕೋಟಿ ಮಹಿಳೆಯರು ಬಸ್ ನಲ್ಲಿ ಓಡಾಟ.
64) ಗೃಹಲಕ್ಷ್ಮಿ ಗೆ ಕಳೆದ ವರ್ಷದಂತೆ 28,608 ಕೋಟಿ ರೂ
65) ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣ ದ ಜಾಗ ಅಭಿವೃದ್ಧಿ*
66) "ಪ್ರಾಜೆಕ್ಟ್ ಮೆಜೆಸ್ಟಿಕ್ " ಯೋಜನೆ ಅಡಿ ಸಾರ್ವಜನಿಕ, ಖಾಸಗೀ ಸಹಭಾಗಿತ್ವದಲ್ಲಿ ಅಭಿವೃದ್ಧಿ. ಸಾರಿಗೆ ಹಬ್ ನಿರ್ಮಾಣ.
67)ಸಾರಿಗೆ ಇಲಾಖೆ ಎಲ್ಲಾ ದಾಖಲೆ ಡಿಜಿಟಲೀಕರಣಕ್ಕೆ 25 ಕೋಟಿ ಮೀಸಲು.
68 )ಹೊನ್ನಾವರ, ಚಾಮರಾಜನಗರ, ಚಿತ್ರದುರ್ಗದಲ್ಲಿ 20 ಕೋಟಿ ವೆಚ್ಚದಲ್ಲಿ ಪರೀಕ್ಷಾ ಪಥ ನಿರ್ಮಾಣ. ( ಸಾರಿಗೆ ಇಲಾಖೆ ಸ್ವಯಂಚಾಲಿತ ಪರೀಕ್ಷಾ ಪಥ)
69)ಗಣಿ ಮತ್ತು ಭೂ ವಿಜ್ಞಾನ ತೆರಿಗೆ ಹೆಚ್ಚಳ ಪ್ರಸ್ತಾಪ,
ಪ್ರಮುಖ ಖನಿಜಗಳ ಮೇಲೆ ತೆರಿಗೆ ವಿಧಿಸುವ ಬಗ್ಗೆ ಪ್ರಸ್ತಾಪ,ಇದುವರೆಗೆ ರಾಜಧನವನ್ನು ಮಾತ್ರ ಸರ್ಕಾರ ವಿಧಿಸುತ್ತಿದೆ. ಇನ್ಮುಂದೆ ಪ್ರಮುಖ ಖನಿಜಗಳ ಮೇಲೆ ರಾಜಧನದ ಜತೆಗೆ ತೆರಿಗೆ ವಿಧಿಸಲು ಮುಂದಾಗಿದ್ದು, ಇದರಿಂದ 3 ಸಾವಿರ ಕೋಟಿ ರೂ ತೆರಿಗೆ ಸಂಗ್ರಹ ಗುರಿ
70) ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ ಸಿದ್ದರಾಮಯ್ಯ
71) ಗೃಹಲಕ್ಷ್ಮಿ ಯೋಜನೆಯ ದುಡ್ಡು ಸ್ವಸಹಾಯ ಗುಂಪುಗಳ ಮೂಲಕ ಹೂಡಿಕೆಗಾಗಿ ಅಕ್ಕ ಕೋ ಅಪರೇಟಿವ್ ಸೊಸೈಟಿ, ತ್ವರಿತ ಸಾಲ ಸೌಲಭ್ಯಕ್ಕಾಗಿ ರಾಜ್ಯ ಮಟ್ಟದಲ್ಲಿ ಅಕ್ಕ ಕೋ ಅಪರೇಟಿವ್ ಸೊಸೈಟಿ
72) ರಾಜ್ಯದಲ್ಲಿ ವಾಹನ ಸಂಚಾರ ಮೇಲ್ಚಾವಣಿ ಮಾಡಲು ದಾವಣಗೆರೆ, ಧಾರವಾಡ, ಕಲಬುರ್ಗಿ, ಬೆಳಗಾವಿ, ಚಿತ್ರದುರ್ಗ, ಹಾವೇರಿ, ಹೊಸಪೇಟೆ, ಬಳ್ಳಾರಿ, ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆ ಗಳಲ್ಲಿ AI ಆಧಾರಿತ ಕ್ಯಾಮರಾ ಅಳವಡಿಕೆ.60 ಸ್ಥಳ 50 ಕೋಟಿ ವೆಚ್ಚ.
73) ಸಣ್ಣ ಖನಿಜಗಳ ಸಾಗಣೆಗೆ ಇ-ವೇ ಬಿಲ್ ಕಡ್ಡಾಯಗೊಳಿಸಲು ತೀರ್ಮಾನ.ಇದರಿಂದ ರಾಯಲ್ಟಿ ಮತ್ತು ಜಿಎಸ್‌ಟಿ ತಪ್ಪಿಸಿ ಖನಿಜಗಳ ಸಾಗಣೆ ಮಾಡುತ್ತಿರುವುದಕ್ಕೆ ಬ್ರೇಕ್ ಬೀಳಲಿದೆ.ಸರ್ಕಾರಕ್ಕೂ ಆದಾಯ ಗಳಿಕೆ ಹೆಚ್ಚಾಗಲಿದೆ
74) ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ವಿರುದ್ಧ ಸಮರಕ್ಕೆ ಅಕ್ಕ ಕೋ ಅಪರೇಟಿವ್ ಸೊಸೈಟಿ, ಮಹಿಳೆಯರ ಜೀವನೋಪಾಯಕ್ಕೆ ತ್ವರಿತ ಸಾಲಕ್ಕೆ ಅಕ್ಕ ಕೋ ಅಪರೇಟಿವ್ ಸೊಸೈಟಿ. ಗೃಹಲಕ್ಷ್ಮಿ ಯೋಜನೆಯ ಯಜಮಾನಿಯರೇ ಇದ್ರ ಸದಸ್ಯರು.ಉಳಿತಾಯ ಮತ್ತು ಉದ್ಯಮಶೀಲತೆ ಗಾಗಿ ಯೋಜನೆ.
75) ರಾಜ್ಯದಲ್ಲಿ ಸಬ್ ರಿಜಿಸ್ಟ್ರಾರ್ ಸರ್ವರ್ ಸಮಸ್ಯೆ ಜನ ಹೈರಾಣು ಇದ್ರ ಬೆನ್ನಲ್ಲೆ ಸಬ್ ರಿಜಿಸ್ಟ್ರಾರ್ ಕಚೇರಿಗಳ ಆಧುನೀಕರಣ 76 ಕೋಟಿ ಮೀಸಲು.
ಇದನ್ನೂ ಓದಿ:-Union Budget 2025: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೆಲ್ಲ ಬೇಕು? ಬೇಡಿಕೆ ಪಟ್ಟಿ ಕೊಟ್ಟ ಸಿ.ಎಂ!
76) ಅರ್ಚಕರಿಗೆ ತಸ್ತೀಕ್ ಮೊತ್ತ ಹೆಚ್ಚಳ,ದೇವಾಲಯದ ಆಸ್ತಿ ಸಂರಕ್ಷಣೆಗೆ ಬರಲಿದೆ ಭೂ ವರಾಹ ಯೋಜನೆ.
ಒತ್ತುವರಿಯಾಗಿರುವ 328 ದೇವಾಲಯದ ಆಸ್ತಿ ಸಂರಕ್ಷಣೆಗೆ ಕ್ರಮ.
77)ಒಲಿಂಪಿಕ್ಸ್‌ಗೆ ತಯಾರಾಗುವ 60 ಕ್ರೀಡಾಪಟುಗಳಿಗೆ ವಾರ್ಷಿಕ ತಲಾ 10 ಲಕ್ಷ ರೂ.