ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Meghana Raj : ಎರಡನೇ ಮದುವೆ ಬಗ್ಗೆ ಮೇಘನಾ ರಾಜ್ ಶಾಕಿಂಗ್ ಹೇಳಿಕೆ! 

ಬೆಂಗಳೂರು :- ಕನ್ನಡ ಚಲನಚಿತ್ರ ನಟಿ ಮೇಘನಾ ರಾಜ್ (Meghana Raj)ಚಿರಂಜೀವಿ ಸರ್ಜಾ ಅವರನ್ನ ಕಳೆದು ಕೊಂಡ ನೋವು ಇನ್ನೂ ಕಡಿಮೆಯಾಗಿಲ್ಲ. ಆದ್ರೆ ಮೇಘನಾ ರಾಜ್ಯ ಇನ್ನೊಂದು ಮದುವೆ ಆಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.
05:28 PM Mar 11, 2025 IST | ಶುಭಸಾಗರ್

Meghana Raj : ಎರಡನೇ ಮದುವೆ ಬಗ್ಗೆ ಮೇಘನಾ ರಾಜ್ ಶಾಕಿಂಗ್ ಹೇಳಿಕೆ!

Advertisement

ಬೆಂಗಳೂರು :- ಕನ್ನಡ ಚಲನಚಿತ್ರ ನಟಿ ಮೇಘನಾ ರಾಜ್ (Meghana Raj)ಚಿರಂಜೀವಿ ಸರ್ಜಾ ಅವರನ್ನ ಕಳೆದು ಕೊಂಡ ನೋವು ಇನ್ನೂ ಕಡಿಮೆಯಾಗಿಲ್ಲ. ಆದ್ರೆ ಮೇಘನಾ ರಾಜ್ಯ ಇನ್ನೊಂದು ಮದುವೆ ಆಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಸುದ್ದಿಯನ್ನ ಮೌನವಾಗಿಯೇ ಕೇಳುತಿದ್ದ ಮೇಘನ ಇದೀಗ ತುಟಿ ಬಿಚ್ಚಿ ಮಾತನಾಡಿದ್ದಾರೆ.ಹೌದು ಖಾಸಗಿ Youtub ಚಾನಲ್ ಒಂದರ ಸಂದರ್ಶನದಲ್ಲಿ ತಮ್ಮ ಮರು ಮದುವೆ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ:-Sandalwood : ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ

Advertisement

ನಮಗೆ ಸಮಾಧಾನವಾಗುತ್ತೆ ಎಂದು ಅಂದುಕೊಂಡು ಅವರು ಹೀಗೆ ಮಾತನಾಡುತ್ತಾರಾ ಅಥವಾ ನೋವಲ್ಲಿರುವ ನಮಗೆ ಇನ್ನೂ ನೋವು ಕೋಡಬೇಕು ಎಂಬ ಉದ್ದೇಶದಲ್ಲಿ ಮಾತನಾಡುತ್ತಾರಾ, ಟ್ರೋಲ್ ಮಾಡುತ್ತಾರಾ ಗೊತ್ತಿಲ್ಲ, ಆದರೆ ಅದೆಲ್ಲ ನೋಡಿದಾಗ ನನಗೆ ಸ್ವಲ್ಪ ಮನರಂಜನೆ ಸಿಗುತ್ತೆ ಎಂದು ಮೇಘನಾ ಹೇಳಿದ್ದಾರೆ.

 ಜನ ಹೀಗೆ ಮಾತನಾಡುವುದು ಎಂದು ನಾವು ಒಪ್ಪಿಕೊಳ್ಳಬೇಕು ಯಾಕೆಂದರೆ ನನ್ನ ಬಗ್ಗೆ ಮಾತ್ರವಲ್ಲ ವಿಜಯ್ ರಾಘವೇಂದ್ರ ವಿಚಾರದಲ್ಲಿ ಕೂಡ ಜನ ಹೀಗೆ ಮಾತನಾಡಿದ್ದಾರೆ .

ಇದನ್ನೂ ಓದಿ:-ಅಂಕೋಲ|ಸಿನಿಮಾ ಚಿತ್ರಿಕರಣದ ವೇಳೆ ಹೆಜ್ಜೇನು ದಾಳಿ: ಇಬ್ಬರು ಗಂಭೀರ

ರಾಯನ್ ಕಣ್ಣೇದುರು ದೈಹಿಕವಾಗಿ ತಂದೆಯ ಸ್ಥಾನದಲ್ಲಿ ಒಬ್ಬರು ಇರಬೇಕಿತ್ತು ಎಂಬ ಆಲೋಚನೆ ನನಗೆ ಬಂದಿಲ್ಲ ಎಂದು ಹೇಳಿದರೆ ಅದು ಸುಳ್ಳಾಗುತ್ತೆ ಯಾಕೆಂದರೆ ನನ್ನ ಮಗ ಚಿರು ಬಗ್ಗೆ ಮಾತನಾಡದ ದಿನ ಇಲ್ಲ ,ಚಿರು ಹಾಡುಗಳನ್ನು ರಾಯನ್ ನೋಡುತ್ತಾನೆ, ಸಿನಿಮಾಗಳನ್ನು ನೋಡುತ್ತಾನೆ, ಅಪ್ಪ ಅಂದರೆ ಅದು ಚಿರು ಎಂದು ಅವನಿಗೆ ಗೊತ್ತು ಎಂದು ಮಗನ ಕುರಿತು ಮೇಘನಾ ಅವರು ಮಾತನಾಡಿದ್ದಾರೆ.

ನಾನು ಅವನಿಗೆ ಹೇಳ್ತಾ ಇರ್ತಿನಿ, ನೀನು ನಿನ್ನ ಅಪ್ಪನ ತರಹನೇ ಮಾಡ್ತೀಯಾ. ನನ್ನ ತಾಯಿ ಬಳಿಯೂ ಹೇಳ್ತಾ ಇರ್ತಿನಿ ರಾಯನ್‌ ಎಲ್ಲಾ ಚಿರುನೇ ಅಮ್ಮ ಅಂತ. ತಂದೆ ಅಂತ ಒಬ್ಬರು ನನ್ನ ಜೀವನದಲ್ಲಿ ಇದ್ದಾರೆ ನಮ್ಮ ಸುತ್ತ ಮುತ್ತ ಇದ್ದಾರೆ ಎನ್ನುವುದು ರಾಯನ್‌ಗೆ ಗೊತ್ತು ಆದರೆ ದೈಹಿಕವಾಗಿ ಅವನು ನೋಡಿಲ್ಲ ಅಷ್ಟೇ ಎಂದು ಹೇಳಿದ್ದಾರೆ. ಫಿಸಿಕಲ್ ಫಿಗರ್ ನಮ್ಮ ನಡುವೆ ಇದ್ದರೆ ಚೆನ್ನಾಗಿರುತ್ತೆ ಎನ್ನುವ ಆಲೋಚನೆ ನನಗೆ ಆಗಾಗ ಬಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:-Actor Umashree ಮಂಥರೆ yakshagana ವೇಶ ಹೇಗಿದೆ ಗೊತ್ತಾ| ವಿಡಿಯೋ ನೋಡಿ

 ಹಾಗೊಂದು ವೇಳೆ ಎರಡನೇ ಮದುವೆ ಆದರೆ ಸಮಾಜ ಒಪ್ಪಿಕೊಳ್ಳುತ್ತಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ಮೇಘನಾ ಸಮಾಜ ಒಪ್ಪಿಕೊಳ್ಳುತ್ತಾ ಅಥವಾ ನನ್ನ ನಿರ್ಧಾರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಒತ್ತಡ ಇದ್ದೇ ಇದೆ ಎಂದು ಹೇಳಿದ್ದಾರೆ.

ನನಗೆ ಇರುವ ಇಮೇಜ್ ನನ್ನದಲ್ಲ ಬದಲಿಗೆ ಅದು ನನ್ನ ಸುತ್ತ ಮುತ್ತ ಇರುವ ವ್ಯಕ್ತಿಗಳಿಂದ, ಅಭಿಮಾನಿಗಳಿಂದ, ಸೋಶಿಯಲ್ ಮೀಡಿಯಾ ಫ್ಯಾಮಿಲಿಯಿಂದ ಸೃಷ್ಟಿಯಾಗಿದ್ದು, ಹೀಗಾಗಿ ಬೇರೆ ರೀತಿ ಯೋಚನೆ ಮಾಡಬೇಕು ಎಂದು ಅಂದುಕೊಂಡರು ಕೂಡ ಅದು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

Advertisement
Tags :
ActorActor marrageActor meghna raj marrageKannda newsKarnatakaMeghana Raj
Advertisement
Next Article
Advertisement