Karnataka: ವಿದೇಶಾಂಗ ಇಲಾಖೆ ಸೂಚನೆ ಇದ್ರೂ ಭಟ್ಕಳ ಪಾಕಿಸ್ತಾನದ ಪ್ರಜೆಗಳು ಭಟ್ಕಳದಲ್ಲಿ! ಏನಿದು ವಿಶೇಷ ಸೂಚನೆ?
Karnataka: ವಿದೇಶಾಂಗ ಇಲಾಖೆ ಸೂಚನೆ ಇದ್ರೂ ಭಟ್ಕಳ ಪಾಕಿಸ್ತಾನದ ಪ್ರಜೆಗಳು ಭಟ್ಕಳದಲ್ಲಿ! ಏನಿದು ವಿಶೇಷ ಸೂಚನೆ?
ಕಾರವಾರ :- ಕಾಶ್ಮೀರದ(kasmir) ಪಹಲ್ಗಾಂ ನರಮೇಧ ನಡೆದ ಬೆನ್ನಲ್ಲೇ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನಿ ಪ್ರಜೆಗಳಿಗೆ 48 ಗಂಟೆಯಲ್ಲಿ ದೇಶ ತೊರೆಯಲು ಕೇಂದ್ರ ಸರ್ಕಾರ ಗಡುವನ್ನೇನೋ ನೀಡಿತ್ತು.ಆದ್ರೆ ವಿದೇಶಾಂಗ ಇಲಾಖೆಯ ಸೂಚನೆ ಯಿದ್ರೂ ಉತ್ತರ ಕನ್ನಡ ಜಿಲ್ಲೆಯ 15 ಜನ ಪಾಕಿಸ್ತಾನಿ ಪ್ರಜೆಗಳು ದೀರ್ಘಾವಧಿ ವಿಸಾ ನೆಪವೊಡ್ಡಿ ಜಿಲ್ಲೆಯಲ್ಲೇ ಉಳಿದಿದ್ದು, ಪೊಲೀಸ್ ಇಲಾಖೆ ಸಹ ಮಾಹಿತಿ ನೀಡದೇ ಬೇರೆಡೆ ತೆರಳದಂತೆ ಸೂಚಿಸಿದೆ.

ಭಾರತ ಫಾಕಿಸ್ತಾನ (pakisthan)ಸಂಬಂಧದಲ್ಲಿ ಬದ್ಧ ವೈರಿಗಳಾದರೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮಟ್ಟಿಗೆ ಅಲ್ಲಿನ ರಕ್ತ ಸಂಬಂಧವೇ ಬೇರೆ.
ಭಾರತ ವಿಭಜನೆ ನಂತರ ಭಟ್ಕಳದ (bhatkal)ಹಲವು ಮುಸ್ಲೀಂ ಕುಟುಂಬಗಳು ದೇಶ ತೊರೆದರೂ ತಮ್ಮರಕ್ತ ಸಂಬಂಧಿಗಳನ್ನು ಭಟ್ಕಳದಲ್ಲಿ ಹೊಂದಿದ್ದಾರೆ.
ಇದನ್ನೂ ಓದಿ:-Karnataka|ಜಾತಿ ಗಣತಿ ವರದಿ,ವಿಶೇಷ ಸಚಿವ ಸಂಪುಟ ಸಭೆ ಹೈಲೈಟ್ಸ್ ಇಲ್ಲಿದೆ.
ಉದ್ಯೋಗಕ್ಕಾಗಿ ಗಲ್ಫ್ ರಾಷ್ಟ್ರಗಳಿಗೆ ತೆರಳಿದ ಭಟ್ಕಳ ಯುವಕರು ಪಾಕಿಸ್ತಾನದ ಯುವತಿಯರನ್ನು ವಿವಾಹವಾಗಿದ್ದಾರೆ.ಇಂತಹ ಯುವಕರು ಮರಳಿ ತನ್ನೂರಿಗೆ ಬಂದಾಗ ಅವರ ಜೊತೆ ಪತ್ನಿಯರನ್ನೂ ದೀರ್ಘಾವಧಿ ವಿಸಾ ಜೊತೆ ಕರೆತಂದು ಭಟ್ಕಳದಲ್ಲೇ ನೆಲಸಿದ್ದಾರೆ.
ಹೀಗೆ ನೆಲಸಿದವರಲ್ಲಿ ಭಟ್ಕಳದ 15 ಜನ ಪಾಕಿಸ್ತಾನಿ ಪ್ರಜೆಗಳಿದ್ದು ,ಪ್ರತಿ ಎರಡು ವರ್ಷಕ್ಕೆ ವಿಸಾ ಅವಧಿಯನ್ನು ಪರಿಷ್ಕರಿಸಿಕೊಳ್ಳುತಿದ್ದಾರೆ. ಎಲ್ಲಿ ಕಾಶ್ಮೀರದ ಪಹಲ್ಗಾಂ ನಲ್ಲಿ ಹಿಂದುಗಳ ನರಮೇಧ ನಡೆಯುತೋ ಕೇಂದ್ರ ಸರ್ಕಾರ ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ವನ್ನು ತೊರೆಯಲು 48 ಗಂಟೆಗಳ ಗಡುವು ನೀಡಿದ್ದು ಅದು ಮುಕ್ತಾಯವಾಗಿದೆ.
ಇದನ್ನೂ ಓದಿ:-Bhatkal| ಗರ್ಭಿಣಿ ಹಸು ಹ** ಮಾಡಿ ಕರುವಿನ ಬ್ರೂಣ ಎಸೆದ ಕಿರಾತಕರು
ಇತ್ತ ಕೇಂದ್ರಸರ್ಕಾರದ ಸೂಚನೆ ಬರುತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಪಾಕಿಸ್ತಾನದ (pakisthan) ಪ್ರಜೆಗಳ ಮಾಹಿತಿ ಮತ್ತು ವಿಸಾ ಅವಧಿಯನ್ನು ತಪಾಸಣೆಗೊಳಪಡಿಸಿತು.
ಈ ಪ್ರಕಾರ 14 ಜನ ಭಟ್ಕಳದಲ್ಲಿ ಇದ್ದರೇ ಓರ್ವ ಮಹಿಳೆ ಕಾರವಾರದಲ್ಲಿದ್ದಾರೆ. ಇನ್ನು ಇವರಲ್ಲಿ 10 ಜನ ಮಹಿಳೆಯರಿದ್ದು ಮೂವರು ಮಕ್ಕಳಿದ್ದಾರೆ. ಇನ್ನೊಬ್ಬ ಮಹಿಳೆ ನ್ಯಾಯಾಲಯದ ಮೊಕದ್ದಮೆ ಎದುರಿಸುತಿದ್ದಾರೆ.
ಹೀಗಾಗಿ ಇವರ ಮಾಹಿತಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ರಾಜ್ಯ ಗೃಹ ಇಲಾಖೆಗೆ ರವಾನೆ ಮಾಡಿದ್ದು ಸರ್ಕಾರದ ಸೂಚನೆ ಬರುವ ವರೆಗೆ ಇತರೆ ಸ್ಥಳಕ್ಕೆ ತೆರಳದಂತೆ ಮೌಕಿಕ ಸೂಚನೆ ನೀಡಿದೆ.
ಇದಲ್ಲದೇ ಇವರ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಸಹ ಕೇಂದ್ರ ಸರ್ಕಾರಕ್ಕೆ ರವಾನಿಸಿದೆ. ಇನ್ನು ದೀರ್ಘಾವಧಿ ವಿಸಾ ಇರುವುದರಿಂದ ಇವರು ಮುಂದಿನ ಸೂಚನೆ ಬರುವ ವರೆಗೆ ಇಲ್ಲಿಯೇ ಇರುವುದಾಗಿ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ತಿಳಿಸಿದ್ದು ,ಭಟ್ಕಳದಲ್ಲಿ ಬಿಗೀ ಪೊಲೀಸ್ ಬಂದವಸ್ತ್ ಸಹ ಕಲ್ಪಿಸಿದೆ.

ಇನ್ನು ವಿದೇಶಾಂಗ ಇಲಾಖೆಯಿಂದ ಯಾವುದೇ ವಿಸಾ ಹೊಂದಿದ್ದರೂ ಪಾಕಿಸ್ತಾನದ ಮುಸ್ಲಿಂ ಪ್ರಜೆಯಾಗಿದ್ದರೇ ಅವರು ಪಾಕಿಸ್ತಾನಕ್ಕೆ ಕಡ್ಡಾಯವಾಗಿ ತೆರಳಬೇಕು , ಒಂದುವೇಳೆ ದೀರ್ಘಾವಧಿ ವಿಸಾದಡಿ ಹಿಂದೂ ಪ್ರಜೆ ಭಾರತದಲ್ಲಿ ನೆಲಸಿದ್ದರೆ ಮಾತ್ರ ಅವರಿಗೆ ವಿನಾಯಿತಿ ಎಂದು ಪ್ರಕಟಣೆ ಹೊರಡಿಸಿದೆ. ಆದರೇ ಭಟ್ಕಳ ದಲ್ಲಿ ಮುಸ್ಲಿಂ ಪ್ರಜೆಯಾಗಿದ್ದರೂ ಭಾರತವನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಲು ಪಾಕಿಸ್ತಾನಿ ಪ್ರಜೆಗಳು ಸಿದ್ದವಾಗಿಲ್ಲ. ಇನ್ನು ಕೇಂದ್ರ ವಿದೇಶಾಂಗ ಇಲಾಖೆ ಪ್ರಕಟಣೆ ಹೊರಡಿಸಿದರೂ ಯಾವುದೇ ಸೂಚನೆಗಳು ಜಿಲ್ಲಾ ಪೊಲೀಸ್ ಇಲಾಖೆಗೆ ಬಂದಿಲ್ಲ ಎಂಬುದು ಪೊಲೀಸ್ ಮೂಲಗಳು ಹೇಳುತಿದ್ದು, ಒಂದುವೇಳೆ ಈ ಬಗ್ಗೆ ಸೂಚನೆ ಬಂದರೆ ಮಾತ್ರ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಿದ್ದತೆ ನಡೆಸಿದೆ.
ವಿದೇಶಾಂಗ ಇಲಾಖೆ ಯಿಂದ ಪ್ರಕಟಣೆ ಇಲ್ಲಿದೆ:-

ಕೇಂದ್ರ ವಿದೇಶಾಂಗ ಇಲಾಖೆ ಪಾಕಿಸ್ತಾನದಿಂದ ಬಂದ ಮುಸ್ಲಿಂ ಪ್ರಜೆಗಳು ಕಡ್ಡಾಯವಾಗಿ ಭಾರತ ತೊರೆಯಲು ತಿಳಿಸಿದೆ. ಗೊಂದಲ ಆಗದಂತೆ ಪಾಕಿಸ್ತಾನದ ಹಿಂದೂ ಪ್ರಜೆಗಳಿಗೆ ಮಾತ್ರ ವಿನಾಯಿತಿ ಎಂದು ಪ್ರಕಟಣೆ ಹೊರಡಿಸಿದೆ. ಆದರೇ ಕರ್ನಾಟಕ ಸೇರಿದಂತೆ ಹಲವು ರಾಜ್ಯದ ಸರ್ಕಾರದ ಇಬ್ಬಗೆಯ ನೀತಿ ಇದೀಗ ದೇಶ ಹಾಗೂ ಭಟ್ಕಳದಲ್ಲಿ ಇರುವ ಪಾಕಿಸ್ತಾನಿ ಪ್ರಜೆಗಳಿಗೆ ಅತ್ತ ಪಾಕಿಸ್ತಾನವೂ ಇಲ್ಲ ,ಇತ್ತಾ ಭಾರತವೂ ಇಲ್ಲ ಎನ್ನುವ ತ್ರಿಶಂಕು ಸ್ಥಿತಿಗೆ ತಳ್ಳಿದ್ದು ವಿವಾದ ಎಬ್ಬಿಸುವಂತಾಗಿದೆ.