Kumta | ಓಲೆ, ಮೂಗುತಿ, ಜನಿವಾರ, ತೆಗೆಸುವುದನ್ನು ಸಹಿಸುವುದಿಲ್ಲ-ಎಂ ಜಿ ಭಟ್| ಬೀದರ್ ನಲ್ಲಿ ಜನಿವಾರ ತೆಗೆಸಿದವರು ಕೆಲಸದಿಂದ ಅಮಾನತು.
Kumta | ಓಲೆ, ಮೂಗುತಿ, ಜನಿವಾರ, ತೆಗೆಸುವುದನ್ನು ಸಹಿಸುವುದಿಲ್ಲ-ಎಂ ಜಿ ಭಟ್| ಬೀದರ್ ನಲ್ಲಿ ಜನಿವಾರ ತೆಗೆಸಿದವರು ಕೆಲಸದಿಂದ ಅಮಾನತು.

Kumta :- CET ಪರೀಕ್ಷೆ ಬರೆಯುವ ಹಿಂದೂ ಸಮಾಜದ ಮಕ್ಕಳಿಗೆ ಓಲೆ ತೆಗೆಸುವುದು ಮೂಗುತಿ ತೆಗಿಸುವುದು ಜನಿವಾರ ತೆಗೆಸುವುದನ್ನು ಹಿಂದೂ ಸಮಾಜ ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಜನಪರ ಹೋರಾಟ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಮ್ ಜಿ ಭಟ್ಟವರು ಸರ್ಕಾರದ ಈ ನಡೆಯನ್ನ ಉಗ್ರವಾಗಿ ಖಂಡಿಸಿದ್ದಾರೆ.
ಮೂಗುತಿ ಧರಿಸುವುದು ಕಿವಿಯೋಲೆ ಧರಿಸುವುದು ಸಮಸ್ತ ಹಿಂದೂ ಸಮಾಜದ ಹೆಣ್ಣು ಮಕ್ಕಳ ಸಂಪ್ರದಾಯ ಪರೀಕ್ಷೆ ಬರೆಯುವಾಗ ಇಲ್ಲದ ಸಲ್ಲದ ನೆಪ ಹೇಳಿ ಇವುಗಳನ್ನು ತೆಗೆಸಿದ್ದು ಹಿಂದೂ ಸಮಾಜ ಇದನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಇದನ್ನೂ ಓದಿ:-Kumta :ಕರ್ತವ್ಯದಲ್ಲಿ ಮದ್ಯ ಸೇವಿಸಿ ಹಿರಿಯ ಅಧಿಕಾರಿ ಜೊತೆ ಅನುಚಿತ ವರ್ತನೆ -ಸೇವೆಯಿಂದ ಅಮಾನತು.
ಇದನ್ನು ಇಡೀ ಹಿಂದೂ ಸಮಾಜ ಒಕ್ಕೋರಲಿಂದ ವಿರೋದಿಸುತ್ತದೆ. ಈ ರೀತಿ ವರ್ತನೆಯನ್ನು ತಕ್ಷಣವೇ ನಿಲ್ಲಿಸಿ ಹಿಂದೂ ಹೆಣ್ಣು ಮಕ್ಕಳ ಓಲೆ ಮೂಗುತಿ ತೆಗೆ ಸುವ ಕ್ರಮವನ್ನು ತಕ್ಷಣದಿಂದ ನಿಲ್ಲಿಸಬೇಕು.ಇನ್ನೊಂದು ಕಡೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಬುರ್ಖಾ ಧರಿಸಲು ಅವಕಾಶ ಕೊಟ್ಟಿದ್ದು ನಮ್ಮ ಸಮಾಜವನ್ನು ನೇರವಾಗಿ ಚಾಲೆಂಜ್ ಮಾಡ್ತಾ ಇರುವಂತಿದೆ. ಜೊತೆಗೆ ಜನಿವಾರ ಧರಿಸುವುದು ಕೂಡ ಬ್ರಾಹ್ಮಣರ ಸಂಪ್ರದಾಯ.
ಹಾಗಾಗಿ ಈಗಾಗಲೇ ಎರಡು ವಿದ್ಯಾರ್ಥಿಗಳನ್ನು ಜನಿವಾರ ಧರಿಸಿರುವುದರಿಂದ ಪರೀಕ್ಷೆ ಬರೆದಂತೆ ತಡೆಯಲಾಗಿದ್ದು ಆ ವಿದ್ಯಾರ್ಥಿಗಳ ಭವಿಷ್ಯ ಜೊತೆಗೆ ಚೆಲ್ಲಾಟವಾಡಿದ ಅಧಿಕಾರಿಯನ್ನ ತಕ್ಷಣವೇ ಅಮಾನತುಗೊಳಿಸಬೇಕು ಸೂಕ್ತ ತನಿಖೆ ನಡೆಸಿ ಅವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು.ಮುಂದಿನ ದಿನಗಳಲ್ಲಿ ಇದರ ವಿರುದ್ದ ಅವಿರತವಾದ ಹೋರಾಟ ನಡೆಸಲಾಗುವುದು ಎಂದು ಜನಪರ ಹೋರಾಟ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ. ಎಂ ಜಿ ಭಟ್ ಅಗ್ರಹಿಸಿದ್ದಾರೆ.
ಜನಿವಾರ ವಾರ್ – ಬೀದರ್ ಪ್ರಾಂಶುಪಾಲ, ಎಸ್‌ಡಿಎ ಕೆಲಸದಿಂದಲೇ ವಜಾ.
ಬೀದರ್ : ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆ ಬರೆಯಲು ಅನುಮತಿ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಯಿ ಸ್ಪೂರ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮತ್ತು ಎಸ್‌ಡಿಎ ಸಿಬ್ಬಂದಿಯನ್ನು ಕೆಲಸದಿಂದಲೇ ವಜಾ ಮಾಡಲಾಗಿದೆ.

ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾಧಿಕಾರಿ ಪ್ರಾಂಶುಪಾಲ ಚಂದ್ರಶೇಖರ್ ಬಿರಾದರ್ ಮತ್ತು ಎಸ್‌ಡಿಎ ಸತೀಶ ಪವಾರ್ ಅವರನ್ನು ಅಮಾನತು ಮಾಡುವಂತೆ ಸೂಚಿಸಿದ್ದರು. ಡಿಸಿಯಿಂದ ಆದೇಶ ಬಂದ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ಇಬ್ಬರನ್ನು ಕೆಲಸದಿಂದ ವಜಾ ಮಾಡಿದೆ.
ಖಾಸಗಿ ಕಾಲೇಜು ಆಗಿರುವ ಕಾರಣ ಶಾಲಾ ಆಡಳಿತ ಮಂಡಳಿಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಸೂಚಿಸಿತ್ತು. ಸಾಯಿ ಸ್ಪೂರ್ತಿ ಪದವಿ ಪೂರ್ವ ಕಾಲೇಜ್ ಇಬ್ಬರನ್ನು ತಕ್ಷಣದಿಂದಲೇ ವಜಾ ಮಾಡಿದೆ.