Karwar |ಹಳಿ ಮೇಲೆ ಐದು ನಿಮಿಷದಲ್ಲಿ 500 ಮೀಟರ್ ಓಡಿ ರೈಲು ದುರಂತ ತಪ್ಪಿಸಿದ ಮಾಧವ!
ಕಾರವಾರ :- ರೈಲ್ವೆ ವಿಭಾಗದಲ್ಲಿ (Railway )ಹಳಿಗಳ ನಿರ್ವಹಣೆ ನೋಡಿಕೊಳ್ಳುವ ಭಟ್ಕಳದ ಮಾದೇವ (Bhatkal) ನಾಯ್ಕ ಅವರು ತಮ್ಮ ಸಮಯ ಪ್ರಜ್ಞೆಯಿಂದ ಹಳಿ ತಪ್ಪಿ ಅಪಾಯಕ್ಕೆ ಸಿಲುಕಲಿದ್ದ ರಾಜಧಾನಿ ಎಕ್ಸಪ್ರಸ್ (rajadani express) ರೈಲನ್ನು ನಿಲ್ಲಿಸುವುದರ ಮೂಲಕ ಸಾವಿರಾರು ಜನರ ಜೀವ ರಕ್ಷಣೆ ಮಾಡಿದ್ದಾರೆ.
ಏನಿದು ಘಟನೆ?
ಸೆ. 4 ರಂದು ಕೊಂಕಣ ರೈಲ್ವೆ ಮಾರ್ಗದಲ್ಲಿ ಕುಮಟಾ-ಹೊನ್ನಾವರ ನಡುವೆ ಹಳಿಗಳ ವೆಲ್ಡಿಂಗ್ ತಪ್ಪಿಹೋಗಿತ್ತು.
ಬುಧವಾರ ಮುಂಜಾನೆ 4.51ಕ್ಕೆ ಬ್ಯಾಟರಿ ಹಿಡಿದು ರೈಲ್ವೆ ಮಾರ್ಗ ಪರಿಶೀಲನೆ ಮಾಡುತ್ತಿದ್ದ ಮಾದೇವ ನಾಯ್ಕ್, ಇದನ್ನು ಗಮನಿಸಿ ತಿರುವನಂತಪುರದಿಂದ ನವದೆಹಲಿ ಕಡೆಗೆ ಹೋಗುವ ರೈಲನ್ನು ಹೊನ್ನಾವರದಲ್ಲಿಯೇ ನಿಲ್ಲಿಸಲು ಸ್ಟೇಶನ್ ಮಾಸ್ಟರ್‌ಗೆ ಫೋನ್ ಮಾಡಿದ್ದರು.
ಆದರೆ ಬೆಳಗ್ಗೆ 4.59ಕ್ಕೆ ರೈಲು ಹೊನ್ನಾವರದಿಂದ ಮುಂದೆ ಸಾಗಿ ಹೋಗಿತ್ತು. ಹೀಗಾಗಿ ರೈಲು ನಿಲ್ಲಿಸಲು ಕೆಂಪು ದೀಪ ಹಿಡಿದು ಐದು ನಿಮಿಷದಲ್ಲಿ 500 ಮೀಟರ್ ಓಡಿಹೋಗಿ ರೈಲು ಬರುತಿದ್ದ ಹಳಿಯ ಭಾಗದಲ್ಲಿ ನಿಂತು ಕೆಂಪು ದ್ವೀಪವನ್ನು ಹಿಡಿದು ಜೀವ ಪಣಕ್ಕಿಟ್ಟಿ ನಿಂತಿದ್ದರು. ಇದನ್ನ ಗಮನಿಸಿದ ರೈಲಿನ ಮಾಸ್ಟರ್ ರೈಲನ್ನು ನಿಲ್ಲಿಸುವ ಮೂಲಕ ದೊಡ್ಡ ದುರಂತ ತಪ್ಪಿಸಿದ್ದಾರೆ.