Shirur| ಮುಂದುವರೆದ ಕಾರ್ಯಾಚರಣೆ ಅರ್ಜುನ್ ಶವ ಸಿಕ್ಕ ನಂತರ ಸಿಕ್ಕಿದ್ದೇನು?
ಅಂಕೋಲ'- ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಜುಲೈ 16 ರಂದು ಭೂ ಕುಸಿತವಾಗಿ 11 ಜನರು ಅಸುನೀಗಿದ್ದರು.
12:10 PM Sep 30, 2024 IST | ಶುಭಸಾಗರ್
ಅಂಕೋಲ'- ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಜುಲೈ 16 ರಂದು ಭೂ ಕುಸಿತವಾಗಿ 11 ಜನರು ಅಸುನೀಗಿದ್ದರು.
Advertisement
ಮೂರನೇ ಹಂತದ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ (Kerala Arjun) ಮೃತದೇಹವನ್ನು ಲಾರಿ ಸಮೇತ ಹೊರತೆಗೆಯಲಾಯಿತು.
ಇದೀಗ ಕಾರ್ಯಾಚರಣೆ ಮುಂದುವರೆದಿದ್ದು ನಿನ್ನೆ ದಿನ ಗಂಗಾವಳಿ ನದಿಯಲ್ಲಿ ಬಿದ್ದಿದ್ದ ಬೃಹತ್ ಆಲದ ಮರವನ್ನು ಹೊರತೆಗೆಯಲಾಗಿದೆ.
ಇದನ್ನೂ ಓದಿ:- ankola| ಈ ದೇವಸ್ಥಾನದಲ್ಲಿ ಗಿಡವೇ ಪ್ರಸಾದ!
ಇದಲ್ಲದೇ ಭೂ ಕುಸಿತದಲ್ಲಿ ಕುಸಿದು ಹೋಗಿದ್ದ ಹೋಟಲ್ ಅವಶೇಷಗಳು, ಹೈಪವರ್ ಲೈನ್ ನ ಕಂಬದ ತುಂಡಿನ ಅವಶೇಷಗಳನ್ನು ಹೊರತೆಗೆಯಲಾಗಿದೆ.
ಇನ್ನು ಡ್ರಜ್ಜಿಂಗ್ ಮಿಷನ್ ನಿಂದ ಇಂದು ಸಹ ಕಾರ್ಯಾಚರಣೆ ಮುಂದುವರೆದಿದ್ದು ಕಾಣೆಯಾದ ಜಗನ್ನಾಥ್ ನಾಯ್ಕ, ಲೋಕೇಶ್ ರವರ ಮೃತದೇಹ ಹೊರತೆಗೆಯುವ ಶೋಧ ಕಾರ್ಯ ನಡೆದಿದೆ.
Advertisement