Karnataka: ಡಿಕೆ ಶಿವಕುಮಾರ್ ಏರಿದ ಸ್ಕೂಟರ್ ಮೇಲೆ 18,500 ದಂಡ ಬಾಕಿ!
Karnataka: ಡಿಕೆ ಶಿವಕುಮಾರ್ ಏರಿದ ಸ್ಕೂಟರ್ ಮೇಲೆ 18,500 ದಂಡ ಬಾಕಿ!
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಏನೇ ಮಾಡಲು ಹೋದ್ರೂ (Dk shivkumar)ಒಂದಲ್ಲಾ ಒಂದು ವಿವಾದಕ್ಕೆ ಈಡಾಗುತ್ತಲೇ ಇದ್ದಾರೆ. ಈ ಹಿಂದೆ ವಿಧಾನ ಸೌದಕ್ಕೆ ಸೈಕಲ್ ಏರಿ ಬಂದು ಇಳಿಯುವಾಗ ಬಿದ್ದು ಟ್ರೋಲ್ ಆಗಿದ್ದರು.
ಆದರೇ ಇದೀಗ ಸ್ಕೂಟರ್ ಏರಿ ಹೋಗಿದ್ದ ಅವರು ಖುದ್ದು ನ್ಯಾಯಾಲಯದ ನಿಯಮ ಮೀರಿದರೇ ಅವರು ಏರಿದ ಸ್ಕೂಟರ್ ಹಲವು ಸಂವಾರ ನಿಯಮವನ್ನು ಉಲ್ಲಂಗಿಸಿ ಈವರೆಗೂ ದಂಡ ಪಾವತಿಸದೇ ಇರುವುದು ಬೆಳಕಿಗೆ ಬಂದಿದೆ.
ಹೌದು ಬೆಂಗಳೂರು ನಗರದ ಹೆಬ್ಬಾಳ ಮೇಲೇತುವೆ ಕಾಮಗಾರಿ ಪರಿಶೀಲನೆ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಓಡಿಸಿದ ದ್ವಿಚಕ್ರ ವಾಹನದ ಮೇಲೆ 18,500 ದಂಡ ಬಾಕಿ ಇದ್ದು, KA04JZ2087 ಸಂಖ್ಯೆಯ ವಾಹನ 34 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಿಷಯ ಇದೀಗ ಬೆಳಕಿಗೆ ಬಂದಿದೆ.
ಇದನ್ನೂ ಓದಿ:-Karnataka:ಸಾರಿಗೆ ನೌಕರರ ಮುಷ್ಕರಕ್ಕೆ ಉತ್ತರ ಕನ್ನಡ ,ಶಿವಮೊಗ್ಗ ಜಿಲ್ಲೆಯಲ್ಲಿ ಹೇಗಿತ್ತು ಪ್ರತಿಕ್ರಿಯೆ ?
ಕಾಮಗಾರಿ ಪರಿಶೀಲನೆ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಓಡಿಸಿದ ದ್ವಿಚಕ್ರ ವಾಹನದ ಮೇಲೆ ₹18,500 ದಂಡ ಬಾಕಿ ಇದ್ದು, KA04JZ2087 ಸಂಖ್ಯೆಯ ವಾಹನ 34 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದೆ.
ಘಟನೆ ಏನು?
ಬಿಡಿಎ ವತಿಯಿಂದ ಹೆಬ್ಬಾಳ ಜಂಕ್ಷನ್‌ನಲ್ಲಿ ನಿರ್ಮಿಸುತ್ತಿರುವ ಹೊಸ ಮೇಲ್ವೇತುವೆ ಕಾಮಗಾರಿ ವೀಕ್ಷಿಸಲು ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳೊಂದಿಗೆ ಬಂದಿದ್ದರು. ಸಚಿವ ಬೈರತಿ ಸುರೇಶ್ ಅವರೊಂದಿಗೆ ಹೆಲ್ಕೆಟ್, ಕಪ್ಪು ಕನ್ನಡಕ ಹಾಕಿಕೊಂಡು ಹೊಸ ಮೇಲ್ವೇತುವೆ ಮೇಲೆ ಡಿಯೋ ಸ್ಕೂಟರ್‌ನಲ್ಲಿ ಒಂದು ಸುತ್ತು ಹೋಗಿ ಬಂದರು.
ಆದರೆ, ಅವರು ಐಎಸ್‌ಐ ಗುರುತು ಇಲ್ಲದ, ಗುಣಮಟ್ಟ ಹೊಂದಿಲ್ಲದ ಹೆಲ್ಕೆಟ್ ಧರಿಸಿದ್ದರು. ಅಲ್ಲದೇ ಅವರ ಹಿಂದೆಯೇ ಮತ್ತೊಂದು ಸ್ಕೂಟರ್‌ನಲ್ಲಿ ಬರುತ್ತಿದ್ದ ಶಾಸಕ ಎನ್.ಎ. ಹ್ಯಾರಿಸ್ ಅವರು ಹೆಳ್ಮೆಟ್ ಧರಿಸದಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಹೆಲ್ಕೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್ ಸೇರಿದಂತೆ ಹಲವು ಪ್ರಕರಣಗಳು ಈ ವಾಹನದ ಮೇಲೆ ದಾಖಲಾಗಿದ್ದು, ಒಟ್ಟು ₹18,500 ದಂಡ ಪಾವತಿಸುವುದು ಬಾಕಿ ಇದೆ ಎಂದು ಸಂಚಾರ ಪೊಲೀಸ್ ಇಲಾಖೆಯ ದತ್ತಾಂಶಗಳಿಂದ ತಿಳಿದುಬಂದಿದೆ.
ಅಧಿಕಾರದಲ್ಲಿ ಇದ್ದವರೇ ಹೀಗೆ ಮಾಡಿದರೇ ಜನಸಾಮಾನ್ಯರು ಇನ್ನೇನು ಮಾಡಿಯಾರು ಅಂತ ಜನ ಮಾತನಾಡಿಕೊಳ್ಳುವಂತಾಗಿದೆ.