ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar|ಕದಂಬ ನೌಕಾನೆಯ ನಿಷೇಧಿತ ಪ್ರದೇಶದಲ್ಲಿ ರಾತ್ರಿ ಡ್ರೋನ್ ಹಾರಾಟ- ಗುಪ್ತಚರ ಇಲಾಖೆಯಿಂದ ತನಿಖೆ

Karwar News Drone flight in Kadamba Navy range
12:03 PM Oct 09, 2024 IST | ಶುಭಸಾಗರ್

ಕಾರವಾರ ಕದಂಬ ನೌಕಾನೆಯ ನಿಷೇಧಿತ ಪ್ರದೇಶದಲ್ಲಿ ರಾತ್ರಿ ಡ್ರೋನ್ ಹಾರಾಟ- ಗುಪ್ತಚರ ಇಲಾಖೆಯಿಂದ ತನಿಖೆ.

Advertisement

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬಾ ನೌಕಾನೆಲೆಯ ( Kadamba Naval base) ಭಾಗದಲ್ಲಿ ರಾತ್ರಿ ಅಪರಿಚಿತ ಡ್ರೋನ್ ಕ್ಯಾಮರಾ ಹಾರಿಸಲಾಗಿದ್ದು ನೌಕಾನೆಲೆಯ ಸರಹದ್ದಿನ ಭಾಗದಲ್ಲಿ ನಿಷೇಧ ವಿದ್ದರೂ ಡ್ರೋನ್ ಹಾರಿಸಿರುವುದು ಹಲವು ಅನುಮಾನ ಮೂಡಿಸಿದೆ. ಇತ್ತೀಚೆಗೆ ಹನಿಟ್ರಾಪ್ ಮೂಲಕ ಕದಂಬ ನೌಕಾನೆಲೆಯ ಫೋಟೋ ಮತ್ತು ಮಾಹಿತಿ ಯನ್ನು ಹೊರ ದೇಶದ ಗುಪ್ತಚರ ಸಂಸ್ಥೆಗೆ ನೀಡಿರುವ ಆರೋಪದಡಿ NIA ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸಿತ್ತು. ಇದರ ಬೆನ್ನಲ್ಲೇ ವಕ್ಕನಳ್ಳಿ ಭಾಗದಿಂದ ಐಎನ್ಎಸ್ ಪತಾಂಜಲಿ ಆಸ್ಪತ್ರೆ (INS pathanjali) ಹಿಂಬದಿಯಿಂದ ಬಿಣಗಾ ಚತುಷ್ಪಥ ಹೆದ್ದಾರಿಯ ಸುರಂಗ ಮಾರ್ಗದವರೆಗೂ ಡ್ರೋನ್ ಹಾರಿದ್ದು ಬೈಕ್ ಅಥವಾ ಸನ್ ರೂಫ್ ಕಾರ್ ಮೂಲಕ ತೆರಳುತ್ತಾ ಈ ಡ್ರೋನ್ ಆಪರೇಟ್ ಮಾಡಿರುವ ಸಂಶಯ ವ್ಯಕ್ತವಾಗಿದೆ.

ಇದನ್ನೂ ಓದಿ:- Karwar| ರಬ್ಬರ್ ಮೋಲ್ಡ್ ಕಾಟ ಬಂದಾಯ್ತು ನೀರಿನ ಘಟಕ! ಏನಿದು ಕಥೆ ?

ಡ್ರೋನ್ ( Drone camera) ಹಾರಿಸಿದ ಕುರಿತು ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಈ ದೃಶ್ಯ ಸೆರೆಯಾಗಿದ್ದು, ಅದನ್ನು ನೌಕಾಪಡೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

Advertisement

ಇದನ್ನೂ ಓದಿ:- Weather report| ಹವಾಮಾನ 09 october 2024

ಸುಮಾರು 2-3 ಕಿ.ಮೀ ದೂರದಿಂದ ಸೆರೆಯಾಗುವ ನೈಟ್ ವಿಶನ್ ಡ್ರೋನ್ ಬಳಕೆ ಮಾಡಿರುವುದು ದೃಡ ಪಟ್ಟಿದೆ.
ಹೆಚ್ಚಿನದಾಗಿ 600 ಮೀ. ಅಥವಾ 1,200 ಮೀ. ದೂರದವರೆಗೆ ಹಾರಾಡುವ ಸಾಮರ್ಥ್ಯದ ಡ್ರೋನ್ ಸ್ಥಳೀಯವಾಗಿ ಬಳಕೆಯಾಗೋದು ಸಾಮಾನ್ಯ
ಆದರೆ, ಈ ಡ್ರೋನ್ ಸುಮಾರು 3 ಕಿ.ಮೀ.ಗೂ ಹೆಚ್ಚು ದೂರ ಹಾರಾಡಿದ್ದು ನೌಕಾದಳ ಅಧಿಕಾರಿಗಳು,ಸ್ಥಳೀಯ ಪೊಲಿಸರು ಹಾಗೂ ಗುಪ್ತಚರ ಸಂಸ್ಥೆ ತನಿಖೆಗಿಳಿದಿದೆ.

ಅಧಿಕಾರಿಗಳಿಂದ ತನಿಖೆ.

ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಹಾಗೂ ನೌಕಾದಳದ ಅಧಿಕಾರಿಗಳು ಅರಣ್ಯ ಇಲಾಖೆ, ಹೆದ್ದಾರಿ ಕಾಮಗಾರಿ ನಡೆಸ್ತಿರುವ ಐಆರ್ ಬಿ ಹಾಗೂ NHAI ರವನ್ನು ಸಂಪರ್ಕಿಸಿ ಡ್ರೋನ್ ಬಳಸಿದ್ದಾರ ಎಂದು ತನಿಖೆ ನಡೆಸಿದ್ದು ಆದರೇ ಅವರೂ ಕೂಡ ಬಳಸದೇ ಇರುವುದು ಇದೀಗ ಯಾರು ನೈಟ್ ವಿಷನ್ ಡ್ರೋನ್ ಬಳಸಿದ್ದಾರೆ ಎಂಬ ಬಗ್ಗೆ ತನಿಖೆ ಕೈಗೊಳ್ಳಾಗಿದೆ. ಆದರೇ ಇದೀಗ ನೌಕಾದಳದ 3 ನೇ ಹಂತದ ಕಾಮಗಾರಿ ಮುಗಿಯುವ ಹಂತದಲ್ಲಿದ್ದು ಇದೀಗ ನಿಷೇಧಿತ ಪ್ರದೇಶದಲ್ಲಿ ಡ್ರೋನ್ ಹಾರಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

Advertisement
Tags :
Drone flightIndian NavyKadamba Navy rangeKarwarNavy
Advertisement
Next Article
Advertisement