For the best experience, open
https://m.kannadavani.news
on your mobile browser.
Advertisement

FENGAL CYCLONE EFFECT ನಾಳೆ ಈ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ|SCHOOL HOLIDAY 

Karnataka :-ಕರ್ನಾಟಕ ಕರಾವಳಿ ಭಾಗದಲ್ಲಿ ಬಂಗಾಳಕೊಲ್ಲಿಯಲ್ಲಿ ಎದ್ದಿರುವಂತ ಫಂಗಲ್ (Fengal cyclone) ಚಂಡಮಾರುತದಿಂದಾಗಿ ಮಳೆ ಅಬ್ಬರ ಪ್ರಾರಂಭವಾಗಿದೆ.
07:54 PM Dec 02, 2024 IST | ಶುಭಸಾಗರ್
fengal cyclone effect ನಾಳೆ ಈ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ school holiday 

Karnataka :-ಕರ್ನಾಟಕ ಕರಾವಳಿ ಭಾಗದಲ್ಲಿ ಬಂಗಾಳಕೊಲ್ಲಿಯಲ್ಲಿ ಎದ್ದಿರುವಂತ ಫಂಗಲ್ (Fengal cyclone) ಚಂಡಮಾರುತದಿಂದಾಗಿ ಮಳೆ ಅಬ್ಬರ ಪ್ರಾರಂಭವಾಗಿದೆ.

Advertisement

ಮಂಗಳೂರು (mangaluru) ಭಾಗದಲ್ಲಿ ಭಾರಿ ಮಳೆ, ಸುಳಿಗಾಳಿ ಬೀಸತೊಡಗಿದ್ದು ಈ ಹಿನ್ನಲೆಯಲ್ಲಿ ಮಂಗಳೂರು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶ ಹೊರಡಿಸಿದ್ದು ಜಿಲ್ಲೆಯಾಧ್ಯಾಂತ ಆರೆಂಜ್ ಅಲರ್ಟ ಘೋಷಿಸಲಾಗಿದೆ.

ಇನ್ನು ಈ ಆದೇಶದಲ್ಲಿ ಭಾರಿ ಮಳೆ ಹಾಗೂ ಚಳಿಯ ಕಾರಣದಿಂದಾಗಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷಷ್ಟಿಯಿಂದ ನಾಳೆ ಜಿಲ್ಲೆಯ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಈ ದಿನದ ತರಗತಿಗಳನ್ನು ಮುಂದಿನ ದಿನದಲ್ಲಿ ಸರಿದೂಗಿಸುವಂತೆ ಸೂಚಿಸಿದೆ.

ಮೈಸೂರು ಶಾಲಾ ಕಾಲೇಜಿಗೆ ರಜೆ ಘೋಷಣೆ.
ನಾಳೆ ಮೈಸೂರಿನಲ್ಲಿ ಹೆಚ್ಚಿನ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ .ಈ ಹಿನ್ನೆಲೆಯಲ್ಲಿ ಮೈಸೂರು (Mysore) ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ರಜೆ ಘೋಷಿಸಿ ಆದೇಶ ನೀಡಿದ್ದಾರೆ.

ಇದನ್ನೂ ಓದಿ:-Karnataka:ಬೋರ್‌ವೆಲ್‌ ಹಾಕಿಸಿದವರಿಗೆ ರಾಜ್ಯ ಸರ್ಕಾರದಿಂದ ಕಠಿಣ ನಿಯಮ ಜಾರಿ ,ಏನದು ವಿವರ ಇಲ್ಲಿದೆ.

ಚಿಕ್ಕಮಗಳೂರು/ ಚಾಮರಾಜ ನಗರ ನಾಳೆ ಶಾಲೆಗಳಿಗೆ ಮಾತ್ರ ರಜೆ

ಚಿಕ್ಕಮಗಳೂರು (Chikamangaluru)  ಹಾಗೂ ಚಾಮರಾಜ ನಗರ ಜಿಲ್ಲೆಯಲ್ಲಿ (chamrajnagar ) ಶಾಲೆ,ಅಂಗನವಾಡಿಗೆ ಮಾತ್ರ ರಜೆ ನೀಡಿದ್ದು ಕಾಲೇಜುಗಳು ಎಂದಿನಂತೆ ನಡೆಯಲಿದೆ.

ಇನ್ನು ಕೋಲಾರ , ಕೊಡಗು ,ಮಂಡ್ಯ,ಉಡುಪಿ ಜಿಲ್ಲೆಗಳಲ್ಲಿ ಸಹ ನಾಳೆ ಶಾಲಾ ಕಾಲೇಜುಗಳಿಗೆ ರಜೆಘೋಷಣೆಮಾಡಿ ಆದೇಶಿಸಿದ್ದಾರೆ.

ಬೆಂಗಳೂರು ಜಿಲ್ಲೆಯಲ್ಲಿ ರಜೆ ಇಲ್ಲ.

ಇನ್ನು ಬೆಂಗಳೂರಿನಲ್ಲಿ (Bengaluru ) ಮಳೆ (Rain)ಇದ್ದರೂ ಅದರ ಪರಿಣಾಮ ಕಮ್ಮಿ ಇರುವುದರಿಂದ ಎಂದಿನಂತೆ ಶಾಲಾ ಕಾಲೇಜುಗಳು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಮಾಹಿತಿ ನೀಡಿದ್ದಾರೆ.
-ವರದಿ ಸಾಗರ್.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ