Sirsi|ನಾನು ಬಿಜೆಪಿ ಸೇರೋದನ್ನ ಯಾರಿಂದಲೂ ತಪ್ಪಿಸೋಕೆ ಸಾಧ್ಯ ಇಲ್ಲ- ಈಶ್ವರಪ್ಪ
Sirsi News :-ಬಿಜೆಪಿ(Bjp) ಇರೋದು ಹಿಂದುತ್ವಕ್ಕೋಸ್ಕರ ,ಸರ್ವಾಧಿಕಾರ ಭಾರತೀಯ ಜನತಾ ಪಾರ್ಟಿಯಲ್ಲಿ ಇರಕೂಡದು.ಪಕ್ಷ ಒಂದು ಕುಟುಂಬದ ಕೈಯಲ್ಲಿ ಸಿಲುಕಿ ಆದೋಗತಿಗೆ ಹೋಗುತ್ತಿದೆ, ಅಪ್ಪ ಮಕ್ಕಳ ಕೈಯಲ್ಲಿ ಪಕ್ಷ ನಲುಗಿಹೋಗಿದೆ.
ಸಸ್ಪೆಂಡ್ ಎಲ್ಲಾ ತಾತ್ಕಾಲಿಕ, ತಾಯಿಯಿಂದ ನನ್ನ ಬೇರ್ಪಡಿಸಲು ಯಾರಿಂದಲೂ ಆಗೋದಿಲ್ಲ ನಾನು ಬಿಜೆಪಿ ಪಕ್ಷಕ್ಕೆ ಹೋಗೇ ಹೋಗುತ್ತೇನೆ,ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಹೇಳಿದರು.
ಇಂದು ಶಿರಸಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಒಂದೇ ಕುಟುಂಬ ರಾಜಕಾರಣ ಮುಕ್ತವಾಗ್ಬೇಕು
ಕರ್ನಾಟಕ ಬಿಜೆಪಿ ಇಂಡಿಯಾದಿಂದ ಹೊರಗಿದ್ಯಾ?
ಕರ್ನಾಟಕದಲ್ಲಿ ಅಪ್ಪ ಒಬ್ಬ ಮಗ ಎಂ.ಪಿ, ಇನ್ನೊಬ್ಬ ರಾಜ್ಯಾಧ್ಯಕ್ಷ. ಇದರ ವಿರುದ್ಧ ನಾನು ಹೋರಾಟ ಮಾಡಿದ್ದು,ನಂಗೆ ಗೊತ್ತಿತ್ತು ನಾನು ಗೆಲ್ಲಲ್ಲ ಅಂತ
ಪಕ್ಷದಿಂದ ಹೊರಗಡೆ ಹಾಕ್ತಾರೆ ಅಂತ.
ಈ ಸಸ್ಪೆನ್ಡ್ ಎಲ್ಲಾ ತಾತ್ಕಾಲಿಕ ಬಿಜೆಪಿ ನನ್ನ ತಾಯಿ, ತಾಯಿಯಿಂದ ಬೇರ್ಪಡಿಸೋಕೆ ಯಾವನ್ ಕೈಲೂ ಆಗಲ್ಲ ಚುನಾವಣೆಗೆ ನಿಂತ ವಿಚಾರ ಚರ್ಚೆ ಆದ್ಮೇಲೆ ನಾನು ಬಿಜೆಪಿಗೆ ಹೋಗೋನೇ ಎಂದ ಅವರು ಯಡಿಯೂರಪ್ಪ ನವರ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣ ಪ್ರಸ್ತಾಪಿಸಿ
ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ, ಈ ಎಲ್ಲಾ ಅಂಶಗಳು ಚರ್ಚೆ ಆಗ್ಬೇಕು, ಯಾವುದೇ ಹೆಣ್ಣನ್ನು ಮುಟ್ಟಬೇಕಾದ್ರೆ ನಮ್ಮ ಹೆಣ್ಮಕ್ಕಳನ್ನ ಬೇರೆ ಅವ್ರು ಮುಟ್ಟಿದ್ರೆ ಹೇಗಾಗುತ್ತೆ ಅನ್ನೋ ಭಾವನೆ ಇಟ್ಕೊಂಡು ಮುಟ್ಟಬೇಕು.
ಅವ್ರು ಮುಟ್ಟಿದ್ರೆ ಕೋರ್ಟ್ ತೀರ್ಮಾನ ಮಾಡುತ್ತೆ ಎಲ್ಲದಕ್ಕೂದಾಖಲೆಗಳನ್ನ ಕೊಟ್ಟಿದ್ದಾರೆ, ಕೋರ್ಟನಲ್ಲಿ ತೀರ್ಮಾನ ಆಗುತ್ತೆ ಎಂದರು.
ಮಾಜಿ ಮುಖ್ಯಮಂತ್ರಿ ಈಶ್ವರಪ್ಪ ಏನಂದ್ರು ವಿಡಿಯೋ ನೋಡಿ:-
ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ (congres government) ಮುಸಲ್ಮಾನರ ರಕ್ಷಣೆ ಮಾಡಿದ್ರೆ ಮಾತ್ರ ಅಧಿಕಾರ ಉಳಿಯೋದು ಅನ್ನೋ ಭ್ರಮೆ ಇದೆ. ಸಿದ್ಧರಾಮಯ್ಯಗೆ ಈಗ ಹಿಂದೂ ದೇವರ ಮೇಲೆ ಭಕ್ತಿ ಬಂದಿವೆ,ಅದಕ್ಕೆ ಪದೇ ಪದೇ ಚಾಮುಂಡಿ ಬೆಟ್ಟಕ್ಕೆ ಹೋಗ್ತಿದ್ದಾರೆ.
ಎಲ್ಲಿವರೆಗೆ ಅಧಿಕಾರದಲ್ಲಿರೋ ಕಾಂಗ್ರೆಸ್ ಜನರಿಗೆ ಇದು ತಿಳಿಯಲ್ವೋ ಅಲ್ಲಿವರೆಗೆ ಅವ್ರು ಹೀಗೇ ಇರ್ತಾರೆ,ದೇವಿಯ ಶಾಪ ಇವರಿಗೆ ತಟ್ಟುತ್ತಾನೆ ಇರುತ್ತೆ.
ಮುಸಲ್ಮಾನರ ವಿರುದ್ಧ ಕ್ರಮ ಕೈಗೊಳ್ತೀವಿ ಅನ್ನೋ ಧೈರ್ಯ ಇಲ್ಲ ನಿಮಗೆ, ಅವರಿಗೆ ಸಮನಾಗಿ ಹಿಂದೂಗಳನ್ನ ಅರೆಸ್ಟ್ ಮಾಡ್ಬೇಕು ಅನ್ನೋ ಧೋರಣೆ ಇವರದ್ದು,ಮಲಗಿರೋ ಹಿಂದೂಗಳನ್ನ ಕರ್ಕೊಂಡು ಬಂದಿದ್ದಾರೆ, ಗೃಹ ಮಂತ್ರಿ ಹೇಳ್ತಾರೆ ಇದೊಂದು ಸಣ್ಣ ಘಟನೆ ಅಂತ,ಚಾಕು, ತಲ್ವಾರ್ ಹಿಡ್ಕೊಂಡು ನಿಮ್ಮ ಮನೆಗೆ ಬಂದು ಹೊಡ್ದಿದ್ರೆ ಏನ್ ಮಾಡ್ತಿದ್ರಿ?ಪ್ರಾಣ ಬೇಕಾದ್ರೂ ಕೊಡ್ತೀವಿ ಆದ್ರೆ ನಮ್ಮ ವ್ಯವಸ್ಥೆ ಹಾಳು ಮಾಡೋಕೆ ಯಾರ್ ಹತ್ರಾನೂ ಆಗಲ್ಲ ಎಂದರು.
ಇದಲ್ಲದೇ ಸಿದ್ಧರಾಮಯ್ಯನವರ ರಾಜೀನಾಮೆ ವಿಚಾರ ಪ್ರಸ್ತಾಪುಸಿದ ಅವರು ಮೊದ್ಲು ನಾನು ಎಂತ ಪರಿಸ್ಥಿತಿ ಬಂದ್ರು ರಾಜೀನಾಮೆ ಕೊಡಲ್ಲ ಅಂತಿದ್ರು,ಅದರರ್ಥ ಕೋರ್ಟ್ ಹೇಳಿದ್ರೂ ಕೂಡ ಕೊಡಲ್ಲ ಅಂತ ತಾನೇ?
ಮುಂಚೆ ಅವ್ರ ಜೊತೆ ಇದ್ದವ್ರು ಸಿದ್ಧರಾಮಯ್ಯ ರಾಜೀನಾಮೆ ಕೊಡಲ್ಲ ಅಂತಿದ್ರು,ಆದ್ರೆ ಈಗ ನಾನೂ ಮುಖ್ಯಮಂತ್ರಿ ಅಂತಿದ್ದಾರೆ.
ಸಿದ್ಧರಾಮಯ್ಯಗೆ ಶಿಕ್ಷೆ ಆಗುತ್ತೆ ಅಂತ ಕಾಂಗ್ರೆಸ್ ನವರಿಗೆ ಗೊತ್ತಾಗಿದೆ.ಸಿದ್ಧರಾಮಯ್ಯ ಮಾಡಿದ ಪಾಪದ ಕೆಲಸಕ್ಕೆ ಅವರ ಪತ್ನಿ ಶಿಕ್ಷೆ ಅನುಭವಿಸಬೇಕಾಗಿದೆ.ಮುಗ್ಧ ಹೆಣ್ಣು ಮಕ್ಕಳನ್ನು ಇವರ ಸ್ವಾರ್ಥಕ್ಕೆ ಸಿಕ್ಕಿಸುತ್ತಾರೆ .
ನನ್ನ ಮೇಲೆ ಆಪಾದನೆ ಬಂದ್ ಕೂಡಲೇ ರಾಜೀನಾಮೆ ಕೊಟ್ಟಿದ್ದೆ,ಕ್ಲಿನ್ ಚೀಟ್ ಸಿಕ್ತು, 6 ಪೋಸ್ಟ್ ಖಾಲಿ ಇದ್ರೂ ಕೂಡ ಸೇರಿಸಿಲ್ಲ,ಅಲ್ಲಿ ಯಡಿಯೂರಪ್ಪ ಆಟ ಅಡಿದ್ರು,ಈಗ ಕೋರ್ಟ್ನಲ್ಲಿ ತಪ್ಪಿತಸ್ಥ ಅಂದ್ರೆ ಸಿದ್ಧರಾಮಯ್ಯ ರಾಜೀನಾಮೆ ಬಿಸಾಕ್ಬೇಕು,ಇಲ್ಲಾಂದ್ರೆ ವಿರೋಧ ಪಕ್ಷ ಹಾಗೂ ಜನಗಳಿಗೆ ನಿಮ್ಮನ್ನ ಹೇಗೆ ಇಳಿಸ್ಬೇಕು ಅಂತ ಗೊತ್ತು ಎಂದರು.