Karnataka ನಾಳೆ ಸರ್ಕಾರಿ ರಜೆ ಘೋಷಣೆ – 3 ದಿನ ಶೋಕಾಚರಣೆ
Bangalore: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (SM Krishna) ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ ಸರ್ಕಾರಿ ರಜೆಯನ್ನು (Government Holidays) ಘೋಷಣೆ ಮಾಡಲಾಗಿದೆ. ರಾಜ್ಯ ಸರ್ಕಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.
ಬೆಳಗಾವಿಯಿಂದ ಬೆಂಗಳೂರಿನ ಸದಾಶಿವ ನಗರಕ್ಕೆ ಆಗಮಿಸಿ ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮಾಧ್ಯಮಗಳ ಜೊತೆ ಮಾತನಾಡಿ ಸರ್ಕಾರಿ ರಜೆ ಘೋಷಣೆ ಮಾಡಿದ ವಿಚಾರವನ್ನು ತಿಳಿಸಿದರು.
ಇದನ್ನೂ ಓದಿ:-Karnataka:ಕರಾವಳಿ ,ಮಲೆನಾಡಿನಲ್ಲಿ Rain alert ಎಲ್ಲಿ ಬೀಳಲಿದೆ ಮಳೆ ವಿವರ ಇಲ್ಲಿದೆ.
ನಾಳೆ ಬೆಳಗ್ಗೆ 8 ಗಂಟೆಯವರೆಗೆ ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ನಂತರ ಮದ್ದೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ.
ಇದನ್ನೂ ಓದಿ:-ಕಾಂಗ್ರೆಸ್ ಹಡಗಿಗೆ ಕೃಷ್ಣ ಹತ್ತಿದ ಕತೆ- ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ
ನಂತರ ಬೆಳಗ್ಗೆ 10:30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಇಡಲಾಗುತ್ತದೆ. ಮಂಡ್ಯ ಮೈಸೂರು ಭಾಗದ SM ಕೃಷ್ಣ ಅವರ ಅಭಿಮಾನಿಗಳು ಮದ್ದೂರಿಗೆ ಬಂದು ದರ್ಶನ ಪಡೆಯಬಹುದು ಎಂದರು.