Government order |ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡರೇ ಶಿಕ್ಷೆ ಏನು ವಿಧಿಸಲಾಗುತ್ತೆ? ವಿವರ ಇಲ್ಲಿದೆ.
ವರದಿ ಮೂಲ- ಸರ್ಕಾರಿ ಸುತ್ತೋಲೆಗಳು.
Information news : ಅರಣ್ಯ ಒತ್ತುವರಿ ( forest land acquisition)) ಜೊತೆ ಸರ್ಕಾರಿ ಜಮೀನಿನಲ್ಲಿ ಒತ್ತುವರಿ ಮಾಡಿ ಮನೆಗಳು ,ಕೃಷಿಜಮೀನನ್ನು ಮಾಡಲಾಗುತಿದ್ದು ಅತೀ ಹೆಚ್ಚು ಭೂಮಿ ಒತ್ತುವರಿಯಾಗುತ್ತಿದೆ.
ಕರ್ನಾಟಕ ಸರ್ಕಾರವು ಭೂಕಂದಾಯ ಅಧಿನಿಯಮವನ್ನು 3 14(2)20192(2). 192(2). 192(4), 192(2) ಜಾರಿಗೆ ಬಂದಿದ್ದು, ಕರ್ನಾಟಕ ಭೂ ಕಂದಾಯ ಅಧಿನಿಯಮದ ಅಧ್ಯಾಯ 14(ಎ) ಅನ್ನು ಈ ಕೆಳಗಿನಂತೆ ನೀಡಲಾಗಿದೆ.
192(ಎ): ಅಪರಾಧಗಳು ಹಾಗೂ ದಂಡಗಳು:- ಈ ಅಧಿನಿಯಮದಲ್ಲಿ ಅಥವಾ ಈ ಕಲಂ ಅಡಿಯಲ್ಲಿ ರಚಿಸಿದ ನಿಮಯಗಳಲ್ಲಿ ಏನೇ ಒಳಗೊಂಡಿದ್ದರೂ ಕೆಳಕಂಡ ಕೋಷ್ಟಕದ 2ನೇ ಕಾಲಂ ನಿರ್ದಿಷ್ಟಪಡಿಸಿದ ಅಪರಾಧಗಳಲ್ಲಿ ಯಾವುದೇ ಅಪರಾಧವನ್ನು ಮಾಡಿದ ಯಾವೊಬ್ಬ ವ್ಯಕ್ತಿಯು, ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರಿಂದ ಅಪರಾಧ ನಿರ್ಣಯವಾದ ಮೇಲೆ ಕಾಲಂ 3ರಲ್ಲಿ ಸೂಚಿಸಿದ ಶಿಕ್ಷೆಯಿಂದ ದಂಡಿತನಾಗತಕ್ಕದ್ದು.
192-(ಬಿ) ಅಪರಾಧಗಳ ದುಪ್ರೇರಣೆ:-
ಈ ಅಧಿನಿಯಮದ ಅಡಿಯಲ್ಲಿ ದಂಡನೀಯವಾದ ಯಾವುದೇ ಅಪರಾಧದ ದುಷ್ಟೇರಣೆ ಮಾಡುವ ಅಥವಾ ಅಂತಹ ಅಪರಾಧವನ್ನು ಮಾಡಲು ಪ್ರಯತ್ನಿಸುವ ಯಾವೊಬ್ಬ ವ್ಯಕ್ತಿಯು ಈ ಅಧಿನಿಯಮದ ಅಡಿಯಲ್ಲಿ ಅಂತಹ ಅಪರಾಧವನ್ನು ಎಸಗಿದ್ದಕ್ಕಾಗಿ ಉಪಬಂಧಿಸಲಾದ ಶಿಕ್ಷೆಯಿಂದ ದಂಡಿತನಾಗತಕ್ಕದ್ದು.
ಇದನ್ನೂ ಓದಿ:-Gokarna|ತಂಗಿಯನ್ನು ಬೀದಿಯಲ್ಲಿ ಬಿಟ್ಟುಹೋದ ಅಣ್ಣ| ಅಣ್ಣನನ್ನು ಹುಡುಕಿ ತಂಗಿ ಒಪ್ಪಿಸಿದ PSI ಖಾದರ್
192-(ಸಿ) ಇತರ ಕಾನೂನುಗಳ ಅಡಿಯಲ್ಲಿಯ ದಂಡನೆಗಳಿಗೆ ಪ್ರತಿಷೇದವಿಲ್ಲ:-
ಈ ಅಧಿನಿಯಮದಲ್ಲಿ ಇರುವುದು ಯಾವುದೂ, ಈ ಅಧಿನಿಯಮದ ಅಡಿಯಲ್ಲಿ ದಂಢನೀಯವಾದ ಯಾವುದೇ ಕೃತ್ಯ ಎಸಗಿದ್ದಕ್ಕಾಗಿ ಅಥವಾ ಲೋಪಕ್ಕಾಗಿ ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಿಂದ ಯಾವೊಬ್ಬ ವ್ಯಕ್ತಿಯು ಅಭಿಯೋಗಕ್ಕೆ ಒಳಗಾಗುವುದನ್ನು ಅಥವಾ ದಂಢನೆಗೆ ಗುರಿಯಾಗುವುದನ್ನು ತಪ್ಪಿಸತಕ್ಕದ್ದಲ್ಲ.
ಒಂದು ಅಪರಾಧಕ್ಕೆ ಯಾವೊಬ್ಬ ವ್ಯಕ್ತಿಯೂ ಹೆಚ್ಚುಬಾರಿ ಹಾಗೆಯೇ ಅಭಿಯೋಗಕ್ಕೆ ಒಳಗಾಗತಕ್ಕದ್ದಲ್ಲ ಅಥವಾ ದಂಡಿಸತಕ್ಕದ್ದಲ್ಲ.