Karnataka:ಶಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ | ರಾಘವೇಶ್ವರ ಶ್ರೀ ,ಕಲ್ಲಡ್ಕ ಪ್ರಭಾಕರ್ ಭಟ್ ಗೆ ಸರ್ಕಾರ ಕ್ಲೀನ್ ಚಿಟ್
ಬೆಂಗಳೂರು :- ಪ್ರೇಮಲತಾ ದಿವಾಕರ್ ಶಾಸ್ತ್ರಿ ಅತ್ಯಾಚಾರ ಪ್ರಕರಣ ಸಂಬಂಧ ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ಮೂರನೇ ಆರೋಪಿ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ರದ್ದುಪಡಿಸಿ ದೋಷಾರೋಪಣೆ ಪಟ್ಟಿ ಹೈಕೋರ್ಟ್ ನೀಡಿರುವ ಆದೇಶವು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಎಂದು ರಾಜ್ಯ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವು ಅಭಿಪ್ರಾಯಪಟ್ಟಿದೆ.
ಇದಲ್ಲದೇ ಇವರ ವಿರುದ್ಧ ಸುಪ್ರೀಂ ಕೋರ್ಟ ನಲ್ಲಿ ಮೇಲ್ಮನವಿ ಸಲ್ಲಿಸಲು ಯೋಗ್ಯವಲ್ಲ ಎಂದು ತೀರ್ಮಾನಿಸಿದ್ದು ಹೈಕೋರ್ಟ್ ಆದೇಶವು ಸರ್ಕಾರದ ಹಿತಾಸಕ್ತಿಗೆ ವಿರುದ್ದವಾಗಿಲ್ಲ ಎಂದು ಪ್ರಾಸಿಕ್ಯೂಷನ್ ಇಲಾಖೆಯ ಉಪ ಕಾರ್ಯದರ್ಶಿ ಅಭಿಪ್ರಾಯಿಸಿದ್ದಾರೆ.
ಹಿನ್ನಲೆ ಏನು?
ರಾಮಕಥಾ ಗಾಯಕಿ ಪ್ರೇಮಲತಾ ರವರ ಪತಿ ದಿವಾಕರ್ ಶಾಸ್ತ್ರಿ ಸಹೋದರ ಶ್ಯಾಮ್ ಪ್ರಸಾದ್ ಶಾಸ್ತ್ರಿ ಪುತ್ತೂರಿನ ಕೆದಿಲ ಗ್ರಾಮದಲ್ಲಿ 2014 ಸೆಪ್ಟೆಂಬರ್ 1 ರಂದು ತಮ್ಮ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ:-Gokarna| ಮಹಾಬಲೇಶ್ವರನಿಗೆ ಮೇಲುಸ್ತುವಾರಿ ಸಮಿತಿ ಸದಸ್ಯರ ನೇಮಕ.
ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣವನ್ನು ಹಿಂಪಡೆಯುವಂತೆ ಸಂತ್ರಸ್ತೆಗೆ ಹೇಳಬೇಕು ಎಂದು ಒತ್ತಡ ಹೇರಲಾಗಿದೆ, ಸ್ವಾಮೀಜಿ ಪರ ನಿಲ್ಲಬೇಕು ಎಂದು ಸ್ವಾಮೀಜಿ ಕಡೆಯವರು ದೂರವಾಣಿ ಮೂಲಕ ಒತ್ತಡ ಹಾಕಿದ್ದರು ಮತ್ತು ಈ ಒತ್ತಡ ಹೇರುವ ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ ಮತ್ತಿತರರು ಇದ್ದರು ಇದರಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಮೃತ ಶ್ಯಾಮ ಪ್ರಸಾದ್ ಶಾಸ್ತಿ ಅವರ ಪತ್ನಿ ಸಂಧ್ಯಾಲಕ್ಷ್ಮಿ ಅವರು ಈ ಸಂಬಂಧ ಠಾಣೆಯಲ್ಲಿ ದೂರು ನೀಡಿದ್ದರು.
ಈ ಕುರಿತು ತನಿಖೆ ಕೈಗೊಂಡ ಸಿಐಡಿ ಪುತ್ತೂರು ನ್ಯಾಯಾಲಯಕ್ಕೆ (court )ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ ರಾಘವೇಶ್ವರ ಭಾರತೀ ಸ್ವಾಮೀಜಿ ,ಪ್ರಭಾಕರ ಭಟ್ ಹೈಕೋರ್ಟ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಪ್ರತ್ತೇಕ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ರವರ ಪೀಠ ಸ್ವಾಮೀಜಿ ಹಾಗೂ ಪ್ರಭಾಕರ್ ಭಟ್ ರವರಮೇಲೆ ದಾಖಲಾಗಿದ್ದ ದೋಷಾರೋಪಣೆ ಪಟ್ಟಿ ರದ್ದು ಮಾಡಿತ್ತು.
ಆದೇಶ ಪ್ರತಿ :-
ಈ ರದ್ದನ್ನು ವಿರೋಧಿಸಿ ಮೃತ ಶಾಮ್ ಪತ್ನಿ ಸಂಧ್ಯಾ ಲಕ್ಷ್ಮಿ ಮೇಲ್ಮನವಿ ಹೋಗಿದ್ದರು.
-ಸುದ್ದಿ ಮೂಲ ಮಾಹಿತಿ ಕೃಪೆ. ಮಹಂತೇಶ್ ,ದಿ ಫೈಲ್ಸ್ ಸಂಪಾದಕರು. ಬೆಂಗಳೂರು.
- Karwar | ಸತೀಶ್ ಶೈಲ್ ಪರಪ್ಪನ ಅಹ್ರಹಾರ ಜೈಲಿಗೆ ? ಏನಾಗಿತ್ತು ಏನು ಪ್ರಕರಣ ವಿವರ ಇಲ್ಲಿದೆ.
- Karwar |ಅದಿರು ನಾಪತ್ತೆ ಪ್ರಕರಣ ಶಾಸಕ ಸತೀಶ್ ಸೈಲ್ ದೋಷಿ
- Arecanut price: ಅಡಿಕೆ ಧಾರಣೆ 23 october 2024
- Karwar | ಅಕ್ಟೋಬರ್ 26 ಉದ್ಯೋಗ ಮೇಳ ಕೆಲಸ ಹುಡುಕುವವರು ವಿವರ ನೋಡಿ.
- RAIN NEWS :ಬೇಡ್ತಿ ಹಳ್ಳದಲ್ಲಿ ಕೊಚ್ಚಿಹೋದ ಕಾರು ಚಾಲಕ ! ಅಗ್ನಿ ಶಾಮಕ ದಳದಿಂದ ರಕ್ಷಣೆ