For the best experience, open
https://m.kannadavani.news
on your mobile browser.
Advertisement

TV technician ತರಬೇತಿಗೆ ಅರ್ಜಿ ಆಹ್ವಾನ

ಸ್ವಂತ ಉದ್ಯೋಗ ಬಯಸುವ ನಿರುದ್ಯೋಗಿಗಳಿಗೆ TV ಟೆಕ್ನಿಷಿಯನ್ ತರಬೇತಿಗೆ ಅರ್ಜಿ ಕರೆಯಲಾಗಿದೆ. ಥಿಯರಿ ಜೊತೆಯಲ್ಲಿ ಪ್ರಾಕ್ಟಿಕಲ್ ತರಬೇತಿಯನ್ನು ಸಹ ನೀಡಲಾಗುವುದು.
08:24 PM Oct 20, 2024 IST | ಶುಭಸಾಗರ್
tv technician ತರಬೇತಿಗೆ ಅರ್ಜಿ ಆಹ್ವಾನ
Jobs recruitment

ಟಿವಿ ಟೆಕ್ನಿಷಿಯನ್ ತರಬೇತಿಯಲ್ಲಿ ಬೇಸಿಕ್‌ನಿಂದ ಅತ್ಯಧಿಕ ತಂತ್ರಜ್ಞಾನದವರೆಗೆ ತರಬೇತಿ|ಅರ್ಜಿ ಸಲ್ಲಿಸಿ.

Advertisement

ಬೆಂಗಳೂರು:-ಸ್ವಂತ ಉದ್ಯೋಗ (job) ಬಯಸುವ ನಿರುದ್ಯೋಗಿಗಳಿಗೆ TV ಟೆಕ್ನಿಷಿಯನ್ ತರಬೇತಿಗೆ ಅರ್ಜಿ ಕರೆಯಲಾಗಿದೆ.

ಥಿಯರಿ ಜೊತೆಯಲ್ಲಿ ಪ್ರಾಕ್ಟಿಕಲ್ ತರಬೇತಿಯನ್ನು ಸಹ ನೀಡಲಾಗುವುದು.

ಇದರಲ್ಲಿ ಇಲೆಕ್ಟ್ರಾನಿಕ್ ಸ್ಪೇರ್ ಪಾರ್ಟ್ಸ್, ಕಲರ್ ಟಿವಿ, ಆಂಡ್ರಾಯ್ಡ್, ಸ್ಮಾರ್ಟ್, 4ಕೆ ಟಿವಿ LED ಮತ್ತು LCD ಟಿವಿಯಾ ಮದರ್ ಬೋರ್ಡ್, ಸಾಫ್ಟ್ ವೇರ್ ಪವರ್ ಸಪ್ಲೈ ಜೊತೆಯಲ್ಲಿ ಆಡಿಯೋ ಸಿಸ್ಟಮ್ ರಿಪೇರಿ, ಎಲ್ಲಾ ಕಂಪನಿಯ ಡಿಟಿಹೆಚ್ ಅಳವಡಿಕೆ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಸಹ ಇರುತ್ತದೆ.

ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು.

ಇದನ್ನೂ ಓದಿ:-Agriculture | ಕೃಷಿ ಆಸಕ್ತರಿಗೊಂದು ಅವಕಾಶ ಈಗಲೇ ಅರ್ಜಿ ಸಲ್ಲಿಸಿ.

ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ನ್ನು ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ನವೆಂಬರ್ 20 ಕೊನೆಯ ದಿನವಾಗಿದೆ. ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

ಇದನ್ನೂ ಓದಿ:-Job:ಪತ್ರಿಕೋದ್ಯಮ ಪದವೀಧರರಿಗೆ ಅಪ್ರೆಂಟಿಸ್ ತರಬೇತಿ: ಅರ್ಜಿ ಆಹ್ವಾನ

ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು( Bangalore) ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9380162042, 9740982585 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ