For the best experience, open
https://m.kannadavani.news
on your mobile browser.
Advertisement

Karnataka| KMF ನಿಂದ ಬೆಂಬಲ ಬೆಲೆಯಲ್ಲಿ ಜೋಳ ಖರೀದಿ| ಎಲ್ಲೆಲ್ಲಿ ಖರೀದಿ ಕೇಂದ್ರ ವಿವರ ನೋಡಿ

Karnataka: The state government has announced that KMF will procure 50,000 MT of maize directly from farmers at an MSP of ₹2,400 per quintal.
05:49 PM Nov 28, 2025 IST | ಶುಭಸಾಗರ್
Karnataka: The state government has announced that KMF will procure 50,000 MT of maize directly from farmers at an MSP of ₹2,400 per quintal.
karnataka  kmf ನಿಂದ ಬೆಂಬಲ ಬೆಲೆಯಲ್ಲಿ ಜೋಳ ಖರೀದಿ  ಎಲ್ಲೆಲ್ಲಿ ಖರೀದಿ ಕೇಂದ್ರ ವಿವರ ನೋಡಿ

Karnataka| KMF ನಿಂದ ಬೆಂಬಲ ಬೆಲೆಯಲ್ಲಿ ಜೋಳ ಖರೀದಿ| ಎಲ್ಲೆಲ್ಲಿ ಖರೀದಿ ಕೇಂದ್ರ ವಿವರ ನೋಡಿ.

Advertisement

Karnataka:- ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ ನೀಡಿದೆ.ಮೆಕ್ಕೆ ಜೋಳ ಖರೀದಿ ಮಾಡಲು ಸರ್ಕಾರ ಮುಂದಾಗಿದ್ದು ಕೆಎಂಎಫ್ (KMF)ಮೂಲಕ 50 ಸಾವಿರ ಮೆಟ್ರಿಕ್ ಟನ್ ಖರೀದಿಗೆ ನಿರ್ಧಾರ ಮಾಡಿರುವುದಾಗಿ KMF ನ ಎಂ.ಡಿ ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.

ಡಿ.1ರಿಂದ ರಾಜ್ಯದ ಐದು ಕಡೆ ಖರೀದಿ ಕೇಂದ್ರ ತೆರೆಯಲಾಗುತ್ತದೆ.ರೈತರಿಂದಲೇ ನೇರವಾಗಿ ಮೆಕ್ಕೆಜೋಳ ಖರೀದಿಸಲಿರುವ KMF ಮುಂದಾಗಿದ್ದು ತಲಾ ಒಬ್ಬ ರೈತನಿಂದ ಗರಿಷ್ಟ 25 ಕುಂಟಾಲ್ ಮೆಕ್ಕೆಜೋಳ ಖರೀದಿಸಲಿದೆ.

ಪ್ರತಿ ಕ್ವಿಂಟಾಲ್ ಗೆ  2,400 ರೂ. ದರ ನಿಗಧಿ ಮಾಡಲಾಗಿದ್ದು MSP ದರದಲ್ಲಿ ಮೆಕ್ಕೆ ಜೋಳ ಖರೀದಿ ಮಾಡಲಾಗುತ್ತದೆ.

ಗುಣಮಟ್ಟದ ಹಿನ್ನೆಲೆ ದರ ವ್ಯತ್ಯಾಸ ಇರಲಿದ್ದು ಮೆಕ್ಕೆಜೋಳ ತೇವಾಂಶ 14 ಡಿಗ್ರಿ ಇದ್ದಲ್ಲಿ ಮಾತ್ರ ಖರೀದಿಸಲಾಗುತ್ತದೆ.

Karavali| ನೌಕಾದಳದ ಮಾಹಿತಿ ಪಾಕಿಸ್ತಾನಕ್ಕೆ ರವಾನೆ| ಇಬ್ಬರ ಬಂಧನ

ಮೆಕ್ಕೆ ಜೋಳ ಮಾರಾಟ ಮಾಡುವ ರೈತರು ಮೊದಲು ನೊಂದಣಿ ಮಾಡಿಕೊಳ್ಳಬೇಕು.ಕೃಷಿ ಇಲಾಖೆ, ಇ ಗರ್ವನೆನ್ಸ್, NIC ಮೂಲಕ ರೈತರು ನೋಂದಣಿ ಮಾಡಿಕೊಳ್ಳಬೇಕಾಗಿದ್ದು ರೈತರಿಗೆ ಖರೀದಿ ಕುರಿತು ಎಸ್ ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ.ನಂತರವೇ ಖರೀದಿ ಕೇಂದ್ರದಲ್ಲಿ ಮೆಕ್ಕೆಜೋಳ ಮಾರಾಟ ಮಾಡಬೇಕಾಗಿದೆ.

ಎಲ್ಲೆಲ್ಲಿ ಖರೀದಿ ಕೇಂದ್ರ..!?

  • ಗುಬ್ಬಿ
  • ಶಿಕಾರಿಪುರ
  • ಧಾರವಾಡ
  • ಹಾಸನ
  • ಬೆಂಗಳೂರಿನ ರಾಜನಕುಂಟೆ.

ಸರ್ಕಾರ ಸೂಚನೆ ಹಿನ್ನೆಲೆಯಲ್ಲಿ ಈ ಹಿಂದೆ ಕೆಎಂಎಫ್ ನಿಂದ ಮೆಕ್ಕೆ ಜೋಳ ಖರೀದಿ ಮಾಡಿತ್ತು.

ಟೆಂಡರ್ ಮೂಲಕ 2,150 - 2250 ರೂ. ದರದಲ್ಲಿ ಖರೀದಿಸಲಾಗಿತ್ತು.ಇದೀಗ ಸರ್ಕಾರ ಸೂಚನೆ ಹಿನ್ನೆಲೆಯಲ್ಲಿ ರೈತರಿಂದಲೇ ನೇರವಾಗಿ 2400 ರೂ. ಖರೀದಿ ಮಾಡಲಿದೆ KMF.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ