ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar | ಹದ್ದಿನ ದೇಹದಲ್ಲಿ ಟ್ರ್ಯಾಕರ್ ಕೊನೆಗೂ ಸತ್ಯ ಬಯಲು

Karwar news 11 November 2024 :- ಕಾರವಾರದಲ್ಲಿ ಬೇಹುಗಾರಿಕೆ ಆತಂಕ ಸೃಷ್ಠಿಸಿದ್ದ ಜಿ.ಪಿ.ಎಸ್ ಟ್ರಾನ್ಸ್‌ಮೀಟರ್, ಟ್ಯಾಗ್ ಹೊಂದಿದ್ದ ರಣಹದ್ದಿನ ರಹಸ್ಯ ಕೊನೆಗೂ ಬಯಲಾಗಿದೆ.
01:28 PM Nov 11, 2024 IST | ಶುಭಸಾಗರ್

Karwar news 11 November 2024 :- ಕಾರವಾರದಲ್ಲಿ ಬೇಹುಗಾರಿಕೆ ಆತಂಕ ಸೃಷ್ಠಿಸಿದ್ದ ಜಿ.ಪಿ.ಎಸ್ ಟ್ರಾನ್ಸ್‌ಮೀಟರ್, ಟ್ಯಾಗ್ ಹೊಂದಿದ್ದ ರಣಹದ್ದಿನ ರಹಸ್ಯ ಕೊನೆಗೂ ಬಯಲಾಗಿದೆ.

Advertisement

ಹೌದು ಕಾರವಾರದ ಕೋಡಿಭಾಗ್‌ನ ನದಿಭಾಗ್‌ , ನೌಕಾನೆಲೆ ಸರಹದ್ದು ಸುತ್ತಾ ಹಾರಾಡುತಿದ್ದ ರಣಹದ್ದಿನ ಬೆನ್ನಲ್ಲಿ ಟ್ರಾಕರ್ ಅಳವಡಿಸಲಾಗಿತ್ತು. ಹೀಗಾಗಿ ಶತ್ರು ರಾಷ್ಟ್ರಗಳು ಈ ಹದ್ದನ್ನು ಬಿಟ್ಟಿರಬಹುದು ಎಂಬ ಸಂಶಯ ವ್ಯಕ್ತವಾಗಿತ್ತು.

ಇದನ್ನೂ ಓದಿ:-Karwar ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಟ್ರಾಕರ್ ಅಳವಡಿಸಿದ ರಣಹದ್ದು ಪತ್ತೆ!

ಇದಲ್ಲದೇ ಕಾರವಾರದಲ್ಲಿ ಕೈಗಾ ಹಾಗೂ ನೌಕಾದಳ ಇರೋದ್ರಿಂದ ಭೀತಿಯಿಂದ ಪೊಲೀಸರು ಹಾಗೂ ಗುಪ್ತಚರ ಇಲಾಖೆಯವರು ಸಹ ಇದರ ಬಗ್ಗೆ ಮಾಹಿತಿ ಕಲೆಹಾಕಲು ಹದ್ದು ಇದ್ದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು.

Advertisement

ಇನ್ನು ತಾವು ತಂದ ಕ್ಯಾಮೆರಾ ಮೂಲಕ ಝೂಮ್ ಮಾಡಿದಾಗ ಟ್ರಾನ್ಸ್‌ಮೀಟರ್ ಮೇಲೆ Mahaforest.gov.in ಎಂದು ಬರೆದಿದ್ದು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಹೆಸರು ಸಿಕ್ಕಿದೆ.

ಸಂಶೋಧನೆ ಉದ್ದೇಶದಿಂದ ಬಳಸಲಾದ ರಣಹದ್ದು ಇದಾಗಿದ್ದು ತಾಡೋಬಾ- ಅಂಧೇರಿ ಟೈಗರ್ ರಿಸರ್ವ್‌ನಿಂದ ಈ ಹದ್ದನ್ನು ಹಾರಿಸಲಾಗಿದೆ.
ರಣಹದ್ದು ಜೀವನದ ಬಗ್ಗೆ ಅಧ್ಯಯನ ಉದ್ದೇಶದಿಂದ ಟ್ರಾಕರ್ ಟ್ರಾನ್ಸಮೀಟರ್ ಇಟ್ಟು ಹಾರಿಸಲಾಗಿತ್ತು.
ಸದ್ಯ ರಣಹದ್ದಿಗೆ ಅರಣ್ಯ ಇಲಾಖೆ ಆಹಾರ ನೀಡಲು ಮುಂದಾಗಿದ್ದು ಸುರಕ್ಷಿತವಾಗಿದೆ.

Feed: invalid feed URL

Advertisement
Tags :
Kannda newsKarnatakaKarwar newsPolicetracktrakarಬೇಹುಗಾರಿಕೆ
Advertisement
Next Article
Advertisement