For the best experience, open
https://m.kannadavani.news
on your mobile browser.
Advertisement

Kumta ನೌಕರಿ ಕೊಡಿಸುವುದಾಗಿ ಲಕ್ಷಾಂತರ ವಂಚನೆ: ಆರೋಪಿ ಜೈಲಿಗೆ

ಕುಮಟಾ: ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಆರೋಪದ ಪ್ರಕರಣದಲ್ಲಿ ಕುಮಟಾದ ಶ್ರೀಧರ್ ಕುಮಟಾಕರ್ ನನ್ನು ಬಂಧಿಸಿ ಕಾರವಾರ ಜೈಲಿಗೆ ರವಾನೆ ಮಾಡಲಾಗಿದೆ.
02:37 PM Oct 07, 2024 IST | ಶುಭಸಾಗರ್
kumta ನೌಕರಿ ಕೊಡಿಸುವುದಾಗಿ ಲಕ್ಷಾಂತರ ವಂಚನೆ  ಆರೋಪಿ ಜೈಲಿಗೆ

ಕುಮಟಾ: ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಆರೋಪದ ಪ್ರಕರಣದಲ್ಲಿ ಕುಮಟಾದ ಶ್ರೀಧರ್ ಕುಮಟಾಕರ್ ನನ್ನು ಬಂಧಿಸಿ ಕಾರವಾರ ಜೈಲಿಗೆ ರವಾನೆ ಮಾಡಲಾಗಿದೆ.

Advertisement

ಒಂದು ಚಿಕ್ಕ ಚೆಕ್ ಬೌನ್ಸ್ ಕೇಸ್ ಆದರೂ ಆರೋಪಿಯ ಮನೆ ಬಾಗಿಲಿಗೆ ಹೋಗಿ ಎತ್ತಾಕೊಂಡು ಬರುವ ಪೊಲೀಸರಿಗೆ ಕುಮಟಾದಲ್ಲಿ ಸರ್ಕಾರಿ ನೌಕರಿ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂ. ಪಂಗನಾಮ ಹಾಕಿದ ಆರೋಪಿಗಳನ್ನು ಮಾತ್ರ ಪೊಲೀಸರು ಬಂಧಿಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.

ಸರ್ಕಾರಿ ನೌಕರಿ ಕೊಡಿಸುವ ನೆಪದಲ್ಲಿ ಹಲವು ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂ ವಂಚಿಸಿದ ಪ್ರಕರಣ ಕುಮಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಬರೋಬ್ಬರು ಮೂರು ತಿಂಗಳು ಕಳೆದಿತ್ತು . ಎ-1 ಆರೋಪಿಯಿಂದ ಹಿಡಿದು ಎ-6 ಆರೋಪಿಯವರೆಗೆ ಒಬ್ಬರನ್ನು ಕೂಡ ಪೊಲೀಸರು ಬಂಧಿಸಿರಲಿಲ್ಲ.

ಈ ವಂಚನೆ ಪ್ರಕರಣ ಕುಮಟಾದ ಮಾನ್ಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಓರ್ವ ಮಹಿಳಾ ಆರೋಪಿಯನ್ನು ಹೊರತುಪಡಿಸಿ, ಉಳಿದವರಿಗ್ಯಾರಿಗೂ ಜಾಮೀನು ದೊರೆತಿರಲಿಲ್ಲ. ಆದರೂ ಕುಮಟಾ ಪೊಲೀಸರು ಮಾತ್ರ ಈ ಆರೋಪಿತರನ್ನು ಬಂಧಿಸಿ, ವಿಚಾರಣೆ ನಡೆಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಪ್ರಕರಣದ ಹಿನ್ನಲೆ ಏನು?

ಇನ್ನು ಈ ವಂಚನೆ ಪ್ರಕರಣದ ಹಿನ್ನೆಲೆಯನ್ನು ಹೇಳುವುದಾದರೆ, ಕುಮಟಾ ತಾಲೂಕಿನ ಅಘನಾಶಿನಿ ನಿವಾಸಿ ಮಾಲಿನಿ ಗಣಪತಿ ಅಂಬಿಗ ಹಾಗೂ ಪಟ್ಟಣದ ಪೈರಗದ್ದೆಯ ನಿವಾಸಿ ಶ್ರೀಧರ ಗಣೇಶ ಕುಮಟಾಕರ್ ಎಂಬ ಇಬ್ಬರು ಸೇರಿ ಪಟ್ಟಣ ಮಹಾಲಕ್ಷಿö್ಮÃ ಕಂಫರ್ಟ್ನಲ್ಲಿ ಗಣಪತಿ ಜಾಬ್ ಲಿಂಕ್ಸ್ ಎಂಬ ಆಫೀಸ್‌ನ್ನು ತೆರೆದಿದ್ದರು.

ಈ ಕಚೇರಿಯ ಮೂಲಕ ನಿರುದ್ಯೋಗಿಗಳಿಗೆ ಸರ್ಕಾರಿ ನೌಕರಿ ಕೊಡಿಸುವ ನೆಪದಲ್ಲಿ ಕೆಲ ನಿರುದ್ಯೋಗಿಗಳಿಂದ ಲಕ್ಷಾಂತರ ರೂ. ಹಣ ಪಡೆದಿರುವ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ:-Kumta| ಮೆಕ್ಕೆಜೋಳ ,ಡ್ರಾಗನ್ ಪ್ರೂಟ್ ನಲ್ಲಿ ಅರಳಿದ ಗ್ರಾಮ ದೇವತೆ ಶ್ರೀ ಶಾಂತಿಕಾ ಪರಮೇಶ್ವರಿ

ಇವರಿಬ್ಬರಿಂದ ಮೋಸ ಹೋದ ಯುವತಿಯೋರ್ವಳು ಕುಮಟಾ ಪೊಲೀಸ್ ಠಾಣೆಯಲ್ಲಿ ಕಳೆದ ಜೂ.22 ರಂದು ದೂರು ನೀಡಿ, ತನಗೆ 7 ಲಕ್ಷ ರೂ. ಮೋಸ ಮಾಡಿದ ಬಗ್ಗೆ ದೂರಿನಲ್ಲಿ ಆರೋಪಿಸಿದ್ದರು.

ಈ ಸಂಬಂಧ ಮಾಲಿನಿ ಅಂಬಿಗ ಮತ್ತು ಶ್ರೀಧರ ಕುಮಟಾಕರ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಕುಮಟಾ ಪೊಲೀಸರು ಇವರಿಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದರು.

ತನಿಖೆಯಲ್ಲಿ ಕೆಲವರಿಗೆ ನೌಕರಿ ಕೊಡಿಸುವ ಸಂಬಂಧ ಅವರಿಂದ ಲಕ್ಷಾಂತರ ರೂ. ಹಣ ಪಡೆದು, ಈ ಪ್ರಕರಣದಲ್ಲಿರುವ ಇನ್ನು ಐವರು ಆರೋಪಿಗಳಿಗೆ ನೀಡಿರುವುದಾಗಿ ಮಾಹಿತಿ ನೀಡಿದ್ದರು.

ಆದರೆ ಈ ಬಗ್ಗೆ ಪೊಲೀಸರು ಐವರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ ಮಾಲಿನಿ ಅಂಬಿಗ್ ಅವರು ಕುಮಟಾ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ದೂರನ್ನು ಪುರಸ್ಕರಿಸಿದ ನ್ಯಾಯಾಲಯ ನೌಕರಿ ಕೊಡಿಸುವುದಾಗಿ ಮಾಲಿನಿ ಅಂಬಿಗ್ ಅವರಿಂದ ಲಕ್ಷಾಂತರ ರೂ. ಹಣ ಪಡೆದ ಐವರು ಆರೋಪಿಗಳಾದ ಮಿರ್ಜಾನ್ ನಿವಾಸಿಗಳಾದ ಶ್ರೀಧರ ನಾಯ್ಕ, ಗೋಪಾಲಕೃಷ್ಣ ನಾಯ್ಕ, ಶಶಿಕಲಾ ಗೋಪಾಲಕೃಷ್ಣ ನಾಯ್ಕ, ಬಾಡದ ಸತೀಶ್ ಪಟಗಾರ ಮತ್ತು ಬೆಂಗಳೂರಿನ ಧರ್ಮೇಂದ್ರ ಕುಲ್ಕರ್ಣಿ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುವಂತೆ ಕೋರ್ಟ್ ಸೂಚಿಸಿತ್ತು.

ಇದನ್ನೂ ಓದಿ:-Kumta| ಅಕ್ರಮ ಗೋ ಸಾಗಾಟ ,27 ಎಮ್ಮೆಗಳ ರಕ್ಷಣೆ

ಅದರಂತೆ ಈ ಐವರು ಆರೋಪಿಗಳ ವಿರುದ್ಧವೂ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಮಾಲಿನಿ ಅಂಬಿಗ್ ಅವರಿಂದ 3.20 ಲಕ್ಷ ರೂಗಳನ್ನು ಆರೋಪಿತರು ಪಡೆದುಕೊಂಡಿದ್ದಲ್ಲದೇ 11 ನರ್ಸಿಂಗ್ ವಿದ್ಯಾರ್ಥಿಗಳಿಂದ ತಲಾ 2 ಲಕ್ಷಕ್ಕೂ ಅಧಿಕ ಹಣವನ್ನು ಆರೋಪಿತರಾದ ಶಶಿಕಲಾ ನಾಯ್ಕ ಅವರು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು.

ಅಲ್ಲದೇ ಆರೋಪಿತರಾದ ಶ್ರೀಧರ ನಾಯ್ಕ ಮತ್ತು ಸತೀಶ್ ಪಟಗಾರ ನಗದು ಮತ್ತು ಫೋನ್ ಪೇ ಮುಖಾಂತರ ಲಕ್ಷಾಂತರ ಹಣ ಪಡೆದುಕೊಂಡು, ನೌಕರಿಯೂ ಕೊಡಿಸದೇ, ಹಣವನ್ನೂ ವಾಪಸ್ ನೀಡದೇ ವಂಚನೆ ಮಾಡಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಆದರೆ ಈ ಯಾವ ಆರೋಪಿಗಳನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿಲ್ಲ ಎಂಬ ಆರೋಪವನ್ನು ಸ್ವತಃ ದೂರುದಾರರ ತಂದೆ ತಮ್ಮಯ್ಯ ಮಾದೇವ ನಾಯ್ಕ ಮಾಡಿದ್ದರು.

ಲಕ್ಷಾಂತರ ರೂ. ವಂಚನೆ ಮಾಡಿದ ಆರೋಪಿಗಳನ್ನು ಬಂಧಿಸದೇ ಹಾಗೇ ಬಿಡಲು ಕಾರಣವೇನು..? ಅವರೆಲ್ಲ ರಾಜಾರೋಶವಾಗಿ ತಿರುಗಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ತಮ್ಮಯ್ಯ ಅವರು ಈ ಆರೋಪಿಗಳು ಈ ಪ್ರಕರಣವನ್ನು ವಾಪಸ್ ಪಡೆಯುವಂತೆ ನನಗೆ ಬೆದರಿಕೆ ಹಾಕುತ್ತಿದ್ದಾರೆ.

ಇದನ್ನೂ ಓದಿ:-KUMTA |ಧಾರೇಶ್ವರ ದೇವಸ್ಥಾನ ಕಳ್ಳತನ ಮಾಡಿ ಸಿಕ್ಕಿಬಿದ್ದ ಕೊಲೆ ಆರೋಪಿ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಈ ಪ್ರಕರಣದ ಆರೋಪಿಗಳು ಪ್ರಭಾವಿಗಳಾಗಿದ್ದು, ರಾಜಕೀಯ ಪ್ರಭಾವ ಕೂಡ ಹೊಂದಿರುವುದರಿಂದ ಹೊರಗಿದ್ದರೆ ಸಾಕ್ಷಿö್ಯ ನಾಶ ಮಾಡುವ ಸಾಧ್ಯತೆ ಇದೆ. ಹಾಗಾಗಿ ಆರೋಪಿತರು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನಿರಾಕರಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಮೂಲಕ ಮನವಿ ಮಾಡಿಕೊಂಡಿದ್ದರು.

ಇದು ಕೇವಲ ತಮ್ಮಯ್ಯ ಅವರ ಪುತ್ರಿಗೆ ಮಾತ್ರ ಆದ ಮೋಸವಲ್ಲ. ಈ ಆರೋಪಿತರ ತಂಡದಿಂದ ಇನ್ನು ಕೆಲವರಿಗೆ ಲಕ್ಷಾಂತರ ರೂ. ಮೋಸವಾಗಿದೆ. ಸಣ್ಣ ಸಣ್ಣ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಆರೋಪಿತರ ಮನೆಗೆ ತೆರಳಿ ಎಲ್ಲಿದರೂ ಹುಡುಕಿಕೊಂಡು ಬರುವ ಪೊಲೀಸರಿಗೆ ಈ ವಂಚನೆ ಪ್ರಕರಣದ ಆರೋಪಿಗಳು ಮಾತ್ರ ಸಿಗುತ್ತಿಲ್ವಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುವಂತೆ ಮಾಡಿದೆ.

ಇನ್ನು ಈ ವಂಚನೆ ಜಾಲದಲ್ಲಿ ದೊಡ್ಡ ದೊಡ್ಡ ಕೈಗಳಿದ್ದು ಅಲ್ಪ ಹಣದ ಆಸೆಗಾಗಿ ಮಧ್ಯಸ್ಥಿಕೆ ವಹಿಸಿದವರು ಮಾತ್ರ ಕಾಣುವಂತಾಗಿದ್ದು ,ಪೊಲೀಸರು ಈ ಪ್ರಕರಣದ ತಾಯಿ ಬೇರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆಯಾಗುವಂತೆ ಮಾಡಬೇಕಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ