For the best experience, open
https://m.kannadavani.news
on your mobile browser.
Advertisement

LIC Scholarship News: ಎಲ್.ಐ.ಸಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಯಾರು ಅರ್ಜಿ ಸಲ್ಲಿಸಬಹುದು ವಿವರ ನೋಡಿ.

LIC Scholarship News: ಭಾರತೀಯ ಜೀವವಿಮಾ ನಿಗಮವು ( LIC) ದೇಶದ ವಿವಿಧ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ಈ ಸಂಬಂಧ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.
09:55 PM Dec 08, 2024 IST | ಶುಭಸಾಗರ್
lic scholarship news  ಎಲ್ ಐ ಸಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಯಾರು ಅರ್ಜಿ ಸಲ್ಲಿಸಬಹುದು ವಿವರ ನೋಡಿ
karnataka /lic scholarship news lic invites applications for students scholarship who is eligible

LIC Scholarship News: ಭಾರತೀಯ ಜೀವವಿಮಾ ನಿಗಮವು ( LIC) ದೇಶದ ವಿವಿಧ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ಈ ಸಂಬಂಧ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

Advertisement

ಎಲ್‌ಐಸಿಯು ವಿವಿಧ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ (Students Scholarship) ವೇತನಕ್ಕಾಗಿ ಅರ್ಜಿ ಆಹ್ವಾನ ಮಾಡಿದೆ. ಎಲ್‌ಐಸಿ ಗೋಲ್ಡನ್‌ ಜುಬಿಲೀ ಫೌಂಡೇಶನ್ ಆಡಿಯಲ್ಲಿ ಅಖಿಲ ಭಾರತ ಆಧಾರದ ಮೇಲೆ ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.

ಹಾಗಿದ್ರೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಅರ್ಹತೆ ಏನು ಈ ಕುರಿತು ವಿವರ ಇಲ್ಲಿದೆ.

ಇದನ್ನೂ ಓದಿ:-Karnataka:ಕರಾವಳಿ ,ಮಲೆನಾಡಿನಲ್ಲಿ Rain alert ಎಲ್ಲಿ ಬೀಳಲಿದೆ ಮಳೆ ವಿವರ ಇಲ್ಲಿದೆ.

ಶೈಕ್ಷಣಿಕ ವರ್ಷ 2021-22, 2023-23 ಅಥವಾ 2023-24 ರಲ್ಲಿಎಸ್‌ಎಸ್‌ಎಲ್‌ಸಿ (SSLC ) ಅಥವಾ ದ್ವಿತೀಯ ಪಿಯುಸಿ ,(PUC) ಡಿಪ್ಲೋಮಾ ಅಥವಾ ಅದಕ್ಕೆ ಸಮಾನಾಂತರ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಇಲ್ಲವೇ ಸಮಾನ CGPA ಗ್ರೇಡ್‌ನೊಂದಿಗೆ ಉತ್ತೀರ್ಣರಾದ ಮತ್ತು 2024-25ರ ಶೈಕ್ಷಣಿಕ ಮೊದಲ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

ಇದಲ್ಲದೇ ಇತರೆ ವಿವಿಧ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡುವವರಿಗೂ ಈ ಸೌಲಭ್ಯ ದೊರೆಯಲಿದೆ.

ಉನ್ನತ ಶಿಕ್ಷಣ ಮಾಡಬೇಕು ಎಂದು ಇಚ್ಛಿಸುತ್ತಿರುವ ಯುವಕ ಹಾಗೂ ಯುವತಿಯರಿಗಾಗಿ ಸಾಮಾನ್ಯ ವಿದ್ಯಾರ್ಥಿ ವೇತನವನ್ನೂ ಪರಿಚಯಿಸಲಾಗಿದೆ.

ವೈದ್ಯಕೀಯ,( medical )ಇಂಜಿನಿಯರಿಂಗ್, ಯಾವುದೇ ವಿಭಾಗದಲ್ಲಿ ಪದವಿ, ಯಾವುದೇ ಕ್ಷೇತ್ರದಲ್ಲಿ ಡಿಪ್ಲೊಮಾ ಕೋರ್ಸ್ ಮತ್ತು ಇಂಟಿಗ್ರೇಟೆಡ್ ಕೋರ್ಸ್‌ಗಳನ್ನು ಮಾಡುವವರು ಅರ್ಜಿ ಸಲ್ಲಿಸಬಹುದು.

ಸರ್ಕಾರಿ ಮಾನ್ಯತೆ ಪಡೆದ ಕಾಲೇಜುಗಳು (collage) ಸಂಸ್ಥೆಗಳು ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ (ITI) ಕೋರ್ಸ್‌ಗಳ ಮೂಲಕ ವೃತ್ತಿಪರ ಕೋರ್ಸ್ ಮಾಡುವವರಿಗೆ ಇದು ಅನ್ವಯವಾಗಲಿದೆ.

ಇದಲ್ಲದೇ ಹೆಚ್ಚಿನ ನಿರ್ಧಿಷ್ಟ ವಿದ್ಯಾಭ್ಯಾಸ (steady) ಮಾಡುವ ವಿದ್ಯಾರ್ಥಿನಿಯರಿಗೂ ಸಹ ವಿದ್ಯಾರ್ಥಿ ವೇತನ ಪರಿಚಯಿಸಿದೆ.

ಇನ್ನು ಈ ವಿದ್ಯಾರ್ಥಿ ವೇತನವು ಆರ್ಥಿಕ ಸಂಕಷ್ಟದಲ್ಲಿ ಇರುವ ವಿದ್ಯಾರ್ಥಿಗಳಿಗೆ ಆಧ್ಯತೆ ಮೇಲೆ ಪರಿಗಣಿಸಿ ನೀಡುತ್ತದೆ.

ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕೆಳಗಿನ ವೆಬ್ ಸೈಟ್ ಗೆ ಭೇಟಿ ನೀಡಿ:-
https://licindia.in/

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ