Karwar ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿರುದ್ಧ ಸಟ್ಲಮಂಟ್ ಆರೋಪ ಮಾಡಿದ ಸಚಿವ ಮಂಕಾಳು ವೈದ್ಯ!
Karwar news 01 nuvember 2024:- ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ವಿರುದ್ಧ ಗುತ್ತಿಗೆ ಕಂನಿಯೊಂದಿಗೆ ಸಟ್ಲಮೆಂಟ್ ಮಾಡಿಕೊಳ್ಳುತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಆರೋಪ ಮಾಡಿದ್ದಾರೆ.

Uttra kannda ಪೊಲೀಸ್ ಹೈ ಅಲರ್ಟ! ಕಾರಣ ಏನು?

ಇಂದು ಕಾರವಾರ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು,ರಾಷ್ಟ್ರೀಯ ಹೆದ್ದಾರಿ 766E ಹೆದ್ದಾರಿ ಕಾಮಗಾರಿ ನಿಮಿತ್ತ ಶಿರಸಿ- ಕುಮಟಾ ಹೆದ್ದಾರಿ ಬಂದ್ ಮಾಡುವ ಕುರಿತು ಮಾತನಾಡಿ ,ಇಲ್ಲಿ ಉಸ್ತುವಾರಿ ನೋಡಿಕೊಳ್ಳಲು ಒಬ್ಬರಿದ್ದಾರೆ, ರಿತೇಶ್ ಕುಮಾರ್ ಸಿಂಗ್ ಎಂದು ಇಲ್ಲಿ ಉಸ್ತವಾರಿನೋ ಅಥವಾ ಆರ್.ಎನ್ .ಎಸ್ ,IRB ಕಂಪನಿಗಳ ಸಟ್ಲಮೆಂಟ್ ಗೆ ಬರುತ್ತಾರೋ ಗೊತ್ತಿಲ್ಲ, ನಮ್ಮ ಯಾವ ಮೀಟಿಂಗ್ ಗೂ ಬಂದಿಲ್ಲ.
ಅವರು ಬಂದ್ ಮಾಡಿಸುವಂತೆ ಮಾಡಲು ಕೊಟ್ಟು ಹೋಗಿದ್ದಾರೆ.ಕಳೆದ ತಿಂಗಳು ಬಂದ್ ಆಗಬೇಕಿತ್ತು.
ನವಂಬರ್ ನಲ್ಲಿ ಬಂದ್ ಮಾಡಿಸುವಂತೆ ಕೊಟ್ಟಿದ್ದಾರೆ.ಉಸ್ತುವಾರಿ ಎಂದು ಇದ್ದಾರೆ ನಮ್ಮಲ್ಲಿ ಯಾವುದು ಉಸ್ತುವಾರಿ ಎಂದು ನೋಡಬೇಕು , ಸಟ್ಲಮಂಟ್ ಉಸ್ತುವಾರಿಯೋ ಏನು ಎಂದುತಿಳಿದುಕೊಳ್ತೇನೆ.
ಯಾವುದೇ ಕಾರಣಕ್ಕೆ ಶಿರಸಿ ಕುಮಟಾ ರಸ್ತೆ ಬಂದ್ ಆಗಬಾರದು,ಕಂಪನಿಗೆ 3 ವರ್ಷ ಅಗ್ರಿಮೆಂಟ್ ಮಾಡಿ ಕೊಟ್ಟಿದ್ರೂ ಕೆಲಸ ಆಗಲಿಲ್ಲ.
ಇದನ್ನೂ ಓದಿ:-Karwar: ಕಡಲ ಕೊರತಕ್ಕೆ ರಸ್ತೆ ಕುಸಿತ| ಹಣವಿಲ್ಲದೇ ಬದಲಿ ವ್ಯವಸ್ಥೆ ಮಾಡದ ಜಿಲ್ಲಾಡಳಿತ
ಪುನಹಾ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ
ಯಾವುದೇ ಅಗ್ರಿಮೆಂಟ್ ನಲ್ಲಿ ಬಂದ್ ಮಾಡಿ ಕೊಡಬೇಕು ಎಂದು ಇಲ್ಲ .ಸಂಸದರು ಬಂದ್ ಮಾಡಬೇಕು ಎಂದು ಹೇಳಿತಿದ್ದಾರೆ, ಅವರ ಆಸಕ್ತಿ ಏನಿದೆ ಗೊತ್ತಿಲ್ಲ.ನಮ್ಮ ಶಾಸಕರೂ ಬೆಂಬಲ ಕೊಡ್ತಾ ಇದಾರೆ , ಅವರು ಆ ರೀತಿ ಬೆಂಬಲ ಕೊಡುತ್ತಿರುವುದರಿಂದ ನಾನೂ ಸುಮ್ಮನಿದ್ದೇನೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.