Honnavara: ಮಂಕಾಳು ವೈದ್ಯರ ಉಸ್ತುವಾರಿ ಕ್ಷೇತ್ರದ ಗ್ರಾಮ ಆಡಳಿತಾಧಿಕಾರಿ ಕಚೇರಿಗೆ ತೆರಳಲು ಅಧಿಕಾರಿಗಳಿಗೆ ಜನರಿಗೆ ಭಯ!
Honnavara 28 October 2024 :- ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯ ರವರ ಉಸ್ತುವಾರಿಯಲ್ಲಿ ಬರುವ ಕುಮಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ್ ಶಟ್ಟಿ ಸ್ವ ಕ್ಷೇತ್ರವಾದ ಹೊನ್ನಾವರ ಕುಮಟಾ ವಿಧಾನಸಭಾ ಕ್ಷೇತ್ರದ ಸಾಲಕೋಡು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕುಸಿಯುವ ಹಂತ ತಲುಪಿದೆ.
20 ವರ್ಷದ ಹಿಂದೆ ನಿರ್ಮಾಣವಾದ ಹೊನ್ನಾವರ ತಾಲೂಕಿನ ಸಾಲಕೋಡು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸಂಪೂರ್ಣ ಶಿಥಿಲಾವಸ್ತೆ ತಲುಪಿದ್ದು ಕಚೇರಿಯ ಮೇಲ್ಭಾಗದ ಹಂಚುಗಳು ಕಿತ್ತು ಬಿದ್ದಿದೆ.
ಮಳೆ ಬಂದರೇ ಕಚೇರಿ ಒಳಗೆ ನೀರು ಇನುಗುತ್ತದೆ. ಗೋಡೆಗಳು ಬಿರುಕು ಬಿಟ್ಟಿದ್ದು ಛಾವಣಿಯ ಹಲಗೆಗಳು ಲಡ್ಡು ಹಿಡಿದಿದೆ. ಕಟ್ಟಡ ಯಾವಾಗ ಬೇಕಾದರೂ ಕುಸಿಯುವ ಹಂತದಲ್ಲಿದೆ.
ಹೀಗಿದ್ದರೂ ಈ ದುಸ್ತಿತಿಯಲ್ಲಿ ಗ್ರಾಮದ ಆಡಳಿತಾಧಿಕಾರಿ ,ಸಿಬ್ಬಂದಿ ಇದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ.
ಮಳೆ ಬಂದರೇ ಕಡತಗಳು ನೆನೆಯುತ್ತವೆ ,ಗೋಡೆಗಳು ಒದ್ದೆಯಾದರೇ ಯಾವಾಗ ಬೇಕಾದರೂ ಬೀಳುವ ಹಂತದಲ್ಲಿದೆ. ಇನ್ನು ಇಲ್ಲಿನ ಶೌಚಾಲಯ ಸಂಪೂರ್ಣ ಹಾಳಾಗಿದೆ.
ಈಗಾಗಲೇ ಕಟ್ಟಡ ದುರಸ್ತಿಗಾಗಿ ಮನವಿ ಮಾಡಿದರೂ ಅನುದಾನದ ಕೊರತೆಯಿಂದ ಈವರೆಗೂ ದುರಸ್ತಿ ಆಗಿಲ್ಲ. ಹೊಸ ಕಟ್ಟಡ ನಿರ್ಮಿಸುವ ಭರವಸೆ ಸಿಕ್ಕಿದ್ದರೂ ಕಡತ ಧೂಳು ಹಿಡಿಯುತ್ತಿದೆ.
ಸ್ಥಳೀಯ ಜನರು ದೊಡ್ಡದಾಗಿ ಮಳೆ ಬಂದರೇ ಈ ಕಚೇರಿಗೆ ತೆರಳಲು ಭಯ ಪಟ್ಟರೇ ,ಅಧಿಕಾರಿಗಳು ಜೀವ ಕೈಯಲ್ಲಿ ಹಿಡಿದು ಕಾರ್ಯ ನಿರ್ವಹಿಸಬೇಕು.
ಇದೇ ಕ್ಷೇತ್ರದ ಶಾಸಕ ಬಿಜೆಪಿ ದಿನಕರ್ ಶಟ್ಟಿ, ಸಚಿವರಾಗಿರುವ ಮಂಕಾಳು ವೈದ್ಯ ರಿಗೆ ಮಾತ್ರ ತಮ್ಮ ಕ್ಷೇತ್ರದ ಸಮಸ್ಯೆ ಆಲಿಸಲು ಅವರಿಗೆ ಸಮಯವೇ ಇಲ್ಲ.
ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಿಸಬೇಕಿದ್ದು , ಸದಾ ಬಿಜೆಪಿ -ಕಾಂಗ್ರೆಸ್ ಎಂದು ಒಬ್ಬರ ಮೇಲೆ ಒಬ್ಬರು ವಿರೋಧ ಮಾಡಿಕೊಂಡು ತಿರುಗುವುದಕ್ಕಿಂತ ಕ್ಷೇತ್ರದ ಶಾಸಕರಾಗಿರುವ ಬಿಜೆಪಿ ಶಾಸಕ ದಿನಕರ್ ಶಟ್ಟಿ ,ಉಸ್ತುವಾರಿ ಸಚಿವರಾಗಿರುವ ಮಂಕಾಳು ವೈದ್ಯರು ಮುತುವರ್ಜಿ ವಹಿಸಿ ಕಚೇರಿಯನ್ನು ಸರಿಪಡಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.
- ONLINE TRADING FRAUD:ಕೋಟಿ ಆಸೆಗೆ 41 ಲಕ್ಷ ಕಳೆದುಕೊಂಡ ಹೊನ್ನಾವರ ವ್ಯಾಪಾರಿ
- Karwar:ಅರಣ್ಯ ಇಲಾಖೆ ನಿರ್ಲಕ್ಷ ದಿಕ್ಕು ಕಳೆದುಕೊಂಡ ಕಾಂಡ್ಲಾ ನಡಿಗೆ ಪಥ!
- HoneyTrap:ಮಾಲೀಕಯ್ಯ ಗುತ್ತೆದಾರ್ ಗೆ ಕಾಂಗ್ರೆಸ್ ನಾಯಕಿ ಹನಿಟ್ರ್ಯಾಪ್; 20 ಲಕ್ಷಕ್ಕೆ ಬೇಡಿಕೆಯಿಟ್ಟ ಮಹಿಳೆ ಪೊಲೀಸರ ವಶಕ್ಕೆ
- Mla sathish sail ಗೆ ಶಿಕ್ಷೆ ಪ್ರಕಟ ಎಷ್ಟು ವರ್ಷ ವಿವರ ಇಲ್ಲಿದೆ.
- SIRSI :ಸಿದ್ದರಾಮಯ್ಯನವರನ್ನು ಯಾರೂ ಇಳಿಸಲು ರಡಿ ಇಲ್ಲ. -ಸಚಿವ ಮಧು ಬಂಗಾರಪ್ಪ