ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karnataka: ಆರಿಹೋದ 46 ವರ್ಷದಿಂದ ಎಣ್ಣೆ ,ಬತ್ತಿ ಇಲ್ಲದೇ ಉರಿಯುತಿದ್ದ ದೀಪ ಕರ್ನಾಟಕ್ಕೆ ಸಂಕಷ್ಟ ಕಾದಿದೆಯಾ?

ಕಾರವಾರ :- ಯಾವುದೇ ಎಣ್ಣೆ ,ಬತ್ತಿ ಇಲ್ಲದೇ ಸತತ 46 ವರ್ಷಗಳಿಂದ ಉರಿಯುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು (Mundgod) ತಾಲೂಕಿನ ಚಿಗಳ್ಳಿಯ ಪ್ರತಿಷ್ಠಿತ ದೀಪನಾಥೇಶ್ವರ ದೇವಾಲಯದ(Deepanatheshvara tempal) ಮೂರು ದೀಪಗಳು ಆರಿ ಹೋಗಿವೆ.
12:48 PM Feb 07, 2025 IST | ಶುಭಸಾಗರ್
Karnataka: A Lamp Burning Without Oil or Wick for 46 Years—Is Trouble Awaiting the State?

Karnataka: ಆರಿಹೋದ 46 ವರ್ಷದಿಂದ ಎಣ್ಣೆ ,ಬತ್ತಿ ಇಲ್ಲದೇ ಉರಿಯುತಿದ್ದ ದೀಪ ಕರ್ನಾಟಕ್ಕೆ ಸಂಕಷ್ಟ ಕಾದಿದೆಯಾ?

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ಯಾವುದೇ ಎಣ್ಣೆ ,ಬತ್ತಿ ಇಲ್ಲದೇ ಸತತ 46 ವರ್ಷಗಳಿಂದ ಉರಿಯುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು (Mundgod) ತಾಲೂಕಿನ ಚಿಗಳ್ಳಿಯ ಪ್ರತಿಷ್ಠಿತ ದೀಪನಾಥೇಶ್ವರ ದೇವಾಲಯದ(Deepanatheshvara tempal) ಮೂರು ದೀಪಗಳು ಆರಿ ಹೋಗಿವೆ.

Advertisement

ಜ್ಯೋತಿಷ್ಯ ಜಾಹಿರಾತು.

1979 ರಲ್ಲಿ ದೈವಜ್ಞ ಶಾರದಮ್ಮ ಎಂಬುವವರು ಸೀಮೆಎಣ್ಣೆ ಹಾಕಿ ಈ ದೀಪವನ್ನು ಬೆಳಗಿಸಿದ್ದರು. ಅಲ್ಲಿಂದ ಈವರೆಗೂ ಈ ದೀಪ ಎಣ್ಣೆ ,ಬತ್ತಿಯಿಲ್ಲದೇ ಬೆಳಗುತಿತ್ತು. ಈ ಹಿನ್ನಲೆಯಲ್ಲಿ ಇಲ್ಲಿಗೆ ನೂರಾರು ಜನರು ಭೇಟಿನೀಡಿ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳುತಿದ್ದು ದೀಪನಾಥೇಶ್ವರ ಎಂಬ ಹೆಸರಿನಲ್ಲಿ ಆಸ್ತಿಕರು ಪೂಜೆಗಳನ್ನು ನಡೆಸಿತಿದ್ದರು.

Mundgod Deepanatheshwara temple

ಕಳೆದ 14 ದಿನದ ಹಿಂದೆ ದೀಪದ ಉಸ್ತುವಾರಿ ನೋಡಿಕೊಳ್ಳುತಿದ್ದ ವೆಂಕಟೇಶ್ ಎಂಬುವವರು ಮೃತರಾಗಿದ್ದು ಸೂತಕದ ಹಿನ್ನಲೆಯಲ್ಲಿ ದೇವಸ್ಥಾನದ ಗರ್ಭಗುಡಿ ಮುಚ್ಚಲಾಗಿತ್ತು.

ಆದರೇ ಬುಧವಾರ ದೇವಸ್ಥಾನದ ಗರ್ಭಗುಡಿಯನ್ನು ಸ್ವಚ್ಛಮಾಡಲು ಕುಟುಂಬಸ್ತರು ತೆರಳಿದಾಗ ದೀಪ ಆರಿರುವುದು ಬೆಳಕಿಗೆ ಬಂದಿದೆ. ಇನ್ನು ದೀಪ ಆರಿದರೆ ರಾಜ್ಯ ಆಳುವವರಿಗೆ ಕೆಡುಕಾಗಲಿದೆ ಎಂದು ಜನ ನಂಬಿದ್ದು , ಗ್ರಾಮಕ್ಕೂ ತೊಂದರೆಯಾಗಲಿದೆ ಎಂಬುದು ಇಲ್ಲಿನ ಭಕ್ತರ ಅನಿಸಿಕೆಯಾಗಿದ್ದು ಈ ಹಿನ್ನಲೆಯಲ್ಲಿ ದೇವಸ್ಥಾನದ ಗರ್ಭಗುಡಿಯನ್ನು ದೇವಸ್ಥಾನದ ಆಡಳಿತಮಂಡಳಿ ಮುಚ್ಚಿದ್ದು ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ಹೇರಿದೆ.

Advertisement

ಏನಿದರ ಇತಿಹಾಸ?

ಶಿಗಳ್ಳಿಯ ದೀಪನಾಥೇಶ್ವರ ದೇವಸ್ಥಾನ.

ಚಿಗಳ್ಳಿ ಗ್ರಾಮದ ದೈವಜ್ಞ ಶಾರದಮ್ಮ ಎನ್ನುವರು 1979ರಲ್ಲಿ ಸೀಮೆ ಎಣ್ಣೆ ಹಾಕಿ ಒಂದು ಲಾಟೀನು ದೀಪವನ್ನು ಹಚ್ಚಿದ್ದರು. ಆದರೆ ಅದು ಒಂದು ದಿನ ಕಳೆದರೂ ಆರಿಲಿಲ್ಲ. ನಿರಂತರವಾಗಿ ಉರಿಯತೊಡಗಿತು. ಇದರಿಂದ ಕುತೂಹಲಗೊಂಡ ಶಾರದಮ್ಮ, ಒಂದು ವರ್ಷದವರೆಗೆ ಕಾಯ್ದು ಮತ್ತೊಂದು ದೀಪವನ್ನು 1980ರಲ್ಲಿ ಹಚ್ಚಿದರು. 2ನೇ ದೀಪ ಕೂಡ ಆರದೇ ನಿರಂತರವಾಗಿ ಉರಿಯ ತೊಡಗಿತು.

2ನೇ ದೀಪ ಹಚ್ಚಿದ 10-15 ದಿನಗಳ ನಂತರ ಮತ್ತೊಂದು 3ನೇ ದೀಪ ಬೆಳಗಿಸಿದರು. ಪವಾಡ ಎಂಬಂತೆ 3ನೇ ದೀಪ ಸೇರಿ ಮೂರು ದೀಪಗಳು ನಿರಂತರವಾಗಿ ಉರಿಯ ತೊಡಗಿದವು.

 1979ರಿಂದ 2025ರ ಫೆಬ್ರುವರಿವರೆಗೆ ನಿರಂತರವಾಗಿ ಉರಿದುಕೊಂಡು ಬಂದಿದ್ದ ದೀಪಗಳು ಈಗ ಏಕಾಏಕಿ ಆರಿ ಹೋಗಿದೆ.

ದೇವರು ಮುನಿದನಾ ?

ದೀಪ ಹಚ್ಚಿದ್ದ ಶಾರದಮ್ಮ ಅವರು ಕೆಲವು ವರ್ಷಗಳ ನಂತರ ನಿಧನರಾದರು. ಆದರೂ ದೀಪಗಳು ಇಲ್ಲಿವರೆಗೆ ಉರಿದುಕೊಂಡು ಬರುತಿದ್ದು ನಂದಾದೀಪ ಎನಿಸಿತ್ತು.

ಇದನ್ನೂ ಓದಿ:-Mundgod ಮೀಟರ್ ಬಡ್ಡಿದಂದೆ- ಸಾಲಗಾರರನ್ನು ಹೆದರಿಸಲು ಹತ್ಯೆ ಆರೋಪಿಗಳ ವಿಡಿಯೋ ಪೋಸ್ಟ್ !

14 ದಿನದ ಹಿಂದೆ ಈ ದೀಪದ ಉಸ್ತುವಾರಿ ನೋಡಿಕೊಳ್ಳುತಿದ್ದ  ಅರ್ಚಕ ವೆಂಕಟೇಶ್ ನಿಧನರಾದರು. ಈ ಹಿನ್ನಲೆಯಲ್ಲಿ ಸೂತಕವಿದ್ದ ಕಾರಣ ದೇವಸ್ಥಾನದ ಗರ್ಭಗುಡಿ ಮುಚ್ಚಲಾಗಿತ್ತು.

ಬುಧವಾರ ಫೆ.5ರಂದು ಪೂಜೆಗಾಗಿ ಗರ್ಭಗುಡಿ ತೆರೆದಾಗ ದೀಪ ಆರಿರುವುದು ಗಮನಕ್ಕೆ ಬಂದಿದೆ.

ಇದನ್ನೂ ಓದಿ:-Mundgod ನಲ್ಲಿದೆ ಬಾಳಂತಿ ದೇವರು ಈ ದೇವರ ಜಾತ್ರೆ ವಿಷೇಶವೇನು ಗೊತ್ತಾ?

ಇನ್ನು ಆರದ ನಂದಾ ದೀಪ ಆರಿಹೋದಾಗ ಭಕ್ತರಲ್ಲಿ ನೋವು ತರಿಸಿದ್ದು ಇಷ್ಟು ದಿನ ಆರದ್ದು ಈಗ ಆರಿರುವುದು ಕೆಡುಕಿನ ಸಂಕೇತ , ರಾಜ್ಯ ಆಳುವವರಿಗೂ ಕೆಡುಕಾಗಲಿದೆ ,ಗ್ರಾಮಕ್ಕೂ ಕೆಡಕು ಎಂಬ ಮಾತುಗಳು ಹರಿದಾಡುತಿದ್ದು, ಆರದಿ ದೀಪವನ್ನು ನೋಡಲು ಜನ ಮಿಗಿಬಿದ್ದಿದ್ದಾರೆ.ನಂತರ ಈ ದೇವಸ್ಥಾನದ ಗರ್ಭಗುಡಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

 

Advertisement
Tags :
BurningLampDivineLightKarnatakaMiracleMundgoduMysteryOilLessLampspiritualSupernaturalTempleMysteryUnexplainedPhenomenon
Advertisement
Next Article
Advertisement