Murdeshwar ಕಡಲ ತೀರ ನಿರ್ಬಂಧ ತೆರವಿಗಿಗೆ ನಾನಾ ವಿಘ್ನ - ಪ್ರವಾಸಿಗರಿಗೆ ನಿರಾಸೆ.
Murdeshwar/ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (bhatkal) ತಾಲೂಕಿನ ಮುರುಡೇಶ್ವರದಲ್ಲಿ (murdeshwar) ಕೋಲಾರದ ವಿದ್ಯಾರ್ಥಿನಿಯರು ಸಾವಿನ ನಂತರ ಕಾರಣ ಕಡಲ ತೀರಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಕ್ರಿಸ್ ಮಸ್ ಸೇರಿದಂತೆ ಸಾಲು ಸಾಲು ರಜೆಗೆ ಪ್ರವಾಸಿಗರು ಮುರುಡೇಶ್ವರ ಭಾಗಕ್ಕೆ ಹೆಚ್ಚು ಬರುತಿದ್ದಾರೆ. ಆದರೇ ಸಮುದ್ರ ಭಾಗದಲ್ಲಿ ಜಲಸಾಹಸ ಕ್ರೀಡೆಗಳು ಸಹ ಬಂದ್ ಆಗಿದ್ದು ಕಡಲ ಬಳಿ ತೆರಳಲು ನಿರ್ಬಂಧ ಇದ್ದ ಕಾರಣ ನಿರಾಸೆಯಿಂದ ಪ್ರವಾಸಿಗರು (tourist )ಹಿಂದಿರುಗುತಿದ್ದಾರೆ.
ಇದನ್ನೂ ಓದಿ:-Murdeshwar ದುರಂತ- ಆರು ಜನ ಶಿಕ್ಷಕರ ಮೇಲೆ ಪ್ರಕರಣ ದಾಖಲು- ತಲಾ5 ಲಕ್ಷ ಪರಿಹಾರ ಘೋಷಣ
ಇನ್ನು ಲೈಪ್ ಗಾರ್ಡ ,ಭದ್ರತೆ ವ್ಯವಸ್ಥೆ ಕಲ್ಪಿಸಿ ತಕ್ಷಣ ಪ್ರವಾಸಿಗರಿಗೆ ಕಡಲ ತೀರ ಭಾಗಕ್ಕೆ ಪ್ರವೇಶ ನೀಡಬೇಕು ಎಂದು ಪ್ರವಾಸೋದ್ಯಮ ನಂಬಿದ ಸ್ಥಳೀಯ ಉದ್ಯಮಿಗಳು ಜಿಲ್ಲಾಡಳಿತಕ್ಕೆ ಮನವಿ ಸಹ ನೀಡಿದ್ದರು. ಶೀಘ್ರದಲ್ಲೇ ಮುರುಡೇಶ್ವರ ಕಡಲ ತೀರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಅವಕಾಶ ಮಾಡಿಕೊಡುವುದಾಗಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ರವರು ಮಾಹಿತಿ ನೀಡಿದ್ದರು. ಆದರೇ ಇದೀಗ ಹಲವು ಗೊಂದಲಗಳು ಕಡಲ ತೀರದಲ್ಲಿ ಪ್ರವಾಸಿಗರಿಗೆ ಪ್ರವೇಶ ನೀಡಲು ಅಡ್ಡಿಯಾಗಿದೆ.
ಅಧಿಕಾರಿಗಳ ಸಮನ್ವಯ ಕೊರತೆ ಪ್ರವಾಸಿಗರಿಗೆ ಕಡಲತೀರಕ್ಕೆ ಸಿಗದ ಪ್ರವೇಶ.
ಮುರುಡೇಶ್ವರ ದಲ್ಲಿ ಪ್ರವಾಸಿಗರ ರಕ್ಷಣೆಗಾಗಿ ಲೈಫ್ ಗಾರ್ಡ ಗಳನ್ನು ನೇಮಿಸಲಾಗಿದೆ. ಎಸಿ ನೇತ್ರತ್ವದ ಕಮಿಟಿ ಸಹ ಜಾರಿಗೆ ತರಲಾಗಿದೆ.
ಬುಧವಾರ ದಂದು ಕಡಲ ತೀರ ಭಾಗದಲ್ಲಿ ಸೇಫ್ಟಿ ಜೋನ್ ,ರೆಡ್ ಜೋನ್ ಎಂದು ಗುರುತಿಸಿ ರೋಪ್ ಗಳನ್ನು ಅಳವಡಿಸಲಾಗಿತ್ತು. ಇದನ್ನು ಪರಿಶೀಲಿಸಲು ಭಟ್ಕಳದ ಎಸಿ ಡಾ.ನಯನ ಆಗಮಿಸಬೇಕಿತ್ತು .ಆದರೇ ಅವರು ಅಲ್ಲಿಗೆ ಬರಲಿಲ್ಲ.
ಇದನ್ನೂ ಓದಿ:-Murdeshwar ಪ್ರವಾಸಿ ತಾಣದಲ್ಲಿ ಸರಣಿ ಸಾವು- ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ದಾಖಲು
ನಂತರ ಗುರುವಾರ ಆಗಮಿಸಿದ ಎಸಿ ಡಾ.ನಯನಾ ರೋಪ್ ಅಳವಡಿಸಿದ್ದು ಸರಿಯಿಲ್ಲ ಎಂದು ಮತ್ತೆ ಬೇರೆಡೆ ಅಳವಡಿಸಲು ಸೂಚಿಸಿದ್ದರು. ಹೀಗಾಗಿ ಶ್ರಮ ಪಟ್ಟು ಹಾಕಿದ್ದ ರೋಪ್ ಗಳನ್ನು ಮತ್ತೆ ತೆಗೆಯಲಾಯಿತು. ಇದರಿಂದ ಪ್ರವಾಸಿಗರಿಗೆ ಅವಕಾಶ ಕಲ್ಪಿಸುಲು ಸಾಧ್ಯವಾಗಿಲ್ಲ. ಇದಲ್ಲದೇ ರಕ್ಷಣಾ ಚಟುವಟಿಕೆ ಬಗ್ಗೆ ಅಧಿಕಾರಿಗಳಿಗೂ ಸಮರ್ಪಕ ಮಾಹಿತಿ ಇಲ್ಲ . ಇದರಿಂದ ಹಲವು ಗೊಂದಲಗಳು ಸೃಷ್ಟಿಯಾಗಿದೆ.
ಇನ್ನು ಅಧಿಕಾರಿಗಳು ಒಂದುರೀತಿ ,ಜನಪ್ರತಿನಿಧಿಗಳು ಒಂದುರೀತಿಯ ಸೂಚನೆಗಳು ಇಂದು ತೆರವಾಗಬೇಕಿದ್ದ ನಿರ್ಬಂಧ ಮುಂದೂಡಲಾಗಿದೆ. ಬಹತೇಕ ಶನಿವಾರ ಮುರುಡೇಶ್ವರ ಕಡಲ ತೀರಕ್ಕೆ ಪ್ರವಾಸಿಗರಿಗೆ ಪ್ರವೇಶ ನೀಡುವುದಾಗಿ ಮೂಲಗಳಿಂದ ಮಾಹಿತಿ ಬಂದಿದ್ದು ಹೊಸವರ್ಷಕ್ಕಾದರೂ ಪ್ರವಾಸಿಗರಿಗೆ ನಿರ್ಬಂಧ ತೆರವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.