Karnataka ಹೊಸ ಪ್ರಬೇಧದ ಪರಾವಲಂಬಿ ಕಣಜ ಪತ್ತೆ
ಚಾಮರಾಜನಗರ 16 ಡಿಸೆಂಬರ್ 2024: ಜೀವ ವೈವಿಧ್ಯದಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಹೊಸ ಪ್ರಬೇಧದ ಪರಾವಲಂಬಿ ಕಣಜವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಇದೇ ಮೊದಲ ಬಾರಿಗೆ ಹೊಸ ಪ್ರವೇಧದ ಪರವಲಾಂಬಿ ಕಣಜ ಇದಾಗಿದ್ದು ಏಟ್ರಿ(ASHOKA trust for Research in Ecology and the Environment) ಸಂಸ್ಥೆಯ ಸಂಶೋಧಕರಾದ ರಂಜಿತ್ ಎ.ಪಿ. ಮತ್ತು ಪ್ರಿಯದರ್ಶಿನ್ ಧರ್ಮರಾಜನ್ ಬಿಳಿಗಿರಿರಂಗನ ಬೆಟ್ಟದಲ್ಲಿ ಹೊಸ ಪರವಾಲಂಬಿ ಕಣಜ ಪ್ರಬೇಧ ಕಂಡು ಹಿಡಿದಿದ್ದಾರೆ.
ಬಿಳಿಗಿರಿರಂಗನಬೆಟ್ಟದ ಜೊತೆಗೆ ದೇಶದ 4 ಕಡೆ ಹೊಸ ಪ್ರಬೇಧದ ಪರಾವಲಂಬಿ ಕಣಜ ಪತ್ತೆ ಹಚ್ಚಿ ಸಂಶೋಧನಾ ವರದಿ ಪ್ರಕಟಿಸಿದ್ದಾರೆ.
ಇದನ್ನೂ ಓದಿ:-Karnataka Railways: ರೈಲು ಪ್ರಯಾಣಿಕರೇ ಗಮನಿಸಿಈ ರೈಲುಗಳು ಈ ದಿನಾಂಕದಂದು ರದ್ದು, ಸಂಖ್ಯೆಯೂ ಬದಲು!
ಬಿಳಿಗಿರಿರಂಗನ ಬೆಟ್ಟದ (beligiri ranganabetta) ಜೊತೆಗೆ ತಮಿಳುನಾಡಿನ (Tamil nadu) ಕಲಕಾಡ್ ಮುಂಡಂತುರೈ ಹುಲಿ ಸಂರಕ್ಷಿತ ಪ್ರದೇಶ, ಅರುಣಾಚಲ ಪ್ರದೇಶದ ಸಿಯಾಂಗ್ ಕಣಿವೆ ಮತ್ತು ಉತ್ತರಾಖಂಡದ ತೆಹ್ರಿಯಲ್ಲಿ ಕಣಜಗಳನ್ನು ಪತ್ತೆ ಹಚ್ಚಿದ್ದಾರೆ.

ಬಿಳಿಗಿರಿರಂಗನ ಬೆಟ್ಟದಲ್ಲಿ ಪತ್ತೆಯಾದ ಕಣಜಕ್ಕೆ ಕಾಳಿಂಗ ಸರ್ಪದ ಸಂಶೋಧನೆ ಮತ್ತು ಸಂರಕ್ಷಣೆಗೆ ದುಡಿದಿರುವ ಡಾ.ಪಿ ಗೌರಿಶಂಕರ್ ಹೆಸರಿಡಲಾಗಿದೆ.
ಇತ್ಗೀಚೆಗೆ ಕೆಲ ತಿಂಗಳ ಹಿಂದೆಯಷ್ಟೇ ಇದೇ ಸಂಶೋದನಾ ತಂಡವು ಹೊಸ ಪ್ರಬೇಧದ ಹಲ್ಲಿ ಹಾಗೂ ಕಣಜವನ್ನು ಪತ್ತೆ ಹಚ್ಚಿದ್ದರು.