For the best experience, open
https://m.kannadavani.news
on your mobile browser.
Advertisement

Karnataka: ಗೋಕರ್ಣದ ಗುಹೆಯಲ್ಲಿ  ಏಕಾಂಗಿಯಾಗಿ ಮಕ್ಕಳೊಂದಿಗೆ ವಾಸ ಮಾಡುತಿದ್ದ ವಿದೇಶಿ ಮಹಿಳೆ ರಕ್ಷಣೆ

ಕಾರವಾರ :- ಹಿಂದೂ ಧರ್ಮದ ಧಾರ್ಮಿಕತೆಗೆ ವಾಲಿದ ರಷ್ಯಾ ಮೂಲದ ಮಹಿಳೆಯೊಬ್ಬಳು ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ದಟ್ಟಾರಣ್ಯದಲ್ಲಿನ ಗುಹೆಯಲ್ಲಿ ಏಕಾಂತವಾಗಿ ವಾಸವಿದ್ದು ಇವರನ್ನು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta) ತಾಲೂಕಿನ ಗೋಕರ್ಣದ ರಾಮತೀರ್ಥದ ಅರಣ್ಯದಲ್ಲಿ ನಡೆದಿದೆ.
09:41 AM Jul 12, 2025 IST | ಶುಭಸಾಗರ್
ಕಾರವಾರ :- ಹಿಂದೂ ಧರ್ಮದ ಧಾರ್ಮಿಕತೆಗೆ ವಾಲಿದ ರಷ್ಯಾ ಮೂಲದ ಮಹಿಳೆಯೊಬ್ಬಳು ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ದಟ್ಟಾರಣ್ಯದಲ್ಲಿನ ಗುಹೆಯಲ್ಲಿ ಏಕಾಂತವಾಗಿ ವಾಸವಿದ್ದು ಇವರನ್ನು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta) ತಾಲೂಕಿನ ಗೋಕರ್ಣದ ರಾಮತೀರ್ಥದ ಅರಣ್ಯದಲ್ಲಿ ನಡೆದಿದೆ.
karnataka  ಗೋಕರ್ಣದ ಗುಹೆಯಲ್ಲಿ  ಏಕಾಂಗಿಯಾಗಿ ಮಕ್ಕಳೊಂದಿಗೆ ವಾಸ ಮಾಡುತಿದ್ದ ವಿದೇಶಿ ಮಹಿಳೆ ರಕ್ಷಣೆ

Karnataka: ಗೋಕರ್ಣದ ಗುಹೆಯಲ್ಲಿ  ಏಕಾಂಗಿಯಾಗಿ ಮಕ್ಕಳೊಂದಿಗೆ ವಾಸ ಮಾಡುತಿದ್ದ ವಿದೇಶಿ ಮಹಿಳೆ ರಕ್ಷಣೆ

Advertisement

ಕಾರವಾರ :- ಹಿಂದೂ ಧರ್ಮದ ಧಾರ್ಮಿಕತೆಗೆ ವಾಲಿದ ರಷ್ಯಾ ಮೂಲದ ಮಹಿಳೆಯೊಬ್ಬಳು ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ದಟ್ಟಾರಣ್ಯದಲ್ಲಿನ ಗುಹೆಯಲ್ಲಿ  ಏಕಾಂತವಾಗಿ ವಾಸವಿದ್ದು ಇವರನ್ನು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta) ತಾಲೂಕಿನ ಗೋಕರ್ಣದ ರಾಮತೀರ್ಥದ  ಅರಣ್ಯದಲ್ಲಿ ನಡೆದಿದೆ.

ಮೋಹಿ ( 40 ವರ್ಷ), ಅವರ ಪುಟ್ಟ ಮಕ್ಕಳಾದ ಪ್ರೆಯಾ ( 06 ವರ್ಷ) ಹಾಗೂ ಅಮಾ ( 04 ವರ್ಷ) ರಕ್ಷಣೆಗೊಳಗಾದ ರಷ್ಯಾ ಮೂಲದ ಪ್ರಜೆಗಳು. ರಷ್ಯಾದಿಂದ ಬಿಸಿನೆಸ್ ವಿಸಾ ದಡಿ ಗೋವಾಕ್ಕೆ ಬಂದಿದ್ದ ಈ ಮಹಿಳೆ ಗೋವಾ ಮೂಲಕ ಗೋಕರ್ಣಕ್ಕೆ ಬಂದು ಇಲ್ಲಿನ ದಟ್ಟ ಅರಣ್ಯವಾದ ರಾಮತೀರ್ಥ ಬಳಿಯ ಗುಹೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಿದ್ದಳು.

ಅಲ್ಲಿಯೇ ಚಿಕ್ಕ ರುದ್ರನ ಮೂರ್ತಿ ಇಟ್ಟುಕೊಂಡು ಪೂಜಾ ಕಾರ್ಯ ಮಾಡುತ್ತಾ ದಿನ ಕಳೆಯುತಿದ್ದಳು. ಸಿಪಿಐ ಶ್ರೀಧರ್ ನೇತ್ರತ್ವದ ತಂಡ ಈ ಭಾಗದಲ್ಲಿ ಗುಡ್ಡ ಕುಸಿತವಾದ್ದರಿಂದ ಗಸ್ತು ತಿರುಗುವಾಗ ಗುಹೆಯಲ್ಲಿ ಯಾರೋ ವಾಸವಾಗಿರುವುದನ್ನು ಪತ್ತೆ ಮಾಡಿ  ವಿದೇಶಿ ಮಹಿಳೆಯನ್ನು  ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ:-Gokarna: ಸಮುದ್ರಪಾಲಾದ ವೈದ್ಯಕೀಯ ವಿದ್ಯಾರ್ಥಿನಿಯರು

ರಷ್ಯಾದ ಮೋಹಿಗೆ ಅದ್ಯಾತ್ಮದ ಕಡೆ ಹೆಚ್ಚು ಆಸಕ್ತಿ ಇರುವುದರಿಂದ  ಪ್ರಕೃತಿಯಲ್ಲಿ ಇರಬೇಕು ಎಂದು ತನ್ನ ಮಕ್ಕಳೊಂದಿಗೆ ಏಕಾಂಗಿಯಾಗಿ ಗುಹೆ ಸೇರಿದ್ದಳು.

ಗುಡ್ಡ ಕುಸಿತವಾಗಿರುವ ರಾಮತೀರ್ಥ ಗುಡ್ಡದ ಗುಹೆಯಲ್ಲಿ ತಮ್ಮ ಪುಟ್ಟ ಮಕ್ಕಳೊಂದಿಗೆ ಕತ್ತಲಲ್ಲೇ ಬದುಕು ಕಳೆಯುತಿದ್ದಳು. ಎಸ್.ಪಿ ಎಂ ನಾರಾಯಣ್ ಸಲಹೆಯಂತೆ ಆಕೆಗೆ ಸ್ಥಳೀಯ ಎನ್.ಜಿ.ಓ ಮೂಲಕ ಆಪ್ತ ಸಮಾಲೋಚನೆ ನಡೆಸಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದ್ದು ರಷ್ಯಾ ಆಂಬಸಿಯನ್ನು ಸಂಪರ್ಕಿಸಲಾಗಿದ್ದು ಆಕೆಯನ್ನು ಆಕೆಯ ದೇಶಕ್ಕೆ ಪುನಹಾ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ