Karnatakaರಾಜ್ಯದಲ್ಲಿ 25 ಲಕ್ಷಕ್ಕೂ ಅಧಿಕ APL ಕಾರ್ಡ ಗಳು ರದ್ದು -ಇನ್ನುಮುಂದೆ ಸರ್ಕಾರಿ ಯೋಜನೆಗಳಿಂದಲೂ ವಂಚಿತ !
Karnataka news 16 november 2024:ರಾಜ್ಯದಲ್ಲಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿದ ಬೆನ್ನಲ್ಲೇ ಅಹಾರ ಇಲಾಖೆ ಎಪಿಎಲ್ ಕಾಡ್ ದಾರರಿಗೂ ಶಾಕ್ ನೀಡಿದೆ.
ರೇಷನ್ ಕಾರ್ಡ್‌ಗೆ ration card ಧಾರ್ ದೃಢೀಕರಣ (ಇ-ಕೆವೈಸಿ) ಮಾಡದ ಕಾರಣಕ್ಕೆ ಲಕ್ಷಾಂತರ ಎಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿದೆ. ಹಲವು ತಿಂಗಳಿಂದ ಎಪಿಎಲ್ ಕಾರ್ಡ್‌ಗೆ ನೀಡಲಾಗುತ್ತಿದ್ದ ರೇಷನ್ ಹಂಚಿಕೆಯನ್ನು ನಿಲ್ಲಿಸಲಾಗಿದೆ.
ಇದನ್ನೂ ಓದಿ:-Honnavara :ರಸ್ತೆಯಲ್ಲೇ ಕೈಕೊಟ್ಟ ಹೆಡ್ ಲೈಟ್ ಹತ್ತು ಕಿಲೋಮೀಟರ್ ಕತ್ತಲಲ್ಲೇ ವಾಯುವ್ಯ ಸಾರಿಗೆ ಬಸ್ ಓಡಿಸಿದ ಚಾಲಕ!
ಈ ಹಿಂದೆ ಇಲಾಖೆಯಿಂದ ಬೋಗಸ್ ಕಾರ್ಡ್ ತಡೆಯುವ ಸಲುವಾಗಿ ರಾಜ್ಯಾದ್ಯಂತ ರೇಷನ್ ಕಾರ್ಡ್ ಪರಿಶೀಲನೆ ಕಾರ್ಯ ನಡೆದಿತ್ತು.
ನಂತರ, ರೇಷನ್ ಕಾರ್ಡ್ (Reshan card) ಆಧಾರ್ ಜೋಡಣೆ ನಿಯಮ ತರಲಾಗಿತ್ತು. ಶೇ.100 ಆಧಾರ್ ಜೋಡಣೆಯಾಗಿತ್ತು.ಈ ವೇಳೆ ಲಕ್ಷಾಂತರ ಬೋಗಸ್ ಕಾರ್ಡ್ ಪತ್ತೆಯಾಗಿತ್ತು.
2019ರಿಂದ 2022ರವರೆಗೆ ರೇಷನ್ ಕಾರ್ಡ್‌ಗೆ ಮತ್ತೊಮ್ಮೆ ಇ-ಕೆವೈಸಿ ಪ್ರಕ್ರಿಯೆ ಮಾಡಿಸುವಂತೆ ನಿಯಮ ಜಾರಿಗೆ ತರಲಾಗಿತ್ತು.
ಈ ವೇಳೆ ಶೇ.80ರಷ್ಟು ಎಪಿಎಲ್ ಫಲಾನುಭವಿಗಳು ಇ-ಕೆವೈಸಿ ಮಾಡಿಸಿಕೊಂಡಿದ್ದರು. ಆದರೆ, ಶೇ.20ರಷ್ಟು ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ಸದಸ್ಯರು ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಂಡಿರಲಿಲ್ಲ. ಹಾಗಾಗಿ, ಅಂಥವರ ಕಾರ್ಡ್‌ಗಳನ್ನು ಡಿಲೀಟ್ ಮಾಡಲಾಗಿದೆ.
ರಾಜ್ಯದಲ್ಲಿ 25,62,562 2 ಕಾರ್ಡ್‌ಗಳಿದ್ದು, 87,86,886 ಸದಸ್ಯರಿದ್ದಾರೆ. 'ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ'ಯಡಿ ಎಪಿಎಲ್ ಹೊಂದಿರುವ ಪ್ರತಿ ಕಾರ್ಡ್‌ಗೆ ಕೆಜಿ ಅಕ್ಕಿಗೆ 15 ರೂ.ನಂತೆ 10 ಕೆಜಿ ಅಕ್ಕಿ ನೀಡಲಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ 315 BPL ನಿಂದ APL ಗೆ ರೇಷನ್ ಕಾರ್ಡ ನನ್ನು ಕನ್ವರ್ಟ ಮಾಡಲಾಗಿದೆ. ಇದಲ್ಲದೇ ಸರ್ಕಾರಿ ಕೆಲಸದಲ್ಲಿರುವ 20, ನಿಗದಿಗಿಂತ ಹೆಚ್ಚಿನ ಆದಾಯ ಹೊಂದಿದ 187 ,ಟ್ಯಾಕ್ಸ್ ಪಾವತಿದಾರರ 187 ಕಾರ್ಡ ಗಳನ್ನು APL ಗೆ ಮಾಡಲಾಗಿದೆ.
ಈ ಸೇವೆಗಳಿಂದಲೂ ವಂಚಿತರಾಗಲಿದ್ದಾರೆ ಎಪಿಎಲ್ ಕಾರ್ಡ ಧಾರರು!
APL ಕಾರ್ಡ ರದ್ದಿನಿಂದ ಗೃಹಲಕ್ಷ್ಮಿ ಯೋಜನೆಯಿಂದ ಪಡೆಯುವ ಹಣ ರದ್ದಾಗಲಿದೆ. ಕುಟುಂಬದ ಐಡಿ ಕಾರ್ಡ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸರ್ಕಾರಿ ಕೆಲಸಗಳ ಅರ್ಜಿ ಸಹಿತ ಸಲ್ಲಿಸಲು ಸಾಧ್ಯವಿಲ್ಲ. ವಿವಿಧ ಸರ್ಕಾರಿ ಸೌಲಭ್ಯದಿಂದಲೂ ವಂಚಿತರಾಗುತ್ತಾರೆ.ಆಯುಷ್ಯಾನ್ ಭಾರತ ಯೋಜನೆ ಸಹ ಸಿಗದು. ರಿಯಾಯಿತಿ ದರದ ಅಕ್ಕಿಯೂ ಸಿಗುವುದಿಲ್ಲ. ಕೇಂದ್ರ ಸರ್ಕಾರದ ಮೀಸಲಾತಿ ಸಹ ಸಿಗದು. ಮುಂದೊಮ್ಮೆ ಸರ್ಕಾರ ಯೋಜನೆಗಳಿಗೆ ಎಪಿಎಲ್ ಕಡ್ಡಾಯ ಮಾಡಿದರೇ ಈ ಯೋಜನೆಗಳ ಫಲದಿಂದ ವಂಚಿತರಾಗಲಿದ್ದಾರೆ.