Shikaripura| ಅಕ್ಟೋಬರ್ 9 ಶಿಕಾರಿಪುರ ಬಂಧ್ -ಹೇಗಿರಲಿದೆ ಬಂದ್ ?
Shikaripura| ಅಕ್ಟೋಬರ್ 9 ಶಿಕಾರಿಪುರ ಬಂಧ್ -ಹೇಗಿರಲಿದೆ ಬಂದ್ ?

ಶಿಕಾರಿಪುರ: ಕುಟ್ರಳ್ಳಿ ಟೋಲ್ (Toll Gate) ವಿರೋಧಿಸಿ ಅ.9ರಂದು ಶಿಕಾರಿಪುರ ಬಂದ್‌ಗೆ ಕರೆ ನೀಡಲಾಗಿದೆ. ಈಗಾಗಲೇ ವರ್ತಕರು, ರೈತರು ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿವೆ.
Shivamogga| ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಬಂದ ಬಿಳಿ ಹುಲಿ-ಯಾವೆಲ್ಲಾ ಪ್ರಾಣಿಗಳು ಬಂದಿವೆ ವಿವರ ಇಲ್ಲಿದೆ.
ಶಿಕಾರಿಪುರ – ಶಿರಾಳಕೊಪ್ಪ (shiralkoppa)ನಡುವೆ ಕುಟ್ರಳ್ಳಿಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಿಸಲಾಗಿದೆ. ಇದರಿಂದ ರೈತರು, ಉದ್ಯೋಗಿಗಳು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ ಎಂದು ಆರೋಪಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಒಂದು ವರ್ಷದಿಂದ ಹೋರಾಟ ನಡೆಸುತ್ತಿದೆ. ಆದರು ಸರ್ಕಾರ ಟೋಲ್ ಗೇಟ್ ತೆರವು ಮಾಡದ್ದಕ್ಕೆ ಶಿಕಾರಿಪುರ ಬಂದ್ ಮಾಡಲಾಗುತ್ತಿದೆ.
ಕಳೆದ ಒಂದು ವರ್ಷದಿಂದ ಕುಟ್ರಳ್ಳಿ ಟೋಲ್ ಗೇಟ್ ತೆರವಿಗೆ ನಿರಂತರ ಹೋರಾಟ ಮಾಡುತ್ತಿದ್ದೇವೆ. ಆದರು ಸರ್ಕಾರ ಕಣ್ತೆರೆಯುವಲ್ಲಿ ವಿಫಲವಾಗಿದೆ. ಆದ್ದರಿಂದ ಅ.9ರಂದು ಇಡೀ ಶಿಕಾರಿಪುರ ತಾಲೂಕು ಬಂದ್ ಮಾಡಲಾಗುತ್ತದೆ ಎಂದು ಶಿಕಾರಿಪುರ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶಿವರಾಜ್ ಸುಣ್ಣದಕೊಪ್ಪ ತಿಳಿಸಿದ್ದಾರೆ.
ಹೇಗಿರಲಿದೆ ಬಂದ್ !
ಶಿಕಾರಿಪುರ (shikaripur) ಪಟ್ಟಣದ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿ ಪ್ರತಿಭಟನಾ ಮೆರವಣಿಗೆ ಆರಂಭಿಸಲಾಗುತ್ತದೆ. ಅಲ್ಲಿಂದ ಪಿಎಲ್‌ಡಿ ಬ್ಯಾಂಕ್ ಮುಂಭಾಗ, ತಾಲೂಕು ಕಚೇರಿ, ದೊಡ್ಡಪೇಟೆ, ಶಿರಾಳಕೊಪ್ಪ ಸರ್ಕಲ್, ಶಿವಮೊಗ್ಗ ಸರ್ಕಲ್ ಮೂಲಕ ಮೆರವಣಿಗೆ ಸಾಗಿ ತಾಲೂಕು ಕಚೇರಿ ಮುಂಭಾಗ ತಲುಪಲಿದೆ. ಅಲ್ಲಿ ಪ್ರತಿಭಟನಾ ಸಭೆ ನಡೆಸಲಾಗುತ್ತದೆ. ಕನಿಷ್ಠ 5 ಸಾವಿರ ಜನರು ಸೇರುವ ಸಾಧ್ಯತೆ ಇದೆ ಎಂದು ಹೋರಾಟ ಸಮಿತಿ ತಿಳಿಸಿದೆ.
ಬಂದ್ ಹಿನ್ನಲೆಯಲ್ಲಿ ಶಿಕಾರಿಪುರದ ವಾಣಿಜ್ಯ ವಹಿವಾಟು ಸ್ತಬ್ದವಾಗಲಿದೆ.