Sirsi: ಅನಂತಕುಮಾರ್ ಹೆಗಡೆಗೆ ಹತ್ತಕ್ಕೂ ಹೆಚ್ಚು ಜೀವ ಬೆದರಿಕೆ? ಪ್ರಗತಿ ಕಾಣದ ತನಿಖೆ ಸುತ್ತಾ!
Sirsi: ಅನಂತಕುಮಾರ್ ಹೆಗಡೆಗೆ ಹತ್ತಕ್ಕೂ ಹೆಚ್ಚು ಜೀವ ಬೆದರಿಕೆ? ಪ್ರಗತಿ ಕಾಣದ ತನಿಖೆ ಸುತ್ತಾ!
ಕಾರವಾರ/ಶಿರಸಿ :- ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ (Ananthkumar hegde) ಇತ್ತೀಚಿನ ದಿನಗಳಲ್ಲಿ ರಾಜಕೀಯದಿಂದ ದೂರ ಉಳಿದರೂ ವಿವಾದಗಳು,ಬೆದರಿಕೆಗಳು ಅವರನ್ನ ಬಿಡುತ್ತಿಲ್ಲ ,ಇತ್ತೀಚೆಗೆ ಬೆಂಗಳೂರಿನಲ್ಲಿ ಓವರ್ ಟೇಕ್ ವಿಚಾರದಲ್ಲಿ ಹಲ್ಲೆ ಪ್ರಕರಣ ವಿವಾದ ಸೃಷ್ಟಿಯಾದರೇ ಇದೀಗ ಜೀವ ಬೆದರಿಕೆಯ ಮೇಲ್ ಬಂದಿದ್ದು ಕೋರ್ಟ ಮೂಲಕ ಪ್ರಕರಣ ದಾಖಲಿಸಿದ್ದಾರೆ.
ಈ ಹಿಂದೆಯೂ ಸಹ ಪ್ರಕರಣ ದಾಖಲಾಗಿದ್ದರೂ ಈವರೆಗೂ ಯಾವೊಬ್ಬರನ್ನು ಬಂಧಿಸಿಲ್ಲ ಏಕೆ ಎಂಬ ಪ್ರಶ್ನೆ ಎದ್ದಿದೆ. ಈ ಕುರಿತು ಕನ್ನಡವಾಣಿ ಗ್ರೂಂಡ್ ರಿಪೋರ್ಟ ಇಲ್ಲಿದೆ.
ಇದನ್ನೂ ಓದಿ:-Sirsi :ಶಿರಸಿ ನಗರಸಭೆ ಸದಸ್ಯ, ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ
ರಾಜ್ಯದ ಫೈರ್ ಬ್ರಾಂಡ್ ಎಂದೇ ಪ್ರಸಿದ್ಧವಾಗಿದ್ದ ಪ್ರಕರ ಹಿಂದೂ ವಾದಿ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ರಾಜಕೀಯದಿಂದ ಅಲ್ಪ ದೂರ ಉಳಿದು ಸದ್ಯ ತಮ್ಮಪಾಡಿಗೆ ತಮ್ಮ ಉದ್ಯಮದಲ್ಲಿದ್ದಾರೆ. ರಾಜಕೀಯದಲ್ಲಿ ಸಕ್ರಿಯರಾಗಿದ್ದ ಹೆಗಡೆ ಸದಾ ಮಾಧ್ಯಮಗಳ ಮೂಲಕ ವಿವಾಧದ ಕೇಂದ್ರವಾಗಿರುತಿದ್ದರು.
ಇದೀಗ ರಾಜಕೀಯದಿಂದ ದೂರ ಉಳಿದರೂ ವಿವಾದ ಹಾಗೂ ಜೀವ ಬೆದರಿಕೆಗಳು ಅವರನ್ನು ಮಾತ್ರ ಬಿಡುತ್ತಿಲ್ಲ. ಇತ್ತೀಚೆಗೆ ಬೆಂಗಳೂರಿಗೆ ತೆರಳುವಾಗ ಓವರ್ ಟೇಕ್ ವಿಚಾರದಲ್ಲಿ ಹಲ್ಲೆ ಪ್ರಕರಣದಲ್ಲಿ ಅನಂತಕುಮಾರ್ ಹೆಗಡೆ ಮತ್ತು ಗನ್ ಮ್ಯಾನ್ ವಿರುದ್ಧ ಪ್ರಕರಣ ದಾಖಲಾಗಿ ವಿವಾದ ಎದ್ದಿತು.
ಆದ್ರೆ ಇದೀಗ ಹೆಗಡೆಗೆ ಜೂನ್ 24ರಂದು ಮುಂಬೈನ 76 ವರ್ಷದ ವೃದ್ಧ ವಿನಿತ್ ಕಚೇರಿಯ ಎಂಬಾತ ಇಮೇಲ್ ಮಾಡುವ ಮೂಲಕ ಜೀವ ಬೆದರಿಕೆ ಹಾಕಿದ್ದು ದೂರು ನೀಡಲು ಹೋದಾಗ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಅಸೂಜ್ಞೆ ಅಪರಾಧ ವೆಂದು ಹಿಂಬರಹ ನೀಡಿದರು.ನಂತರ ಶಿರಸಿ ನ್ಯಾಯಾಲಯದ ಮೊರೆಹೋದ ಹೆಗಡೆ ಆಪ್ತಕಾರ್ಯದರ್ಶಿ ಸುರೇಶ್ ಶಟ್ಟಿ ರವರ ಪರವಾಗಿ ಜುಲೈ 11 ರಂದು ಪೊಲೀಸರು ದೂರು ದಾಖಲಿಸಿಕೊಳ್ಳುವಂತೆ ಸೂಚಿಸಿತು. ಇದರಂತೆ ಜುಲೈ 18 ರಂದು ದೂರು ದಾಖಲಿಸಿಕೊಳ್ಳಲಾಗಿದೆ.
ಪ್ರಕರಣ ಕುರಿತು ಉತ್ತರ ಕನ್ನಡ ಎಸ್ ಪಿ ದೀಪನ್ .ಎಂ .ಎನ್. ಹೇಳಿಕೆ ಇಲ್ಲಿದೆ:-
ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಜೀವ ಬೆದರಿಕೆ ಹೊಸದಲ್ಲ.ಹತ್ತಕ್ಕೂ ಹೆಚ್ಚು ಕರೆಗಳು,ಮೇಲ್ ಗಳು 2018 ರಿಂದ ಈವರೆಗೆ ಬಂದಿದ್ದು ಖಲಿಸ್ತಾನಿ ಉಗ್ರರು ಸಹ ಬೆದರಿಕೆ ಹಾಕಿದ್ದರು.ಈವರೆಗೆ ನೀಡಿದ ದೂರುಗಳು ಯಾವ ಸ್ಥಿತಿಯಲ್ಲಿದೆ,ಆರೋಪಿಗಳನ್ನ ಬಂಧಿಸಿದ್ರಾ ಎನ್ನುವುಂದನ್ನು ನೋಡಿದ್ರೆ ಎಂತವರಿಗೂ ಯೋಚಿಸುವಂತೆ ಮಾಡುತ್ತದೆ.
ಅನಂತಕುಮಾರ್ ಹೆಗಡೆ ಶಿರಸಿಯ ಕೆ.ಹೆಚ್.ಬಿ ಕಾಲೋನಿಯ ವಿವಾಕಾನಂದ ನಗರದಲ್ಲಿ ವಾಸವಾಗಿದ್ದಾರೆ. ಹೀಗಾಗಿ ಶಿರಸಿ ಮಾರುಕಟ್ಟೆ ಠಾಣೆ ಯಲ್ಲಿಯೇ ಬಹುತೇಕ ದೂರುಗಳು ದಾಖಲಾಗಿವೆ.
ಶಿರಸಿಯಲ್ಲಿ ಎಲ್ಲಿ ಎಷ್ಟು ದೂರು ದಾಖಲು?
22 ಎಪ್ರಿಲ್ 2018 ರಲ್ಲಿ ಅನಾಮದೇಯ ಕಾಲ್ ಬಂದಿದ್ದು ತಲೆ ಕಡಿಯುವ ಬೆದರಿಕೆ ಹಾಕಿದ್ದರು.ಈಕುರಿತು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.2019 ಪೆಬ್ರವರಿ ,ಎಪ್ರಿಲ್ ನಲ್ಲಿ ಮತ್ತೆ ಕೊಲ್ಲುವ ಬೆದರಿಕೆ ಕರೆ ಮಾಡಲಾಗಿತ್ತು. ಈ ಕುರಿತು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದಾದ ನಂತರ 2020 ರ ಜುಲೈ 27 ರಂದು ಖಲಿಸ್ತಾನಿ ಉಗ್ರರು ಕರೆಮಾಡಿ ಕೊಲ್ಲುವ ಬೆದರಿಕೆ ಹಾಕಿದ್ದರು.ಈ ಕುರಿತು ಕುದ್ದು ಹೆಗಡೆಯವರೇ ದೂರು ನೀಡಿದ್ದರು,5 ಎಪ್ರಿಲ್ 2021 ರಂದು ಮನೆಗೆ ಕರೆಮಾಡಿ ಜೀವ ಬೆದರಿಕೆ ಹಾಕಿದ್ದು ಈ ಪ್ರಕರಣ ಸಹ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ದಾಖಲಾಗಿತ್ತು.
ಈ ದೂರುಗಳಿಗೆಲ್ಲಾ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು "ಸಿ" ರಿಪೋರ್ಟ ನೀಡಿದ್ದರು. ಇದಲ್ಲದೇ 2018 ರಲ್ಲಿ ಶಿರಸಿ ನಗರ ಠಾಣೆಯಲ್ಲಿ 1 ,2018 ರಿಂದ 2021 ರ ವರೆಗಿನ ಮಾರುಕಟ್ಟೆ ಠಾಣೆಯಲ್ಲಿ- 4 ಪ್ರಕರಣಗಳು ಫೇಸ್ ಬುಕ್ ನಲ್ಲಿ ಅವಹೇಳನ ,ದಮ್ಕಿ ಪ್ರಕರಣ ದಾಖಲಿಸಿದ್ದಾರೆ. ಇವು ಸಹ "ಸಿ"ರಿಪೋರ್ಟ ನೀಡಲಾಗಿದೆ.
ಇದನ್ನೂ ಓದಿ:-Sirsi:ಅಳಿಯನಿಂದಲೇ ಅತ್ತೆಯ ಕೊಲೆ-ಆಸ್ತಿ ಜಗಳದಲ್ಲಿ ಹೋಯ್ತು ವೃದ್ದೆಯ ಪ್ರಾಣ
ಅನಂತಕುಮಾರ್ ಹೆಗಡೆ ಸಂಸದರಾಗಿ ,ಕೇಂದ್ರ ಸಚಿವರಾಗಿದ್ದಾಗಲೇ ಕುದ್ದು ಅವರು ಹಾಗೂ ಆಪ್ತ ಕಾರ್ಯದರ್ಶಿ ದೂರು ನೀಡಿದರೂ ಯಾವ ತನಿಖೆಯ ಪ್ರಗತಿ ಕಾಣದೇ ಇಲ್ಲಿವರೆಗೆ ಯಾರನ್ನೂ ಬಂಧಿಸದೆ ಶಿರಸಿ ಠಾಣೆ ಪೊಲೀಸರು ವಿಫಲರಾಗಿದ್ದಾರೆ.ಹೀಗಾಗಿ ಈ ಪ್ರಕರಣವನ್ನಾದರೂ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಅವರ ಆಪ್ತ ಕಾರ್ಯದರ್ಶಿ ಸುರೇಶ್ ಶಟ್ಟಿ ಮನವಿ ಮಾಡಿದ್ದಾರೆ.
ಇನ್ನು ನಿರಂತರ ಜೀವ ಬೆದರಿಕೆ ಬರುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮಾಜಿ ಕೇಂದ್ರ ಸಚಿವರ ಭದ್ರತೆಗಾಗಿ ಎರಡು ಗನ್ ಮ್ಯಾನ್ , ಎಸ್ಕಾರ್ಟ ನೀಡಿದ್ದು , ಮನೆಗೆ ಓರ್ವ ಹೆಡ್ ಕಾನಸ್ಟೇಬಲ್ ಸೇರಿ ಮೂರು ಜನ ಸಿಬ್ಬಂದಿಯ ಭದ್ರತೆ ನೀಡಿದೆ.ಆದರೇ ಈವರೆಗೂ ದಾಖಲಾದ ಪ್ರಕರಣದಲ್ಲಿ ಮಾತ್ರ ಯಾವೊಬ್ಬ ವ್ಯಕ್ತಿಯನ್ನು ಬಂಧಿಸಲಾಗದೇ" ಸಿ "ರಿಪೋರ್ಟ ನೀಡಿದ್ದು ಈಗ ಪ್ರಶ್ನೆ ಏಳುವಂತೆ ಮಾಡಿದೆ.
