Karnataka:ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು:ಎಲ್ಲಿ ಹೇಗಿರಲಿದೆ ಮಳೆ ಪ್ರತಾಪ! ವಿವರ ನೋಡಿ
ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು:ಎಲ್ಲಿ ಹೇಗಿರಲಿದೆ ಮಳೆ ಪ್ರತಾಪ! ವಿವರ ನೋಡಿ
ಬೆಂಗಳೂರು: ರಾಜ್ಯದಲ್ಲಿ ಒಂದು ವಾರ ದಿಂದ ಅಲ್ಪ ಬಿಡುವುಕೊಟ್ಟಿದ್ದ ಮುಂಗಾರು ಮತ್ತೆ ಚುರುಕುಗೊಂಡಿದೆ. ಈ ವಾರ ಪೂರ್ತಿ ರಾಜ್ಯದ ಹಲವು ಭಾಗದಲ್ಲಿ ಭಾರೀ ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ:-Karwar:ಮನೆಯಲ್ಲಿ ದೇವರಿಗೆ ಹಚ್ಚಿಟ್ಟಿದ್ದ ದೀಪದಿಂದ ಧಗ -ಧಹಿಸಿದ ಮನೆ -ಸಂಪೂರ್ಣ ನಾಶ
ಕರಾವಳಿ ಮತ್ತು ಮಲೆನಾಡಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇಂದು (ಆ.4) ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಾಳೆಯಿಂದ (ಅ.5) ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್. ಉಳಿದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದಲ್ಲಿ ಆ.7 ರವರೆಗೆ ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ:-Rain:ಉತ್ತರ ಕನ್ನಡ ದಲ್ಲಿ ರಾಜ್ಯದಲ್ಲೇ ದಾಖಲೆ ಮಳೆ -198 ಕ್ಕೂ ಹೆಚ್ಚು ಜನರು ಕಾಳಜಿ ಕೇಂದ್ರಕ್ಕೆ ರವಾನೆ
ಇನ್ನು ಇಂದು ಶಿವಮೊಗ್ಗ, ಉತ್ತರ ಕನ್ನಡ ,ಉಡುಪಿ,ದಕ್ಷಿಣ ಕನ್ನಡ,ಕೊಡಗು,ತುಮಕೂರು,ಕೋಲಾರ,ಬೆಂಗಳೂರು,ಚಿಕ್ಕಮಗಳೂರು ಗಳಲ್ಲಿ ಅಲ್ಲಲ್ಲಿ ಬಿರುಸಿನ ಮಳೆಯಾಗಲಿದೆ.
ಜುಲೈ 6 ರಿಂದ ಜುಲೈ 8 ರ ವರೆಗೆ ಉತ್ತರ ಕನ್ನಡ,ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಮಾಹಿತಿ ನೀಡಿದೆ.