Karnataka NHPC recruitment|248 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿದೆ ವಿವರ
Karnataka NHPC recruitment|248 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿದೆ ವಿವರ
Job news Bengalur:- ರಾಷ್ಟ್ರೀಯ ಜಲವಿದ್ಯುತ್ ಶಕ್ತಿ ನಿಗಮ (NHPC) ವತಿಯಿಂದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕಿರಿಯ ಅಭಿಯಂತರರ (JE) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವ ನಿಗಮವು ಅಧಿಸೂಚನೆ ಹೊರಡಿಸಿದೆ.
ಆನ್ ಲೈನ್ ( online) ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಅರ್ಹ ಆಕಾಂಶಿಗಳು ಅರ್ಜಿ ಸಲ್ಲಿಸಬಹುದು. ಹಾಗಿದ್ದರೇ ಏನೆಲ್ಲಾ ಅರ್ಹತೆ ಇಲ್ಲಿದೆ ಅದರ ವಿವರ.
ರಾಷ್ಟ್ರೀಯ ಜಲವಿದ್ಯುತ್ ಶಕ್ತಿ ನಿಗಮ (NHPC) ಕ್ಕೆ ಅರ್ಹ ಉದ್ಯೋಗಾಕಾಂಕ್ಷಿಗಳು ಸೆಪ್ಟಂಬರ್ 2ರಿಂದ ಅಕ್ಟೋಬರ್ 1 ರವರೆಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಜೆಇ ಸೇರಿದಂತೆ ವಿವಿಧ ಒಟ್ಟು 248 ಹುದ್ದೆಗಳ (job) ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಹೆಚ್ಚಿನ ಮಾಹಿತಿ, ಅಧಿಸೂಚನೆ, ಆನ್‌ಲೈನ್ ಅರ್ಜಿ ಸಲ್ಲಿಕೆಗೆ ನೀವು ಅಧಿಕೃತ ವೆಬ್‌ಸೈಟ್ nhpcindia.com ಗೆ ಭೇಟಿ ನೀಡಬೇಕು.
ಹುದ್ದೆಗಳು ಹಾಗೂ ನೇಮಕಾತಿ ಪೂರ್ಣ ವಿವರ :-
ನೇಮಕಾತಿ ಸಂಸ್ಥೆ: ರಾಷ್ಟ್ರೀಯ ಜಲವಿದ್ಯುತ್ ಶಕ್ತಿ ನಿಗಮ (NHPC)
ಉದ್ಯೋಗಗಳು: ಕಿರಿಯ ಅಭಿಯಂತರ ಮತ್ತು ಇತರ
ಒಟ್ಟು ಹುದ್ದೆಗಳು: 248
ಅರ್ಜಿ ಸಲ್ಲಿಕೆ ಆರಂಭ: ಸೆಪ್ಟಂಬರ್ 2
ಅರ್ಜಿ ಸಲ್ಲಿಕೆ ಕೊನೆ ದಿನ: ಅಕ್ಟೋಬರ್ 1
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಹುದ್ದೆಗಳ ಇತರ ಮಾಹಿತಿ
* ಸಹಾಯಕ ಅಧಿಕೃತ ಭಾಷಾ ಅಧಿಕಾರಿ ಹುದ್ದೆಗಳು- 11
* ಜೂನಿಯರ್ ಎಂಜಿನಿಯರ್ (ಸಿವಿಲ್)- 109
* ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್)- 46
* ಜೂನಿಯರ್ ಎಂಜಿನಿಯರ್ (ಮೆಕ್ಯಾನಿಕಲ್) - 49
* ಜೂನಿಯರ್ ಎಂಜಿನಿಯರ್ -17
ಸೂಪರ್‌ವೈಸರ್-1
* ಸೀನಿಯರ್ ಅಕೌಂಟೆಂಟ್ -10
* ಹಿಂದಿ ಅನುವಾದಕ-5 ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಹತೆ ಏನು?
ನಿಗಮ ಅಧಿಸೂಚನೆ ಪ್ರಕಾರ ಸದರಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಆಯಾ ಹುದ್ದೆಗೆ ತಕ್ಕಂತೆ ವಿದ್ಯಾರ್ಹತೆ ಇರಬೇಕು. ಡಿಪ್ಲೊಮಾ ಅಥವಾ ಪದವಿ ಪಡೆದಿರಬೇಕು. ಸೀನಿಯರ್ ಅಕೌಂಟೆಂಟ್ ಹುದ್ದೆಗೆ, ಅರ್ಜಿದಾರರು ಸಿಎ/ ಸಿಎಂಎ ಪದವಿ ಪಡೆದಿರಬೇಕು ಎಂದು ತಿಳಿಸಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಈ ಮೇಲಿನ ಹುದ್ದೆಗಳ ಅರ್ಜಿಗಳನ್ನು ಸಲ್ಲಿಸಿದ ಬಳಿಕ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯನ್ನು ಸಿಬಿಟಿ ಮೋಡ್‌ನಲ್ಲಿ ನಡೆಯಲಿದೆ.
Karnataka|ಈ IAS ಅಧಿಕಾರಿಗಳ ಸರ್ಕಾರಿ ಹಣದಲ್ಲಿ ಸ್ವಂತ ಖರ್ಚು ! ಪ್ರಶ್ನೆ ಮಾಡುವವರು ಯಾರು?
ಪರೀಕ್ಷೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿರಲಿದೆ. ಅಭ್ಯರ್ಥಿಗಳು ಎರಡು ಗಂಟೆಗಳ ಅವಧಿಯಲ್ಲಿ ಒಟ್ಟು 200 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ನಂತರ ಅವರನ್ನು ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ. ನಿಯಮಾನುಸಾರ ಮಾಸಿಕ ವೇತನ ನೀಡಲಾಗುವುದು.
ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಉಪಯೋಗಿಸಿ:-