For the best experience, open
https://m.kannadavani.news
on your mobile browser.
Advertisement

Diwali Special Train| ದೀಪಾವಳಿಗೆ ಕರಾವಳಿ ಮಲೆನಾಡು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ!

ದೀಪಾವಳಿ (deepavali)ನಿಮಿತ್ತ ಕರಾವಳಿಯ ಹಾಗೂ ಮಲೆನಾಡು ಭಾಗದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಖುಷಿ ಸುದ್ದಿ ನೀಡಿದೆ.
11:11 AM Oct 19, 2024 IST | ಶುಭಸಾಗರ್
diwali special train  ದೀಪಾವಳಿಗೆ ಕರಾವಳಿ ಮಲೆನಾಡು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ

Diwali special train news, 19 OCTOBER 2024 :

Advertisement

ದೀಪಾವಳಿ (deepavali)ನಿಮಿತ್ತ ಕರಾವಳಿಯ ಹಾಗೂ ಮಲೆನಾಡು ಭಾಗದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಖುಷಿ ಸುದ್ದಿ ನೀಡಿದೆ.

ಹೌದು ದುಪ್ಟಟ್ಟು ದರ ನೀಡಿ ಖಾಸಗಿ ಬಸ್ ನ ಮೂಲಕ ಬೆಂಗಳೂರಿನಿಂದ ಕರಾವಳಿ ಕಡೆ ಸಂಚರಿಸುವ ಪ್ರಯಾಣಿಕರಿಗೆ ಕಡಿಮೆ ದರದ ವಿಶೇಷ ರೈಲು ಬಿಡಲಾಗಿದೆ.

ರೈಲಿನ ವೇಳಾಪಟ್ಟಿ ಹೀಗಿದೆ.

ಅಕ್ಟೋಬರ್ 30 ಹಾಗೂ 31ರಂದು ವಿಶೇಷ ರೈಲು ಸಂಚರಿಸಲಿದೆ .

ರೈಲು ಸಂಖ್ಯೆ 06597 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌(Sir M Vishweshwaraih Terminal) ಬೆಂಗಳೂರು ಹಾಗೂ ಕಾರವಾರ ನಡುವಿನ ಎಕ್ಸ್‌ಪ್ರೆಸ್‌ ರೈಲು(Express Train) ಅಕ್ಟೋಬರ್ 30 ಬುಧವಾರದಂದು ಅಪರಾಹ್ನ 1:00ಗಂಟೆಗೆ ಬೆಂಗಳೂರಿನಿಂದ ಪ್ರಯಾಣ ಆರಂಭಿಸಲಿದ್ದು ಗುರುವಾರ ಮುಂಜಾನೆ 4ಗಂಟೆಗೆ ರೈಲು ಕಾರವಾರ ತಲುಪಲಿದೆ.

ಅಕ್ಟೋಬರ್ (October) 31ರ ಗುರುವಾರ ಅಪರಾಹ್ನ 12:00ಗಂಟೆಗೆ ರೈಲು ಸಂಖ್ಯೆ 06598 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು ಎಕ್ಸ್‌ಪ್ರೆಸ್‌ ವಿಶೇಷ ರೈಲು ಕಾರವಾರದಿಂದ ಪ್ರಯಾಣ ಬೆಳೆಸಲಿದೆ.

ಶುಕ್ರವಾರ ಮುಂಜಾನೆ 4:00ಗಂಟೆಗೆ ಬೆಂಗಳೂರು ತಲುಪಲಿದೆ. ಈ ರೈಲಿಗೆ ಚಿಕ್ಕಬಾಣಾವರ, ಕುಣಿಗಲ್(Kunigal), ಚೆನ್ನರಾಯಪಟ್ಟಣ (ಚೆನ್ನರಾಯಪಟ್ಟಣ ), ಹಾಸನ (Hasan), ಸಕಲೇಶಪುರ,ಸುಬ್ರಹ್ಮಣ್ಯ ರೋಡ್,ಕಬಕ,ಪುತ್ತೂರು,ಬಂಟ್ವಾಳ,ಸುರತ್ಕಲ್ ,ಉಡುಪಿ,ಬಾರ್ಕೂರ್ ,ಕುಂದಾಪುರ,ಮುರುಡೇಶ್ವರ,ಗೋಕರ್ಣ,ಅಂಕೋಲ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ.

ಈ ರೈಲು 3ಟಯರ್ ಎಸಿ-2, ಸ್ವೀಪರ್ ಕೋಚ್-10, ಜನರಲ್ ಕೋಚ್-4, ಎಸ್‌ಎಲ್‌ಆರ್-2 ಸೇರಿದಂತೆ ಒಟ್ಟು 18 ಕೋಚ್‌ಗಳೊಂದಿಗೆ ಸಂಚಾರ ನಡೆಸಲಿದೆನಡೆಸಲಿದೆ.

ಶಿವಮೊಗ್ಗ ಜನಶತಾಬ್ದಿ ರೈಲಿಗೆ ಹೊಸ ಸ್ಟಾಪ್‌ ಸೇರ್ಪಡೆ:-

ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ (Jan Shatabdi) ಮತ್ತು ಹುಬ್ಬಳ್ಳಿ – ಬೆಂಗಳೂರು ಜನ ಶತಾಬ್ದಿ ರೈಲುಗಳು ಇನ್ಮುಂದೆ ತಿಪಟೂರು ನಿಲ್ದಾಣದಲ್ಲಿಯು ನಿಲುಗಡೆ ನೀಡಲಿವೆ.

ಈ ಕುರಿತು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಟ್ವೀಟ್‌ ಮಾಡಿದ್ದಾರೆ. ಇದರಿಂದ ಇವರೆಡೂ ರೈಲುಗಳಿಗೆ ಹೊಸತೊಂದು ಸ್ಟಾಪ್‌ ಸೇರಿಸಿದಂತಾಗಿದೆ.

ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ ರೈಲು ಪ್ರತಿ ದಿನ ಬೆಳಗ್ಗೆ 5.15ಕ್ಕೆ ಶಿವಮೊಗ್ಗ ನಿಲ್ದಾಣದಿಂದ ಹೊರಡಲಿದೆ. ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸಿಕೆರೆ, ತುಮಕೂರು, ಯಶವಂತಪುರದಲ್ಲಿ ನಿಲುಗಡೆ ಇತ್ತು. ಬೆಳಗ್ಗೆ 9.50ಕ್ಕೆ ಬೆಂಗಳೂರಿನ ಮೆಜೆಸ್ಟಿಕ್‌ ತಲುಪಲಿದೆ.

ಸಂಜೆ 5.15ಕ್ಕೆ ಮೆಜೆಸ್ಟಿಕ್‌ನಿಂದ ಹೊರಡುವ ರೈಲು ರಾತ್ರಿ 9.40ಕ್ಕೆ ಶಿವಮೊಗ್ಗ ತಲುಪಲಿದೆ. ಈ ಮಾರ್ಗದಲ್ಲಿಯು ಜನ ಶತಾಬ್ದಿ ರೈಲು ಇವೇ ನಿಲ್ದಾಣಗಳಲ್ಲಿ ಸ್ಟಾಪ್‌ ನೀಡುತ್ತಿತ್ತು. ಇನ್ಮುಂದೆ ತಿಪಟೂರು ನಿಲ್ದಾಣದಲ್ಲಿಯು ರೈಲು ಸ್ಟಾಪ್‌ ನೀಡಲಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ