Ration Card |ರೇಷನ್ ಕಾರ್ಡ ಇದ್ದವರು ಸೆ.30ರೊಳಗೆ ಈ ಕೆಲಸ ಮಾಡದಿದ್ರೆ ರೇಷನ್ ಸ್ಥಗಿತ!
Ration Card News :- ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಟಾನವಾಗುತಿದ್ದಂತೆ ರೇಷನ್ ಕಾರ್ಡ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಈ ಹಿಂದೆ ಮಾಡಿದ ಹಲವು ರೇಷನ್ ಕಾರ್ಡ ಗೆ E-KYC ಮಾಡಿಸದೇ ಹಲವರು ನಿರ್ಲಕ್ಷ ಮಾಡಿದ್ದಾರೆ.
ಹೌದು E-KYC ಎಂದರೇ ನೀವು ಯಾವುದೇ ರೀತಿಯ ಹಣಕಾಸಿನ ಕೊಡುಗೆಗಳನ್ನು ಪಡೆಯಲು ಗ್ರಾಹಕರ ಗುರುತು ಮತ್ತು ವಿಳಾಸದ ವಿವರವನ್ನು ಧೃಡೀಕರಿಸುವ ಅಥವಾ ಪರಿಶೀಲಿಸುವ ಪ್ರಕ್ರಿಯೆ ಆಗಿದೆ.
ಇದನ್ನೂ ಓದಿ:-Karwar ನಗರಸಭೆಯಲ್ಲೊಂದು NIGHT SHELTER ಏನಿದು ಗೊತ್ತಾ? Video ನೋಡಿ
ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಈ ರೀತಿಯ ಹಲವು ದಾಖಲೆಗಳು (Documents) ಇಂದು ಜನರಿಗೆ ಅಗತ್ಯವಾದ ದಾಖಲೆಗಳಾಗಿವೆ. ಅದರಲ್ಲೂ ರೇಷನ್ ಕಾರ್ಡ್ ಎಲ್ಲರಿಗೂ ಕೂಡ ಅವಶ್ಯಕವಾಗಿ ಬೇಕಾಗಿರುವಂತಹ ಒಂದು ದಾಖಲೆ.
ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ( Congress government) ರಾಜ್ಯದ ಯಾವುದೇ ಕುಟುಂಬದ ಸದಸ್ಯರು ಕಡ್ಡಾಯವಾಗಿ ರೇಷನ್ ಕಾರ್ಡ ಗೆ E-KYC ಮಾಡಿಸುವುದು ಕಡ್ಡಾಯವಾಗಿದ್ದು , ಸೆಪ್ಟೆಂಬರ್ 30 ರ ವರೆಗೆ ಗಡುವು ನೀಡಿದ್ದು , ಒಂದುವೇಳೆ E-KYC ಮಾಡಿಸದಿದ್ದರೇ ಮುಂದಿನ ತಿಂಗಳಿಂದ ರೇಚನ್ ನೀಡದಂತೆ ಸೂಚನೆ ನೀಡಲಾಗಿದೆ.
ರೇಷನ್ ಕಾರ್ಡ್ ಗೆ ಇ-ಕೆವೈಸಿ ಮಾಡಿಸಲು ಕೊನೆಯ ದಿನಾಂಕ ಯಾವುದು?
ಸೆಪ್ಟೆಂಬರ್ 30ರೊಳಗೆ ಗ್ರಾಹಕರು ಸಂಬಂಧ ಪಟ್ಟ ನ್ಯಾಯ ಬೆಲೆ ಅಂಗಡಿಗಳಲ್ಲಿ ಬೆಳಗ್ಗೆ 7.00 ರಿಂದ ರಾತ್ರಿ 9.00 ರವರೆಗೆ ಉಚಿತವಾಗಿ E-KYC ಮಾಡಿಸಿಕೊಳ್ಳುಬಹುದು.ಇದಲ್ಲದೇ ಆನ್ಸೆನ್ Online ಮುಖಾಂತರ ಮಾಡಿಕೊಳ್ಳಬಹುದು.
ರೇಷನ್ ಕಾರ್ಡ್ ಗೆ ಇ-ಕೆವೈಸಿ (eKYC) ಹೊಸ ಪ್ರಕ್ರಿಯೆ.
ಇ-ಕೆವೈಸಿಯನ್ನು ಮಾಡಿಸಬೇಕೆಂದರೆ ದೂರದ ರಾಜ್ಯಗಳಿಗೆ ಹೋಗಿದ್ದರೂ ಕೂಡ ತಮ್ಮ ತವರು ರಾಜ್ಯದ ಸ್ಥಳೀಯ ಸರ್ಕಾರಿ ಪಡಿತರ ಅಂಗಡಿಗೆ ಭೇಟಿ ನೀಡಬೇಕಾಗಿತ್ತು. ಆದರೇ ಇದೀಗ ಬದಲಾವಣೆ ತರಲಾಗಿದ್ದು ತಾವು ಇರುವ ಪ್ರದೇಶದಿಂದಲೇ ಅಥವಾ ರಾಜ್ಯದಿಂದಲೇ E-KYC ಮಾಡಿಸಿಕೊಳ್ಳಬಹುದಾಗಿದೆ.ಜೊತೆಗೆ ಹಳೆಯ ಕುಟುಂಬದ ಮಾಹಿತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಇ-ಕೆವೈಸಿ ಪ್ರಕ್ರಿಯೆಯು ಪರಿಹರಿಸುತ್ತದೆ.
ಈ ದಾಖಲೆಗಳು (Documents) ಕಡ್ಡಾಯ.
1.ಪಡಿತರ ಚೀಟಿಯ ಒರಿಜಿನಲ್ ಪ್ರತಿ.
2/ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಫೋಟೋಕಾಪಿ.
3.ಕುಟುಂಬದ ಯಜಮಾನನ ಆಧಾರ್ ಕಾರ್ಡ್ ನಕಲು ಪ್ರತಿ.
4.ಬ್ಯಾಂಕ್ ಪಾಸ್‌ಬುಕ್‌ನ ಫೋಟೋಕಾಪಿ.
5.ಕುಟುಂಬದ ಯಜಮಾನನ ಎರಡು ಪಾಸ್‌ಪೋರ್ಟ ಅಳತೆಯ ಪೋಟೋ.
ಹೊಸ ರೇಷನ್ ಕಾರ್ಡ ಗೆ ಅರ್ಜಿ ಸಲ್ಲಿಸಲು ahara.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.ಸೇವಾ ಸಿಂದೂ ಪೋರ್ಟಲ್ ( SevaSindhu portal)ನಲ್ಲಿ ಸಹ ಅರ್ಜಿ ಸಲ್ಲಿಸಬಹುದು.