Uttara kannada| ಕಾಡುಪ್ರಾಣಿ ಗಿಂತ ಬೀದಿನಾಯಿ ಕಾಟ ಜೋರು| ಬೀದಿ ನಾಯಿ ಎಷ್ಟು ಜನರ ಮೇಲೆ ದಾಳಿ ಮಾಡಿದೆಗೊತ್ತಾ?
Uttara kannada| ಕಾಡುಪ್ರಾಣಿ ಗಿಂತ ಬೀದಿನಾಯಿ ಕಾಟ ಜೋರು| ಬೀದಿ ನಾಯಿ ಎಷ್ಟು ಜನರ ಮೇಲೆ ದಾಳಿ ಮಾಡಿದೆಗೊತ್ತಾ?
ಕಾರವಾರ(27 October 2025) :-ಅತೀ ಹೆಚ್ಚು ಅರಣ್ಯ ಹೊಂದಿರುವ ಉತ್ತರ ಕನ್ನಡ (uttara Kannada) ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಉಪಟಳಕ್ಕಿಂತ ಬೀದಿ ನಾಯಿಗಳ ಉಪಟಳವೇ ಹೆಚ್ಚಾಗಿದೆ. ಈ ವರ್ಷ 7560ಕ್ಕೂ ಹೆಚ್ಚು ಬೀದಿನಾಯಿಗಳು ಕಡಿತವಾಗಿದ್ದು ಬೀದಿಯಲ್ಲಿ ಜನ ಓಡಾಡುವುದಕ್ಕೆ ಭಯ ಪಡುವಂತಾಗಿದೆ.
ನಿವೇನಾದರೂ ಕಾರವಾರ (karwar)ಸೇರಿದಂತೆ ಕೆಲವು ಭಾಗದಲ್ಲಿ ರಾತ್ರಿ ಓಡಾಡಿದರೇ ನಿಮ್ಮ ಜೀವಕ್ಕೆ ಗ್ಯಾರಂಟಿ ಇಲ್ಲ. ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ದಲ್ಲಿ ರಾತ್ರಿ ,ಹಗಲು ಎನ್ನದೇ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಬೆಳಗ್ಗೆ ,ರಾತ್ರಿ ವಾಕಿಂಗ್ ಹೋಗುವವರು ಕೈಯಲ್ಲಿ ಕಡ್ಡಾಯವಾಗಿ ದೊಣ್ಣೆ ಹಿಡಿದು ಸಂಚರಿಸಬೇಕು. ಹೌದು ಇದು ಕಾರವಾರಕ್ಕೆ ಮಾತ್ರ ಸೀಮಿತವಲ್ಲ. ಜಿಲ್ಲೆಯ ಪ್ರತಿ ತಾಲೂಕಿನಲ್ಲು ಸಹ ಇದೇ ಸ್ಥಿತಿ ಇದೆ.ನಾಯಿ ದಾಳಿ ಮಾಡಿದರೇ ಸೂಕ್ತ ಚಿಕಿತ್ಸೆ ಸಹ ಜಿಲ್ಲೆಯಲ್ಲಿ ಲಭ್ಯವಿಲ್ಲ.
wild animals|ನಗರಕ್ಕೆ ದಾಳಿ ಇಟ್ಟ ಕಾಡುಕೋಣ ಮಹಿಳೆ ಮೇಲೆ ದಾಳಿ | ವಿಡಿಯೋ ನೋಡಿ
ಇನ್ನು ಜಿಲ್ಲೆಯಲ್ಲಿ ಈವರ್ಷ 7560ಬೀದಿ ನಾಯಿಗಳು ಕಡಿದು ಆಸ್ಪತ್ರೆಗೆ ಜನ ದಾಖಲಾದರೇ ಕಳೆದ ವರ್ಷ 8658 ಜನ ಬೀದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಇನ್ನು ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಸಹ ಮಾಡಿಸದಿರುವುದು ಬೀದಿ ನಾಯಿಗಳ ಹೆಚ್ಚಳಕ್ಕೆ ಕಾರಣವಾಗಿದ್ದು ಜನ ಹಿಡಿ ಶಾಪ ಹಾಕುವಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ . ಇತ್ತೀಚೆಗೆ ಕೆಲವು ಸ್ಥಳೀಯ ಸಂಸ್ಥೆಗಳು ಶ್ವಾನಗಳ ಸಂತಾನ ಹರಣ ಚಿಕಿತ್ಸೆ ಮಾಡಿಸಿದ್ದರು.ಆದರೇ ಹಲವು ಕಡೆ ಬೀದಿ ನಾಯಿ ಹಿಡಿಯಲು ಯಾರೂ ಮುಂದೆಬರುವುದಿಲ್ಲ ,ಜೊತೆಗೆ ಸಂತಾನ ಹರಣ ಚಿಕಿತ್ಸೆ ನಡೆಸಲು ಪಶು ವೈದ್ಯರ ಕೊರತೆ ಇದೆ.ಹೀಗಾಗಿ ಬೀದಿ ನಾಯಿಗಳ ಸಂತಾನ ವೃದ್ಧಿ ಗಣನೀಯವಾಗಿದೆ. ಇನ್ನು ಕಾರವಾರದಂತ ನಗರದಲ್ಲೂ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು ,ಶ್ವಾನಗಳ ರಕ್ಷಣಾ ಕೇಂದ್ರಗಳಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ.
Wildlife news|ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಹುಲಿ ಸಂಚಾರ| ಜಿಲ್ಲೆಯಲ್ಲಿ ಎಷ್ಟಾಗಿದೆ ಹುಲಿಗಳ ಸಂಖ್ಯೆ ಗೊತ್ತಾ?
ಸದ್ಯ ಬೀದಿ ನಾಯಿಗಳ ಕಡಿತ ಪ್ರತಿ ವರ್ಷ ಕನಿಷ್ಟ ಎಂಟು ಸಾವಿರ ಮುಟ್ಟುತ್ತಿದೆ.ಆದ್ರೆ ಈ ಶ್ವಾನಗಳ ಸಂತಾನ ಹರಣ ಚಿಕಿತ್ಸೆ ಹಾಗೂ ಇವುಗಳಿಗೆ ಬೇಕಾದ ವ್ಯವಸ್ಥೆ ಮಾಡಲು ಮಾತ್ರ ಸ್ಥಳೀಯ ಆಡಳಿತ ಆಸಕ್ತಿ ತೋರದೇ ಮಕ್ಕಳು,ವೃದ್ಧರು ಎನ್ನದೇ ಬೀದಿ ನಾಯಿಗಳ ದಾಳಿಗೆ ಒಳಗಾಗುವಂತಾಗಿದ್ದು ,ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣವೇ ಹೋಗುವ ಸ್ಥಿತಿ ಇದೆ.
wild animal attack:ಕುಮಟಾ ಹೊನ್ನಾವರ ಭಾಗದಲ್ಲಿ ಚಿರತೆ ಕಾಟ :ಹಸು ಬಲಿಪಡೆದ ಚಿರತೆ
ಜಿಲ್ಲೆಯು ಕಾಡುಪ್ರಾಣಿಗಳಿಂದ ಕೂಡಿದೆ.ಆದರೇ ಕಾಡುಪ್ರಾಣಿಗಳು ಮನುಷ್ಯನ ಮೇಲೆ ದಾಳಿ ಮಾಡಿದ ಪ್ರಕರಣ ಅತ್ಯಲ್ಪ ,ಈ ವರ್ಷ 15 ಪ್ರಕರಣಕ್ಕಿಂತ ಏರಿಕೆ ಕಂಡಿಲ್ಲ. ಆದರೇ ಬೀದಿ ನಾಯಿಗಳ ಹೆಚ್ಚು ದಾಳಿ ವರದಿಯಾಗಿದೆ.
ಇನ್ನಾದರೂ ಆಡಳಿತ ಎಚ್ಚರ ವಹಿಸಿ ಈ ಕಿಲ್ಲರ್ ಬೀದಿ ನಾಯಿಗಳ ಹಾವಳಿ ತಪ್ಪಿಸಬೇಕಿದೆ.