For the best experience, open
https://m.kannadavani.news
on your mobile browser.
Advertisement

Karnataka |ಸಚಿವ ಗಾದಿ ಏರಲಿದ್ದಾರಾ  ಆರ್.ವಿ ದೇಶಪಾಂಡೆ?

Senior Congress leader and Halial MLA R.V. Deshpande is once again in the spotlight as Karnataka prepares for a cabinet reshuffle. Despite being a nine-time MLA, Deshpande missed a minister post earlier but is now seen as a strong contender amid growing dissatisfaction within the party.
01:29 PM Oct 11, 2025 IST | ಶುಭಸಾಗರ್
Senior Congress leader and Halial MLA R.V. Deshpande is once again in the spotlight as Karnataka prepares for a cabinet reshuffle. Despite being a nine-time MLA, Deshpande missed a minister post earlier but is now seen as a strong contender amid growing dissatisfaction within the party.
karnataka  ಸಚಿವ ಗಾದಿ ಏರಲಿದ್ದಾರಾ  ಆರ್ ವಿ ದೇಶಪಾಂಡೆ

Karnataka |ಸಚಿವ ಗಾದಿ ಏರಲಿದ್ದಾರಾ  ಆರ್.ವಿ ದೇಶಪಾಂಡೆ?

Advertisement

ಬೆಂಗಳೂರು (october 11):- ಕರ್ನಾಟಕ (karnataka)ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆ ಸುದ್ದಿ ಕೇಳಿದಾಗಲೆಲ್ಲ ಹಳಿಯಾಳ ಶಾಸಕ ಹಿರಿಯ ನಾಯಕ ಆರ್.ವಿ ದೇಶಪಾಂಡೆ ಹೆಸರು ಕೇಳಿಬರುತ್ತದೆ.

ಸದ್ಯ ಸಚಿವ ಸಂಪುಟ ಬದಲಾವಣೆಯಾಗುವ ಸಾಧ್ಯತೆಗಳಿದ್ದು ಇದೀಗ ಕಾಂಗ್ರೆಸ್ ಹಿರಿಯ ಶಾಸಕ ಆರ್ .ವಿ ದೇಶಪಾಂಡೆ ಅವಿರತ ಪ್ರಯತ್ನ ಮಾಡುತಿದ್ದಾರೆ ಎಂಬುದು ಕಾಂಗ್ರೆಸ್ ವಲಯದಲ್ಲಿ ಹಬ್ಬಿದ ಮಾತು.

ಹಳಿಯಾಳ ಕ್ಷೇತ್ರದಿಂದ ಒಂಬತ್ತು ಬಾರಿ ಪ್ರತಿನಿಧಿಸಿರುವ ಆರ್.ವಿ ದೇಶಪಾಂಡೆ ಈ ಭಾರಿ ಕಾಗ್ರೆಸ್ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದರೂ ಸಚಿವ ಸ್ಥಾನ ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ .

Haliyala news| ಪೊಲೀಸ್ ಠಾಣೆ ಎದುರಿಗಿರುವ ಗಣಪತಿ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು |ವಿಡಿಯೋ ನೋಡಿ

ಇವರ ಅತೃಪ್ತಿಯನ್ನು ಧಮನ ಮಾಡಲು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅವರು ಕೆಲವು ಪಕ್ಷದ ನಾಯಕರೊಂದಿಗಿ‌ನ ಭಿನ್ನಾಭಿಪ್ರಾಯ ಸಚಿವ ಸ್ಥಾನ ತಪ್ಪಲು ಕಾರಣವಾಯಿತು ಎನ್ನುವ ಮಾತಿದೆ. ಇನ್ನು ಎರಡನೇಬಾರಿ ಗೆದ್ದ ಭಟ್ಕಳದ ಮಂಕಾಳು ವೈದ್ಯರಿಗೆ ಸಚಿವ ಸ್ಥಾನ ಜೊತೆಗೆ ಜಿಲ್ಲಾ ಉಸ್ತುವಾರಿ ಸ್ಥಾನ ಕೂಡ ದೊರಕಿದೆ.

ಜಿಲ್ಲೆಯಲ್ಲಿ ಪಕ್ಷದ ನಾಲ್ವರು ಶಾಸಕರಿದ್ದಾರೆ.ನಿಗಮ ಮಂಡಳಿಯಲ್ಲಿ ಪಕ್ಷದ ಶಾಸಕರಿಗಾಗಲಿ, ಪಕ್ಷದ ಪ್ರಭಾವಿ ಹಿರಿಯ ನಾಯಕರಿಗಾಗಲಿ ಸ್ಥಾನ ಸಿಕ್ಕಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸಹ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿಲ್ಲ ಎಂಬ ಆರೋಪವಿದೆ.

ಇನ್ನು ಪಕ್ಷ ಸಂಘಟನೆ ಯಲ್ಲೂ ಹಿಂದೆ ಬಿದ್ದಿರುವ ಸಚಿವರು ಕೇವಲ ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ.

ಮಂಕಾಳು ವೈದ್ಯರ ವಿರುದ್ಧ ಪಕ್ಷದಲ್ಲೇ ಅಸಮಧಾನ!

ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ (mankalu vaidya) ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಪಕ್ಷದ ಹಿರಿಯ ನಾಯಕರ,ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಇದೆ.

ಇನ್ನು ಒಬ್ಬ ಸಚಿವನಾಗಿ ಜಿಲ್ಲಾ ಉಸ್ತುವಾರಿಯಾಗಿ ಆಡಳಿತ ಸೂಕ್ತವಾಗಿ ನಡೆಸುತಿಲ್ಲ ಎಂಬ ಆರೋಪ ಇದೆ. ಗುತ್ತಿಗೆ ಕಾಮಗಾರಿ ಸೇರಿದಂತೆ ಹಲವು ವಿಷಯದಲ್ಲಿ  ತಮ್ಮ ಪಕ್ಷದ ಶಾಸಕರೊಂದಿಗೇ ವೈದ್ಯರಿಗೆ ಮುನಿಸು ಮುಂದುವರೆದಿದೆ. ಇದಲ್ಲದೇ ಮಂಕಾಳು ವೈದ್ಯನನ್ನು ತಮ್ಮ ನಾಯಕ ಎಂದು ಕಾಂಗ್ರೆಸ್ ನಾಯಕರು ಒಪ್ಪುತಿಲ್ಲ. ಇನ್ನು ಪಕ್ಷ ಮತ್ತು ಜಿಲ್ಲೆಯ ಮೇಲೆ ಆರ್.ವಿ ದೇಶಪಾಂಡೆ ಹಿಡಿತವಿದೆ. ಡಿ.ಕೆ ಶಿವಕುಮಾರ್ ಆಪ್ತರಾಗಿರುವ ಹಾಗೂ ಮೀನುಗಾರರ ಜನಾಂಗದ ಏಕೈಕ ಶಾಸಕರಾಗಿರುವ ಮಂಕಾಳು ವೈದ್ಯರ ಸಚಿವ ಸ್ಥಾನ ಸದ್ಯ ಸೇಪ್ ಇದೆ. ಇವರನ್ನು ಬದಲಿಸುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಕೊನೆ ಪಕ್ಷ ಜಿಲ್ಲಾ ಉಸ್ತುವಾರಿ ಸ್ಥಾನವನ್ನು ಬದಲಿಸಬೇಕು ಎಂಬುದು ಕಾಂಗ್ರೆಸ್ ನಲ್ಲಿನ ಒಳ ಮಾತು.

Karnataka|ಸೆಲ್ಫಿ ತೆಗೆಯಲು ಹೋಗಿ ಸಮುದ್ರಪಾಲಾದ ಶಿವಮೊಗ್ಗದ ಪ್ರವಾಸಿಗ

ಹೀಗಾಗಿ ಸಮರ್ಥ ನಾಯಕನಾಗಿರುವ ಆರ್.ವಿ ದೇಶಪಾಂಡೆಗೆ ಸಚಿವ ಸ್ಥಾನ ನೀಡಿ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ನೀಡಬೇಕು ಎಂಬುದು ಜಿಲ್ಲಾ ಕಾಂಗ್ರೆಸ್ ನಾಯಕರ ಬೇಡಿಕೆ.

ಇನ್ನು ಸಚಿವ ಸ್ಥಾನ ಸುಗದಿದ್ದರೂ ಹೊರಗೆ ಅಸಮಧಾನ ತೋರ್ಪಡಿಸಿಕೊಳ್ಳದೇ ಸುಮ್ಮನಿರುವ ಆರ್.ವಿ.ಡಿ ಇದೀಗ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮ್ಮನ್ನು ಸಚಿವ ಸ್ಥಾನಕ್ಕೆ ಆಯ್ಕೆ ಮಾಡಿಕೊಳ್ಳುವ ಭರವಸೆ ಹೊಂದಿದ್ದಾರೆ. ಹಿರಿಯ ನಾಯಕರಾಗಿರುವ ಅವರು ಒಂದಲ್ಲಾ ಒಂದು ಸ್ಥಾನದಲ್ಲಿ ಸಚಿವರಾಗಿದ್ದವರು. ಇದೀಗ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನದ ಆಕಾಂಕ್ಷೆಯಲ್ಲಿ ಆರ್.ವಿ.ಡಿ ಇದ್ದು ಸಚಿವ ಸ್ಥಾನ ದೊರೆಯಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ