Karnataka|ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಗೆ ಸಿದ್ದತೆ| ಏಷ್ಟು ಭೂಮಿ ಹೋಗಲಿದೆ ಗೊತ್ತಾ?
Karnataka|ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಗೆ ಸಿದ್ದತೆ| ಏಷ್ಟು ಭೂಮಿ ಹೋಗಲಿದೆ ಗೊತ್ತಾ?
Sharavathi Pumped Storage Project:-ಉತ್ತರ ಕನ್ನಡ ,ಶಿವಮೊಗ್ಗ ಜಿಲ್ಲೆಯನ್ನು ಒಳಗೊಂಡಂತೆ ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಯನ್ನು ಕಾರ್ಯಗತ ಗೊಳಿಸಲು ಸರ್ಕಾರ ಮೊದಲ ಹಂತದ ಹೆಜ್ಜೆಯನ್ನು ಇಟ್ಟಿದೆ.
ಇದರ ಬೆನ್ನಲ್ಲೇ ಈ ಯೋಜನೆಗೆ ಸ್ಥಳೀಯ ಹಾಗೂ ಪರಿಸರವಾದಿಗಳ ತೀವ್ರ ವಿರೋಧ ವ್ಯಕ್ತವಾಗಿದೆ.
ಏನಿದು ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆ? ,ಇದರದ ಉಪಯೋಗ ,ಸಾಧಕ ,ಭಾದಕಗಳೇನು? ಸ್ಥಳೀಯ ಹಾಗೂ ಪರಿಸರವಾದಿಗಳ ವಿರೋಧ ಏಕೆ ಎಂಬ ಮಾಹಿತಿ ಇಲ್ಲಿದೆ.
ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆ ಆಳ -ಅಗಲ
ಯೋಜನಾ ವೆಚ್ಚ- ಹತ್ತುಸಾವಿರದ ಐನೂರು ಕೋಟಿ ಮೊತ್ತದ ಯೋಜನೆ.
ಯೋಜನನೆ ವಿವರ
ಯೋಜನೆಗೆ ಒಳಗೊಂಡ ಜಿಲ್ಲೆ- ಉತ್ತರ ಕನ್ನಡ,ಶಿವಮೊಗ್ಗ ಜಿಲ್ಲೆ ಯೋಜನೆಗೆ ಒಳಗೊಂಡ
ಪ್ರದೇಶಗಳು- ಅರಣ್ಯ ಭೂಮಿ- 19.982 ಹೆಕ್ಟೇರ್ (ಭೂಮಿಯ ಒಳಗೆ), 34.173 ಹೆಕ್ಟೇರ್ (ಭೂಮಿಯ ಮೇಲೈ) ಒಟ್ಟು ಅರಣ್ಯ ಭೂಮಿ- 54.155 ಹೆಕ್ಟೇರ್ .
ಯೋಜನೆಗೆ ಒಳಗೊಂಡ ಅರಣ್ಯೇತರ ಭೂಮಿ- 0.1 ಹೆಕ್ಟೇರ್ (ಭೂಮಿಯ ಒಳಗೆ) , 88.508 ಹೆಕ್ಟೇರ್ (ಭೂಮಿಯ ಹೊರಗೆ) .ಒಟ್ಟು- 88.608 ಹೆಕ್ಟೇರ್ ಭೂಮಿ.
ಒಟ್ಟು ಭೂಮಿ- 20.082 ಹೆಕ್ಟೇರ್ (ಭೂಮಿಯ ಒಳಗೆ) 122.681 (ಭೂಮಿಯ ಹೊರಗೆ).
ಒಟ್ಟು ಭೂಮಿ 142.763 ಹೆಕ್ಟೇರ್ .
ಶಿವಮೊಗ್ಗ ಜಿಲ್ಲೆ – ಸಾಗರ ತಾಲೂಕಿನ ತಳಕಳಲೆ ಗ್ರಾಮ – 3.63 ಹೆಕ್ಟೇರ್ – ಸರ್ಕಾರಿ ಶಾಲೆ-1, ಮನೆಗಳು-8,ದನದ ಕೊಟ್ಟಿಗೆ-7
ಉತ್ತರ ಕನ್ನಡ ಜಿಲ್ಲೆ- ಹೊನ್ನಾವರ ತಾಲೂಕಿನ ಗೇರುಸೊಪ್ಪ ,ನಗರಬಸ್ತಿಕೇರಿ,ಬೆಗುಡಿ ಗ್ರಾಮಗಳು.
ಗೇರುಸೊಪ್ಪ ,ನಗರಬಸ್ತಿಕೇರಿ- 0.404 ಹೆಕ್ಟೇರ್ ಭೂ ಭಾಗ- ಮನೆಗಳು-4, ಮಳಿಗೆ-3,ದೇವಾಲಯ ತಡೆಗೋಡೆ-2. ಬೆಗುಡಿಗ್ರಾಮ- 20.497 ಹೆಕ್ಟೇರ್ – ಸರ್ಕಾರಿ ಅಂಗನವಾಡಿ-01, ಮನೆಗಳು-06,ದನದ ಕೊಟ್ಟಿಗೆ-04,ಬಾವಿ-01, ದೇವಾಲಯ-01.
ಒಟ್ಟು ಎರಡು ಜಿಲ್ಲೆಗಳು ಸೇರಿ -24.31 ಹೆಕ್ಟೇರ್ ಭೂ ಭಾಗ.
ಶಿವಮೊಗ್ಗ ಜಿಲ್ಲೆಯ ಸಾಗರ ವಿಭಾಗ- 745 ಮರಗಳು ಶಿವಮೊಗ್ಗ ವನ್ಯಜೀವಿ ವಲಯ – 1518 ಮರಗಳು. ಉತ್ತರ ಕನ್ನಡ ಹೊನ್ನಾವರ ವಿಭಾಗ- 13756.
ಒಟ್ಟು ಮರಗಳ ಕಟಾವು- 16,041 ಮರಗಳು.

ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಯ ಪ್ರಸ್ತುತ ಸ್ಥಿತಿ.

ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಯನ್ನು ಕಾರ್ಯಗತ ಗೊಳಿಸಲು ಡಿಸೆಂಬರ್ 2023ರಲ್ಲಿ ನೀಡಲಾದ ಹೊಸ TOR ಪ್ರಕಾರ EIA ಅಧ್ಯಯನಗಳು ಪೂರ್ಣ ಗೊಂಡಿವೆ, ಇದರ ವರದಿ ಅಂ ತಿಮ ಗೊಳಿಸಲಾಗಿದೆ.
ಶಿವಮೊಗ್ಗ ದಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು 16.09.2025 ರಂದು ಕರೆಯಲಾಗಿದ್ದು ,ಉತ್ತರ ಕನ್ನಡ ಜಿಲ್ಲೆಯಲ್ಲಿ 18.09.2025 ರಂದು ಕರೆಯಲಾಗಿದೆ.
Honnavar:ಹೊನ್ನಾವರದ ಆ ಹಳ್ಳಿಯಲ್ಲಿ ಮೇಯಲು ಹೋಗುವ ಗೋವುಗಳೇ ಮಾಯ !
ಪರಿಸರ ಅನುಮತಿ ಯನ್ನು (EC) MoEF & CC ಯಿಂದ ಪಡೆಯ ಬೇಕಾಗಿದ್ದು ಪೆಂಡಿಂಗ್ ಇದೆ.
ಅರಣ್ಯ ಇಲಾಖೆಯಿಂದ 30.07.2025 ರಂದು ನಡೆದ ಅರಣ್ಯ ಮೌಲ್ಯಮಾಪನ ಸಮಿತಿಯ ಸಭೆಯಲ್ಲಿ ಪ್ರಥಮ ಹಂತದ (Stage-1) FC ಅನುಮತಿಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟಿ ಕರಣಗಳನ್ನು ನೀಡುವಂತೆ ಸೂಚಿಸಲಾಗಿದೆ.
Karnataka: ಶಕ್ತಿ ಸೌಧದ ವಿದ್ಯುತ್ ಬಿಲ್ ಬಾಕಿ| ಪವರ್ ಕಟ್ ಮಾಡುವ ಎಚ್ಚರಿಕೆ ನೀಡಿದ ಹೆಸ್ಕಾಂ!
26.06.2025 ರಂದು ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (NBWL) ಸ್ಥಾಯಿ ಸಮಿತಿಯ ಸಭೆಯಲ್ಲಿ ಈ ಯೋಜನೆಗೆ ತಾತ್ಕಾಲಿಕ (In-principle) ಅನುಮತಿ ನೀಡಲಾಗಿದೆ.
ಯೋಜನೆಯನ್ನು ಶರಾವತಿ ಕಣಿವೆ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದು , ಯೋಜನೆಯ ಕೆಳಮಟ್ಟದಲ್ಲಿ ಗೇರುಸೊಪ್ಪ ಹಾಗೂ ಮೇಲ್ಪಟ್ಟದಲ್ಲಿ ತಳಕಳಲೆ ಜಲಾಶಯಗಳು ಅಸ್ತಿತ್ವದಲ್ಲಿ ಇದ್ದು , ಎರಡೂ ಜಲಾಶಯವನ್ನು ಏಳು ಕಿಲೋಮೀಟರ್ ಸುರಂಗ ಮಾರ್ಗದ ಮೂಲಕ ಜೋಡಿಸಿ ನೀರು ಹರಿಬಿಟ್ಟು ವಿದ್ಯುತ್ ಉತ್ಪಾದನೆಗೆ ಕಾರ್ಯನಿರ್ವಹಿಸಲಾಗುವುದು.
ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಗೆ ವಿರೋಧ ಏಕೆ ?

ಈ ಯೋಜನೆ ಪಶ್ಚಿಮ ಘಟ್ಟ ವಲಯದಲ್ಲಿ ಬರುತ್ತದೆ. ಹೆಚ್ಚುವರಿಯಾಗಿ ಅರಣ್ಯ ಭೂಮಿ ಯನ್ನು ಪಡೆಯಲಾಗುತ್ತದೆ. ಪರಿಸರ ಸೂಕ್ಷ್ಮವಲಯವಾಗಿರುವ ಈ ಪ್ರದೇಶ ಅತ್ಯಂತ ಹಳೆಯದಾದ ಮತ್ತು ಇತರೆ ಭಾಗದಲ್ಲಿ ಸಿಗದಂತಹ ಪ್ರಭೇದದ ಸಸ್ಯಗಳು ಇಲ್ಲಿವೆ. ಇದಲ್ಲದೇ ಇದು ಅವನತಿಯಲ್ಲಿ ಇರುವ ಸಿಂಗಳೀಕಗಳ ಆವಾಸ ಸ್ಥಾನ ಕೂಡ. ಇನ್ನು ಈ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯದಿಂದ ಭೂಕುಸಿತ ದುರಂತಗಳು ನಡೆದಿದೆ. ಇದಲ್ಲದೇ ಅಭಿವೃದ್ಧಿ ಕಾರ್ಯದಿಂದ ನದಿಯ ದಿಕ್ಕು ಸಹ ಬದಲಾಗಿದೆ. ಹಲವು ಜೀವ ವೈವಿದ್ಯ ಹೊಂದಿರುವ ಈ ಪ್ರದೇಶದಲ್ಲಿ ಅಭಿವೃದ್ಧಿಗೆ ಮುಂದಾದರೇ ಜೀವ ಸಂಕುಲಕ್ಕೆ ಆಪತ್ತು ಎದುರಾಗಲಿದೆ.
Karnataka|ಈ IAS ಅಧಿಕಾರಿಗಳ ಸರ್ಕಾರಿ ಹಣದಲ್ಲಿ ಸ್ವಂತ ಖರ್ಚು ! ಪ್ರಶ್ನೆ ಮಾಡುವವರು ಯಾರು?
ಈಗಾಗಲೇ ಶರಾವತಿ ಜಲವಿದ್ಯುತ್ ಯೋಜನೆಯಿಂದ ಸಾವಿರಾರು ಜನ ತಮ್ಮ ನೆಲ ಕಳೆದುಕೊಂಡು ಸೂಕ್ತ ಪರಿಹಾರ ಸಹ ದೊರಕುವುದಿರಲಿ ,ಉದ್ಯೋಗದ ಭರವಸೆಯೂ ಸಮರ್ಪಕವಾಗಿ ಈಡೇರಿಲ್ಲ.
ಇನ್ನು ಸುರಂಗ ಮಾರ್ಗ ಮಾಡುವುದರದ ಭೂಕುಸಿತದ ಆತಂಕವಿದ್ದು ಪರಿಸರಕ್ಕೆ ದೊಡ್ಡ ಹಾನಿಯಾಗುವ ಸಾಧ್ಯತೆಗಳು ಇವೆ. ಹೀಗೆ ಹತ್ತು ಹಲವು ಕಾರಣಗಳು ಈ ಯೋಜನೆ ಗೆ ಪರಿಸರವಾದಿಗಳು ಹಾಗೂ ಸ್ಥಳೀಯ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಯೋಜನೆ ಭಾಗದ ಗ್ರಾಮಪಂಚಾಯ್ತಿಗಳು ಸಹ ಠರಾವು ಮಾಡಿ ವಿರೋಧಿಸಿವೆ.
ಸಧ್ಯಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಯನ್ನು ಅನುಷ್ಟಾನ ಮಾಡಲಾಗಿದ್ದು ,ಈ ಯೋಜನೆಗೆ ಮೊದಲ ಹೆಜ್ಜೆಯಾಗಿ ಹಣ ಸಹ ಬಿಡುಗಡೆಯಾಗಿದ್ದು , ಸಾರ್ವಜನಿಕ ಅಹವಾಲು ಸ್ವೀಕಾರದ ನಂತರ ಅನುಷ್ಟಾನಗೊಳ್ಳುವ ಸಾಧ್ಯತೆಗಳಿವೆ.

