For the best experience, open
https://m.kannadavani.news
on your mobile browser.
Advertisement

Karnataka ದೇಶದ ಏಳನೇ ಅತೀ ದೊಡ್ಡ ಸಿಗಂದೂರು ಸೇತುವೆ ಕಾಮಗಾರಿ ಪೂರ್ಣ ಹಂತಕ್ಕೆ 

Karnataka: The decades-old dream of the villagers in the Sharavathi backwater region of Sagar taluk, Shivamogga district, is about to come true. The construction of the Sigandur Bridge has reached its final stage. The last phase of the work and the spectacular view of the suspension bridge have been captured by a drone camera. Here is some information about the suspension bridge that has caught the attention of the state.
08:19 PM Mar 23, 2025 IST | ಶುಭಸಾಗರ್

Karnataka ದೇಶದ ಏಳನೇ ಅತೀ ದೊಡ್ಡ ಸಿಗಂದೂರು ಸೇತುವೆ ಕಾಮಗಾರಿ ಪೂರ್ಣ ಹಂತಕ್ಕೆ.

Advertisement

kannadavani news banner
ಫೋಟೋ ಮೇಲೆ ಕ್ಲಿಕ್ ಮಾಡಿ ನಮ್ಮ WhatsApp ಗ್ರೂಪ್ ಗೆ join ಆಗಿ.

Karnataka :- ಶಿವಮೊಗ್ಗ ಜಿಲ್ಲೆಯ ಸಾಗರ (sagar) ತಾಲೂಕಿನ ಶರಾವತಿ ಹಿನ್ನೀರು (sharavathi backwater) ಭಾಗದ ಹಳ್ಳಿಗರ ದಶಕಗಳ ಕನಸು ನನಸಾಗುವ ಕಾಲ ಸನ್ನಿತವಾಗುತ್ತಿದೆ. ಸಿಗಂಧೂರು ಸೇತುವೆ ಕಾಮಗಾರಿ ಪೂರ್ಣಹಂತಕ್ಕೆ ತಲುಪಿದೆ. ಅಂತಿಮ ಹಂತದ ಕಾಮಗಾರಿ ಮತ್ತು ತೂಗು ಸೇತುವೆಯ ವಿಹಂಗಮ ನೋಟ ಡ್ರೋನ್ ಕ್ಯಾಮರ್​​ದಲ್ಲಿ ಸೆರೆಯಾಗಿದೆ. ರಾಜ್ಯದ ಗಮನ ಸೆಳೆದಿರುವ ತೂಗು ಸೇತುವೆ ಕುರಿತು ಒಂದುಷ್ಟು ಮಾಹಿತಿ ಇಲ್ಲಿದೆ.

ಸಿಗಂದೂರು ಸೇತುವೆ ವಿಡಿಯೋ ನೋಡಿ:- 

ಜೋಗ ಜಲಪಾತದ ವಿಹಂಗಮ ದೃಶ್ಯವನ್ನು ಸೃಷ್ಟಿಸಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿ ಇದೀಗ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುತ್ತಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.

 ಶರಾವತಿಯ ಹಿನ್ನೀರಿನ ಪ್ರದೇಶದಲ್ಲಿರುವ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇಗುಲ, ಹಿನ್ನೀರಿನ ಲಾಂಚ್ ಮೂಲಕವೇ ದೇವಿ ದರ್ಶನಕ್ಕೆ ಭಕ್ತರು ಬರುತ್ತಾರೆ. ಇನ್ನೂ ಈ ಭಾಗದ ಜನರಿಗೆ ಲಾಂಚೇ ಗತಿ. ಇನ್ನೂ ರಾತ್ರಿ ಸಮಯದಲ್ಲಿ ಲಾಂಚ್ ಸೇವೆ ಇರುವುದಿಲ್ಲ. ಇದು ಹತ್ತಾರು ಹಿನ್ನೀರಿನ ಹಳ್ಳಿಗರಿಗೆ ದೊಡ್ಡ ಸಮಸ್ಯೆ ಆಗಿತ್ತು. ದಶಕಗಳಿಂದ ಶರಾವತಿ ಹಿನ್ನೀರಿನ ಜನರಿಗೆ ಸೇತುವೆ ಅಗತ್ಯವಿತ್ತು. ಕೊನೆಗೂ ಅವರ ಕನಸು ನನಸು ಆಗಿದೆ. ಹಿನ್ನೀರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಈಗ ಅಂತಿಮ ಹಂತ ತಲುಪಿದೆ. ಈ ಸೇತುವೆ ಸಿದ್ದಗೊಂಡಿರುವ ಡ್ರೋನ್ ವಿಡಿಯೋಗಳು ಎಲ್ಲರ ಗಮನ ಸೆಳೆಯುತ್ತಿದೆ.

ಸೇತುವೆಯಮೇಲೆ ಡಾಂಬರೀಕರಣ ಮಾಡುತ್ತಿರುವುದು.

ಶರಾವತಿ ಹಿನ್ನೀರಿನ ಜನರ ಹೋರಾಟದ ಫಲವಾಗಿ ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರ ಅವರು ನಿರಂತರವಾಗಿ ಈ ಕಾಮಗಾರಿಯ ಹಿಂದೆ ಬಿದ್ದು ಅದನ್ನು ಪೂರ್ಣಗೊಳಿಸುವ ಕೆಲಸಕ್ಕೆ ತಮ್ಮ ಶ್ರಮಹಾಕಿದ್ದಾರೆ.

ಇದನ್ನೂ ಓದಿ:-Sigandur ಸೇತುವೆ ಬಹುತೇಕ ಪೂರ್ಣ ಯಾವಾಗ ಉದ್ಘಾಟನೆ ಗೊತ್ತಾ?

ಹೊಸದಾಗಿ ನಿರ್ಮಾಣವಾದ ಸೇತುವೆ ಮೇಲೆ ಈಗ ಟಾರ್ ಕೂಡಾ ಹಾಕಲಾಗುತ್ತಿದೆ. ಪ್ರವಾಸಿಗರಿಗೆ ಮತ್ತು ಶರಾವತಿ ಹಿನ್ನೀರಿನ ಜನರಿಗೆ ಈ ಸೇತುವೆ ಒಂದು ದೊಡ್ಡ ವರದಾನವಾಗಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪರ ಇಚ್ಛಾಶಕ್ತಿ ಪ್ರಯತ್ನದ ಫಲವಾಗಿ 2019ರಲ್ಲಿ ಬೃಹತ್‌ ಸೇತುವೆ ಕಾಮಗಾರಿ ಪ್ರಾರಂಭವಾಗಿತ್ತು.

ಅಂದಿನ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು 464.23 ಕೋಟಿ ರೂ. ವೆಚ್ಚದ ಕಾಮಗಾರಿಯ ಉದ್ಘಾಟನೆ ನೆರವೇರಿಸಿದ್ದರು.

ಸಿಗಂದೂರು ಸೇತುವೆಯ ದ್ರೋಣ್ ದೃಶ್ಯ

ಈ ಸೇತುವೆಯ ಸುಮಾರು 2.14ಕಿ.ಮೀ. ಉದ್ದ ಹಾಗೂ 16 ಮೀಟರ್ ಅಗಲದ, 423.15 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಯು 2020ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿತ್ತು.

ಕೊರೊನಾ ಹಾಗೂ ಹೆಚ್ಚಿನ ಪ್ರಮಾಣದ ಹಿನ್ನೀರಿನ ಕಾರಣ ಆರಂಭದ ಎರಡು ವರ್ಷ ನಿಧಾನವಾಗಿ ಸಾಗಿದ ಕಾಮಗಾರಿ ಕೆಲಸ ನಂತರ ವೇಗ ಪಡೆಯಿತು. ಪ್ರಸ್ತುತ ಆಳವಾದ ಹಿನ್ನೀರಿನಲ್ಲಿ 17 ಪಿಲ್ಲರ್​​ಗಳನ್ನು ನಿರ್ಮಿಸಲಾಗಿದ್ದು, ಪಿಲ್ಲರ್​ಗಳ ನಡುವೆ ಪ್ರೀಕಾಸ್ಟ್ ಕಾಂಕ್ರೀಟ್ ಬ್ಲಾಕ್​ಗಳನ್ನು ಜೋಡಿಸಲಾಗಿದೆ. ಅಂತಿಮ ಹಂತದ ಕೆಲಸವು ಭರದಿಂದ ನಡೆಯುತ್ತಿದೆ.

ಇದನ್ನೂ ಓದಿ:-Shivamogga ಸಿಗಂದೂರಿನಲ್ಲಿ ಸೇತುವೆಯಾದ್ರೂ ಲಾಂಚ್ ಸ್ಥಗಿತವಿಲ್ಲ -ಜಲಸಾರಿಗೆ ಮಂಡಳಿ ಕಾರ್ಯನಿರ್ವಹಣಾಧಿಕಾರಿ.

ಇನ್ನು ಕೆಲವೇ ದಿನಗಳಲ್ಲಿ ಹಿನ್ನೀರಿನಲ್ಲಿ ಸಿದ್ದಗೊಂಡಿರುವ ಸೇತುವೆ ಮೇಲೆ ಓಡಾಡುವ ಭಾಗ್ಯ ಇಲ್ಲಿನ ಜನರಿಗೆ ಲಭಿಸಲಿದೆ. ಅಸಾಧ್ಯ ಎನ್ನುವ ಯೋಜನೆಯನ್ನು ಸಂಸದ ಬಿ. ವೈ ರಾಘವೇಂದ್ರ ಸಾಧ್ಯಗೊಳಸಿದ್ದಾರೆ. ಕೇಂದ್ರ ಸರಕಾರದ ಮೇಲೆ ನಿರಂತರ ಒತ್ತಡಹಾಕಿ ಈ ಕಾಮಗಾರಿಯನ್ನು ಪೂರ್ಣಗೊಳಿಸುತ್ತಿದ್ದಾರೆ.

ಈ ಸೇತುವೆಯು ರಾಜ್ಯದ ಕೊಲ್ಲೂರು ಮತ್ತು ಸಿಗಂಧೂರು ದೇವಸ್ಥಾನಗಳನ್ನು ಸಂಪರ್ಕಿಸುವ 2.13 ಕಿ.ಮೀ ಉದ್ದದ ಸಿಗಂಧೂರು ಕೇಬಲ್ ಸೇತುವೆ ಶೀಘ್ರದಲ್ಲೇ ಮುಕ್ತಾಯವಾಗಿ ಜನರ ಬಳಕೆಗೆ ದೊರೆಯಲಿದೆ.

ಸಿಗಂಧೂರು ಸೇತುವೆಯು ಭಾರತದ ಕೇಬಲ್ ಆಧಾರಿತ ಸೇತುವೆಗಳಲ್ಲಿ 7ನೇ ಅತಿದೊಡ್ಡ ಸೇತುವೆ ಎಂಬ ಖ್ಯಾತಿ ಪಡೆಯಲಿದೆ. ಇದೀಗ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.

ಸೇತುವೆ ಭಾಗದಲ್ಲಿ ಕೆಲವೇ ಗರ್ಡರ್ ಬಾಕ್ಸ್‌ಗಳನ್ನು ಅಳವಡಿಕೆ ಮಾಡುವುದು ಮಾತ್ರ ಬಾಕಿಯಿದ್ದು, ಒಂದೆರಡು ತಿಂಗಳಲ್ಲಿ ಈ ಕಾಮಗಾರಿ ಸಹ ಮುಕ್ತಾಯಗೊಳ್ಳಲಿದೆ.

ಇದಾದ ನಂತರ ಉಳಿಕೆ ಕೆಲಸಗಳನ್ನು ಮುಗಿಸಿಕೊಂಡು, ಸುರಕ್ಷತಾ ತಪಾಸಣೆ ಮಾಡಿದ ನಂತರ ಈ ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಇದರಿಂದ ಮಲೆನಾಡಿನ ಜನರ ಬಹುಬೇಡಿಕೆಯ ಸಿಗಂಧೂರು ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ಸಿಗಂದೂರು ಸೇತುವೆ ನಿರ್ಮಾಣದಿಂದಾಗಿ ಶರಾವತಿ ಹಿನ್ನೀರು ಭಾಗದ ಜನರ ಕನಸು ಒಂದೆಡೆ ನನಸಾದ್ರೆ ಮತ್ತೊಂದೆಡೆ ಮಲೆನಾಡಿನ ಪ್ರವಾಸೋದ್ಯಮಕ್ಕೆ ದೊಡ್ಡ ಶಕ್ತಿಯಾಗಲಿದೆ. ಈ ಸೇತುವೆ ಮೇಲೆ ಓಡಾಡುವುದಕ್ಕೆ ಜನರು ಕಾತುರದಿಂದ ಕಾಯುತ್ತಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ