JOG FALLS | ಮೂರು ತಿಂಗಳು ಪ್ರವಾಸಿಗರಿಗೆ ನಿರ್ಬಂಧ ಕಾರಣ ಇಲ್ಲಿದೆ.
Shivamogga/uttara kannda news 16 December 2024 :- ವಿಶ್ವ ಪ್ರಸಿದ್ಧ ಜೋಗ ಜಲಪಾತ (jog falls) ಗೆ ಪ್ರವಾಸಿಗರಿಗೆ ನಿಷೇಧ ಹೇರಿ ಶಿವಮೊಗ್ಗ (shivamogga) ಜಿಲ್ಲಾಡಳಿತ ಆದೇಶ ಮಾಡಿದೆ.
ಹೀಗಾಗಿ ನೀವೇಮಾದರೂ ಜೋಗ ಜಲಪಾತಕ್ಕೆ ಪ್ರವಾಸದ ಪ್ಲಾನ್ ಮಾಡಿದ್ರೆ ಅದನ್ನ ಕ್ಯಾನ್ಸಲ್ ಮಾಡಿ.
ಸದ್ಯ ಜೋಗ ಜಲಪಾತ ವೀಕ್ಷಣೆಗೆ ನಿಮಗೆ ಅವಕಾಶ ಸಿಗುವುದಿಲ್ಲ. ಅರೇ ಇದೇನು ವಿಶ್ವ ಪ್ರಸಿದ್ಧ ಜೋಗ ಜಲಪಾತಕ್ಕೆ ಹೀಗೆ ದಿಡೀರ್ ಅಂತ ನಿರ್ಬಂಧ ಯಾಕೆ ಅಂತ ನೀವು ಕೇಳಬಹುದು.
ಇದನ್ನೂ ಓದಿ:-Shivamogga ತೀರ್ಥಹಳ್ಳಿಯ ಅಳಿಯ ಎಸ್.ಎಂ ಕೃಷ್ಣ ಇವರ ಮದುವೆ ಹೇಗಾಯ್ತು ಗೊತ್ತಾ?
ಹೌದು ಶಿವಮೊಗ್ಗ ಜಿಲ್ಲೆಯ ಸಾಗರ (sagar) ತಾಲೂಕಿನಲ್ಲಿ ಬರುವ ವಿಶ್ವ ಪ್ರಸಿದ್ಧ ಜೋಗ ಜಲಪಾತದ ಸ್ಥಳದಲ್ಲಿ ಮುಖ್ಯದ್ವಾರ ಕಾಮಗಾರಿ ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಈ ಕಾಮಗಾರಿ ಶೀಘ್ರ ಮುಗಿಸಬೇಕಿದ್ದ ಕಾರಣ ಶಿವಮೊಗ್ಗ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಯಾವಾಗ ನಿರ್ಬಂಧ.
ಜನವರಿ 1 ರಿಂದ ಮಾರ್ಚ 15 ರ ವರೆಗೆ ಒಟ್ಟು ಮೂರು ತಿಂಗಳು ನಿರ್ಬಂಧ ವಿಧಿಸಲಾಗಿದೆ.
ಜೋಗ ಜಲಪಾತದ ಮುಂಗಾರಿನ ವಿಡಿಯೋ ನೋಡಿ:-
ಪ್ರವಾಸಿಗರು ( tourist) ಏನು ಮಾಡಬಹುದು ?
ಸದ್ಯ ಜನವರಿ ಒಂದರ ವರೆಗೆ ನಿರ್ಬಂಧದ ಇರುವುದಿಲ್ಲ. ಆದರೇ ಕಾಮಗಾರಿ ನಡೆಯಿತ್ತಿರುವ ಕಾರಣ ನೀವು ಈಗಲೇ ಹೋದರೇ ಜಲಪಾತ ವೀಕ್ಷಣೆ ಮಾಡಬಹುದು. ಆದರೇ ಕಾಮಗಾರಿ ನಡೆಯುತ್ತಿದ್ದು ನೀವು ನಿರೀಕ್ಷಿಸಿದ ಸೌಂದರ್ಯ ಸಿಗುಬುದಿಲ್ಲ. ಆದರೇ ಸಿದ್ದಾಪುರ ಭಾಗದಿಂದ ಜೋಗ ಜಲಪಾತ ವೀಕ್ಷಿಸಬಹುದು.
ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ 08182 -251444 ನ್ನು ಸಂಪರ್ಕಿಸಬಹುದು.