Karnataka: ದೆವ್ವ ಬಿಡಿಸುವುದಾಗಿ ಕೋಲಲ್ಲಿ ಹೊಡೆದು ಚಿತ್ರಹಿಂಸೆ-ನೀರಿಗಾಗಿ ಅಂಗಲಾಚಿ ಮೃತಪಟ್ಟ ಮಹಿಳೆ
Karnataka: ದೆವ್ವ ಬಿಡಿಸುವುದಾಗಿ ಕೋಲಲ್ಲಿ ಹೊಡೆದು ಚಿತ್ರಹಿಂಸೆ-ನೀರಿಗಾಗಿ ಅಂಗಲಾಚಿ ಮೃತಪಟ್ಟ ಮಹಿಳೆ
Shivamogga/ಹೊಳೆಹೊನ್ನೂರು: ಮೂಡನಂಬಿಕೆಗೆ ಓರ್ವ ಮಹಿಳೆ ಒದ್ದಾಡಿ ಪ್ರಾಣಬಿಟ್ಟ ಘಟನೆ ಶಿವಮೊಗ್ಗ (Shivamogga ) ದಲ್ಲಿ ನಡೆದಿದೆ.
ಮೈಗಂಟಿರುವ ದೆವ್ವ ಬಿಡಿಸುವುದಾಗಿ (Exorcism) ಹಿಂಸೆ ನೀಡಿದ್ದರಿಂದ ಮಹಿಳೆಯೊಬ್ಬರು ನರಳಾಡಿ ಉಸಿರು ಚೆಲ್ಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಜಂಬರಘಟ್ಟ ಗ್ರಾಮದಲ್ಲಿ ಈ ಹೇಯ ಘಟನೆ ನಡೆದಿದೆ.
ಗೀತಮ್ಮ (55) ಮೃತ ದುರ್ದೈವಿ. ಅದೇ ಗ್ರಾಮದ ಆಶಾ (45) ಎಂಬಾಕೆ ದೆವ್ವ ಬಿಡಿಸುವುದಾಗಿ ಹೇಳಿ ಕೋಲಿನಿಂದ ಹೊಡೆದಿದ್ದಾಳೆ. ರಾತ್ರಿಯಿಡೀ ಕೋಲಿನಿಂದ ಹೊಡೆದಿದ್ದು, ಹೊಡೆತ ತಿಂದ ಗೀತಮ್ಮ ನೀರು ಕೇಳಿದರೂ ಕೊಡದೇ ಚಿತ್ರಹಿಂಸೆ ನೀಡಿದ್ದಾರೆ.
ಜಂಬರಘಟ್ಟದ ಗೀತಮ್ಮ ಕೆಲವು ದಿನದಿಂದ ಅನಾರೋಗ್ಯಕ್ಕೀಡಾಗಿದ್ದರು. ದೆವ್ವ ಮೆಟ್ಟಿಕೊಂಡಿರುವ ಶಂಕೆ ಮೇಲೆ ಅದೇ ಗ್ರಾಮದ ಆಶಾ ಎಂಬಾಕೆಯನ್ನು ಕರೆಯಿಸಲಾಗಿತ್ತು. ಆಶಾಳ ಮೈಮೇಲೆ ದೇವರು ಬರುವ ಹಿನ್ನೆಲೆ ಆಕೆಯ ಬಳಿ ಗೀತಮ್ಮಳನ್ನು ತೋರಿಸಲಾಗಿತ್ತು.
ಇದನ್ನೂ ಓದಿ:-Karnataka :ರಷ್ಯ -ಉಕ್ರೇನ್ ಯುದ್ಧದಲ್ಲಿ ಮಡಿದ ವಿದೇಶಿ ಯೋಧನಿಗೆ ಗೋಕರ್ಣದಲ್ಲಿ ವಿಡಿಯೋ ಕಾಲ್ ಮೂಲಕ ಅಪರ ಕಾರ್ಯ ! ಏನಿದು ವಿಶೇಷ
ಕೋಲಿನಿಂದ ನಿರಂತರ ಹೊಡೆತ ತಿಂದ ಗೀತಮ್ಮ ಕೊನೆಯುಸಿರೆಳೆದಿದ್ದಾರೆ. ನಡುರಾತ್ರಿಯವರೆಗೆ ಗೀತಮ್ಮಳಿಗೆ ಹಿಂಸೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.