For the best experience, open
https://m.kannadavani.news
on your mobile browser.
Advertisement

Karnataka : ವಿದ್ಯುತ್ ದರ ಏರಿಗೆ ಮಾಡಿದ ರಾಜ್ಯ ಸರ್ಕಾರ! 

ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಸೈಡ್ ಎಫೆಕ್ಟ್ ದರ ಏರಿಕೆ ಬಿಸಿ ಜನರನ್ನು ತಟ್ಟುತಿದ್ದು ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 4 ರೂಪಾಯಿ ಹೆಚ್ಚಳ ಮಾಡಿದ ಬೆನ್ನಲ್ಲೇ ವಿದ್ಯುತ್ ದರ ಏರಿಕೆಯ ಶಾಕ್ ಅನ್ನು ನೀಡಲಾಗಿದೆ.
10:30 PM Mar 27, 2025 IST | ಶುಭಸಾಗರ್
karnataka   ವಿದ್ಯುತ್ ದರ ಏರಿಗೆ ಮಾಡಿದ ರಾಜ್ಯ ಸರ್ಕಾರ  
ಪ್ರಕೃತಿ ಮೆಡಿಕಲ್ ,ಕಾರವಾರ.

Karnataka : ವಿದ್ಯುತ್ ದರ ಏರಿಗೆ ಮಾಡಿದ ರಾಜ್ಯ ಸರ್ಕಾರ!

ಬೆಂಗಳೂರು: ರಾಜ್ಯದಲ್ಲಿ  ಗ್ಯಾರಂಟಿ ಯೋಜನೆ ಸೈಡ್ ಎಫೆಕ್ಟ್ ದರ ಏರಿಕೆ ಬಿಸಿ ಜನರನ್ನು ತಟ್ಟುತಿದ್ದು ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 4 ರೂಪಾಯಿ ಹೆಚ್ಚಳ ಮಾಡಿದ ಬೆನ್ನಲ್ಲೇ ವಿದ್ಯುತ್ ದರ ಏರಿಕೆಯ ಶಾಕ್ ಅನ್ನು ನೀಡಲಾಗಿದೆ.

Advertisement

ಈ ಸಂಬಂಧ ಇಂದು ಕೆಇಆರ್ ಸಿ ಮಾಹಿತಿ ನೀಡಿದ್ದು, ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ರಾಜ್ಯಾಧ್ಯಂತ ವಿದ್ಯುತ್‌ ದರವನ್ನು ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ.

ರಾಜ್ಯದಲ್ಲಿರುವ ಎಲ್ಲ ಎಸ್ಕಾಂಗಳಿಗೆ ಅನ್ವಯವಾಗುವಂತೆ 2025-26ನೆ ಸಾಲಿನಲ್ಲಿ 5,256 ಕೋಟಿ ರೂ., 2026-27ರಲ್ಲಿ 6,465 ಕೋಟಿ ರೂ. ಹಾಗೂ 2027-28ರಲ್ಲಿ 8,313 ಕೋಟಿ ರೂ.ಗಳಷ್ಟು ಕಂದಾಯ ಕೊರತೆ ಉಂಟಾಗಿದೆ. ಹೀಗಾಗಿ ಈ ನಷ್ಟವನ್ನು ಭರಿಸಲು, ವಿದ್ಯುತ್ ಪ್ರಸರಣ, ಸಿಬ್ಬಂದಿಗಳ ಪಿಂಚಣಿ ಹಾಗೂ ಗ್ರಾಚ್ಯುಟಿ ಪಾವತಿಸಲು ವಿದ್ಯತ್ ದರ ಏರಿಕೆ ಮಾಡಲಾಗುತ್ತಿದೆ ಎಂದು K.E.R.C ಹೇಳಿದೆ.

ಈಗಾಗಲೇ ವಸೂಲಿ ಮಾಡುತ್ತಿರುವ ಸುಂಕವನ್ನು ತರ್ಕಬದ್ದಗೊಳಿಸಲಾಗಿದೆ. ನಿಗಧಿತ ಶುಲ್ಕಗಳು ಮತ್ತು ವಿದ್ಯುತ್ ಶುಲ್ಕಗಳಲ್ಲಿನ ಸ್ಲಾಬ್‍ಗಳನ್ನು ಒಂದೇ ಹಂತಕ್ಕೆ ಸೀಮಿತಗೊಳಿಸಲಾಗಿದೆ. ಎಲ್.ಟಿ.(ಲೋ ಟೆನ್ಷನ್) ಗ್ರಾಹಕ ಪ್ರವರ್ಗಗಳಲ್ಲಿದ್ದ ಮಂಜೂರಾತಿ ವಿದ್ಯುತ್ ಹಂತಗಳನ್ನು ತೆಗೆದುಹಾಕುವ ಮೂಲಕ ಸಂಕ ರಚನೆಯನ್ನು ಸರಳೀಕರಿಸಲಾಗಿದೆ.

ಪರಿಷ್ಕೃತ ದರದ ಅನ್ವಯ, 2025-26ನೆ ಸಾಲಿನ ಎಲ್.ಟಿ. ಗ್ರಾಹಕ ಪ್ರವರ್ಗಗಳಲ್ಲಿ ಗೃಹ ಬಳಕೆ ಬಳಸುವ ವಿದ್ಯುತ್‍ನ ಸ್ಥಿರ ಶುಲ್ಕ(ಫಿಕ್ಸ್ ಚಾರ್ಜ್) 145 ರೂ.ಗಳಾಗಿದ್ದು, ಬಳಕೆ ದರವು ಪ್ರತಿ ಯೂನಿಟ್‍ಗೆ 580 ಪೈಸೆಯಾಗಿರುತ್ತದೆ. ಖಾಸಗಿ ಸಂಸ್ಥೆಗಳಲ್ಲಿ(ಶಾಲೆ, ಆಸ್ಪತ್ರೆ) ಸ್ಥಿರ ಶುಲ್ಕ 190 ರೂ.ಗಳಾಗಿದ್ದು, ಬಳಕೆ ದರವು ಪ್ರತಿ ಯೂನಿಟ್‍ಗೆ 675 ಪೈಸೆಯಾಗಿರುತ್ತದೆ.ವಾಣಿಜ್ಯ ಬಳಕೆಯಲ್ಲಿ ಸ್ಥಿರ ಶುಲ್ಕ 215 ರೂ.ಗಳಾಗಿದ್ದು, ಬಳಕೆ ದರವು ಪ್ರತಿ ಯೂನಿಟ್‍ಗೆ 700 ಪೈಸೆಯಾಗಿರುತ್ತದೆ. ಕೈಗಾರಿಕೆಯಲ್ಲಿ ಸ್ಥಿರ ಶುಲ್ಕ 150 ರೂ.ಗಳಾಗಿದ್ದು, ಬಳಕೆ ದರವು ಪ್ರತಿ ಯುನಿಟ್ ಗೆ 450 ಪೈಸೆಯಾಗಿರುತ್ತದೆ.

ಎಚ್.ಟಿ.(ಹೈಟೆನ್ಷನ್) ಗ್ರಾಹಕ ಪ್ರವರ್ಗಗಳ ಕೈಗಾರಿಕೆಯಲ್ಲಿ ಸ್ಥಿರ ಶುಲ್ಕ 345 ರೂ.ಗಳಾಗಿದ್ದು, ಬಳಕೆ ದರವು ಪ್ರತಿ ಯೂನಿಟ್‍ಗೆ 6.60 ರೂ., ವಾಣಿಜ್ಯ ಬಳಕೆಯಲ್ಲಿ ಸ್ಥಿರ ಶುಲ್ಕ 370ರೂ ಗಳಾಗಿದ್ದು, ಬಳಕೆ ದರವು ಪ್ರತಿ ಯೂನಿಟ್‍ಗೆ 5.95 ರೂ., 2026-27 ಹಾಗೂ 2027-28ನೆ ಸಾಲಿನಲ್ಲಿ ವಿದ್ಯುತ್ ಬಳಕೆಯ ದರಗಳು ಹೆಚ್ಚಳವಾಗಲಿವೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ