For the best experience, open
https://m.kannadavani.news
on your mobile browser.
Advertisement

Karnataka :ಡೀಸೆಲ್ ದರ ಏರಿಕೆ ಮಾಡಿದ ರಾಜ್ಯ ಸರ್ಕಾರ 

ಇಂದಿನಿಂದಲೇ ಜಾರಿಗೆ ಬರುವಂತೆ ಡೀಸೆಲ್ ಮೇಲಿನ ಮಾರಾಟ ತೆರಿಗೆ ದರ ಶೇ.21.17ರಷ್ಟು ಏರಿಕೆ ಮಾಡಲಾಗಿದೆ. ಹೀಗಾಗಿ ಡೀಸೆಲ್ ದರ ಪ್ರತಿ ಲೀಟರ್ ಗೆ ರೂ.2ರಷ್ಟು ಹೆಚ್ಚಳ ಆದಂತೆ ಆಗಲಿದೆ.ಈ ಸಂಬಂಧ ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
01:45 PM Apr 02, 2025 IST | ಶುಭಸಾಗರ್
karnataka  ಡೀಸೆಲ್ ದರ ಏರಿಕೆ ಮಾಡಿದ ರಾಜ್ಯ ಸರ್ಕಾರ 

Advertisement

Karnataka :ಡೀಸೆಲ್ ದರ ಏರಿಕೆ ಮಾಡಿದ ರಾಜ್ಯ ಸರ್ಕಾರ

Bangalur: ಹಾಲಿನ ದರ ವಾಯ್ತು, ಕರೆಂಟ್ ಬಿಲ್ ಆಯ್ತು ಇದೀಗ ರಾಜ್ಯ ಸರ್ಕಾರದಿಂದ ಜನತೆಗೆ ಡಿಸೆಲ್ ದರದ ಏರಿಕೆಯ ಮತ್ತೊಂದು ಶಾಕ್ ನೀಡಿದೆ.

ಇಂದಿನಿಂದಲೇ ಜಾರಿಗೆ ಬರುವಂತೆ ಡೀಸೆಲ್ ಮೇಲಿನ ಮಾರಾಟ ತೆರಿಗೆ ದರ ಶೇ.21.17ರಷ್ಟು ಏರಿಕೆ ಮಾಡಲಾಗಿದೆ. ಹೀಗಾಗಿ ಡೀಸೆಲ್ ದರ ಪ್ರತಿ ಲೀಟರ್ ಗೆ ರೂ.2ರಷ್ಟು ಹೆಚ್ಚಳ ಆದಂತೆ ಆಗಲಿದೆ.ಈ ಸಂಬಂಧ ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಇದನ್ನೂ ಓದಿ:-Karnataka : ವಿದ್ಯುತ್ ದರ ಏರಿಗೆ ಮಾಡಿದ ರಾಜ್ಯ ಸರ್ಕಾರ! 

ದಿನಾಂಕ: 04-11-2021 ರ ಹಿಂದೆ ಡೀಸೆಲ್ ಮೇಲೆ ವಿಧಿಸಲಾಗುತ್ತಿದ್ದ ಕರ್ನಾಟಕ ಮಾರಾಟ ತೆರಿಗೆ ದರ ಶೇ 24ರಷ್ಟು ಇದ್ದು, ಅಂದಿನ ಮಾರಾಟ ದರ ಪ್ರತಿ ಲೀಟರಿಗೆ ರೂ. 92.03 ಇತ್ತು.ದಿನಾಂಕ - 15-06-2024 ರಂದು  ಕರ್ನಾಟಕ ರಾಜ್ಯ ಸರ್ಕಾರವು ಡೀಸೆಲ್ ಮೇಲೆ ವಿಧಿಸಲಾಗುತ್ತಿದ್ದ ಕರ್ನಾಟಕ ಮಾರಾಟ ತೆರಿಗೆ ದರವನ್ನು ಶೇ.18.44ಗೆ ಅಧಿಸೂಚನೆಯನ್ನು ನೀಡಿರುತ್ತದೆ ಎಂದಿದೆ.

ಇದನ್ನೂ ಓದಿ:-Karnataka : ಹಾಲಿನ ದರದ ಜೊತೆ ಮೊಸರಿನ ದರ ಹೆಚ್ಚಳ – ಈಗೆಷ್ಟು ದರ ವಿವರ ನೋಡಿ

ದಿನಾಂಕ: 31-03-2025 ರಂತೆ ಪ್ರತಿ ಲೀಟರಿಗೆ ಡೀಸೆಲ್‌ ಮಾರಾಟ ದರವು ನೆರೆಯ ರಾಜ್ಯಗಳಲ್ಲಿ ಈ ಕೆಳಕಂಡಂತೆ ಇರುತ್ತದೆ ಎಂದು ತಿಳಿಸಿದೆ.

ಬೆಂಗಳೂರು - .89.02

ಹೊಸೂರು (ತಮಿಳುನಾಡು)- ರೂ. 94.42

ಕಾಸರಗೋಡು (ಕೇರಳ)- ರೂ.95.66

ಅನಂತಪುರ (ಆಂಧ್ರಪ್ರದೇಶ)- ರೂ.97.35

ಹೈದರಾಬಾದ್' (ತೆಲಂಗಾಣ) - ರೂ.95.70

ಕಾಗಲ್ (ಮಹಾರಾಷ್ಟ್ರ) - ರೂ.91.07

ಸಕ್ಷಮ ಪ್ರಾಧಿಕಾರದ ಅನುಮೋದನೆಯ ನಂತರ ಡೀಸೆಲ್ ಮೇಲೆ ವಿಧಿಸಲಾಗುತ್ತಿರುವ ಕರ್ನಾಟಕ ಮಾರಾಟ ತೆರಿಗೆ ದರವನ್ನು ದಿನಾಂಕ: 01-04-2025 ರಿಂದ ಜಾರಿಗೆ ಬರುವಂತೆ ಶೇ 21.17ಕ್ಕೆ ಏರಿಸಲಾಗಿದೆ. ಇದರಿಂದಾಗಿ ಪ್ರತಿ ಲೀಟರಿಗೆ ರೂ 2ರಷ್ಟು ಏರಿಕೆಯಾಗಿ, ಮಾರಾಟ ದರವು ರೂ. 91.02 ಆಗುತ್ತದೆ. ಆದರೂ ಸಹ ರಾಜ್ಯದಲ್ಲಿನ ಪರಿಷ್ಕೃತ ಮಾರಾಟ ದರವು, ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇರುತ್ತದೆ ಎಂಬುದಾಗಿ ತಿಳಿಸಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ