Bhatkal| ಗರ್ಭಿಣಿ ಹಸು ಹ** ಮಾಡಿ ಕರುವಿನ ಬ್ರೂಣ ಎಸೆದ ಕಿರಾತಕರು
Bhatkal| ಗರ್ಭಿಣಿ ಹಸು ಹ** ಮಾಡಿ ಕರುವಿನ ಬ್ರೂಣ ಎಸೆದ ಕಿರಾತಕರು
ಉತ್ತರ ಕನ್ನಡ (uttara kannda) ಜಿಲ್ಲೆಯ ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ಹಸು ಹ*** ಮಾಡಿದ ಘಟನೆ ಮಾಸುವ ಮುಂಚೆಯೇ ಗೋ ಹಂತಕರು ಇದೀಗ ಭಟ್ಕಳದಲ್ಲೂ ಅದೇ ಮಾದರಿಯ ಹ*** ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಭಟ್ಕಳ ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಕುಕನೀರ್ ವೆಂಕಟಾಪುರ ಹೊಳೆಯ ದಂಡೆ ಮೇಲೆ ಗರ್ಭಿಣಿ ಹಸುವನ್ನು ಹ*** ಗೈದು ಗೋ ಭಕ್ಷಕರು ಅದರ ಅಂಗಾಂಗ ಹಾಗೂ ಹೊಟ್ಟೆಯಲ್ಲಿರುವ ಕರುವಿನ ಬ್ರೂಣವನ್ನು ಎಸೆದು ಹೋಗಿರುವುದು ಬೆಳಕಿಗೆ ಬಂದಿದೆ.

ಯಾರೋ ಗೋ ಭಕ್ಷಕರು ಜಾನುವಾರುವನ್ನು ಹಿಂಸಾತ್ಮವಾಗಿ ವಧೆ ಮಾಡಿ ಅದರ ಅಂಗಭಾಗಗಳನ್ನು ಮತ್ತು ಹೊಟ್ಟೆಯಲ್ಲಿರುವ ಕರುವಿನ ಬ್ರೂಣವನ್ನು ವೆಂಕಟಾಪುರ ಕುಕ್ಕನೀರ ಹೊಳೆಯ ದಂಡೆ ಮೇಲೆ ಗೋಣಿ ಚೀಲದಲ್ಲಿ ಸುತ್ತಿ ಎಸೆದು ಹೋಗಿದ್ದಾರೆ.
ಬೀದಿ ನಾಯಿಯೊಂದು ಚೀಲವನ್ನು ಹರಿಯುವ ವೇಳೆ ಘಟನೆ ಬೆಳಕಿಗೆ ಬಂದಿದೆ.ಬಳಿಕ ವಿಷಯ ತಿಳಿದು ಭಟ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
